ಶಿರಸಿಃ ಕ್ಷತ್ರೀಯ ಮರಾಠಾ ಹಾಗೂ ಆ ಸಮುದಾಯದ ಉಪ ಪಂಗಡಗಳಾದ ಕೊಂಕಣ ಮರಾಠಾ, ಅರೆಮರಾಠಾ, ಸಮುದಾಯಗಳ ಗುರು ಪೀಠವಾಗಿರುವ ಬೆಂಗಳೂರಿನ ಗವಿಪುರಂ ನಲ್ಲಿರುವ ಗೋಸಾವಿ ಸಂಸ್ಥಾನ ಮಠದ ಪೀಠಾಧಿಕಾರಿಗಳು (ಮಠಾಧೀಶರಾದ) ಪೂಜ್ಯ ವೇದಾಂತಾಚಾರ್ಯ ಶ್ರೀ ಗಾನಯೋಗಿ ಶ್ರೀ ಮಂಜುನಾಥ ಮಹಾರಾಜರು ಇತ್ತೀಚೆಗೆ ವಾರಣಾಸಿಯಲ್ಲಿ ನಡೆದ ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ ಅದ್ವೈತ ವೇದಾಂತದಲ್ಲಿ ಅಧ್ಯಯನ ಮಾಡಿ ಎರಡು ಚಿನ್ನದ ಪದಕಗಳಿಗೆ ಭಾಜನರಾಗಿದ್ದಾರೆ.
ಇವರು ಮೂಲತಃ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಬಿ.ಕೆ. ಹಳ್ಳಿ ಗ್ರಾಮದವರಾಗಿದ್ದಾರೆ.ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಇವರು ಇವರ ಆದ್ಯಾತ್ಮಿಕ ಶಿಕ್ಷಣ ಮಾರ್ಗದರ್ಶನ ಮತ್ತು ಸಂಸ್ಕಾರ ಸರ್ವರಿಗೂ ಸಿಕ್ಕು ಉತ್ತಮ ಸನ್ಮಾರ್ಗದಲ್ಲಿ ಮುನ್ನಡೆಯುವಂತಾಗಲಿ ಎಂದು ತಿಳಿಸಿದ್ದಾರೆ.
ಇದರಿಂದ ಜಿಲ್ಲೆಯ ಮರಾಠಾ ಸಮುದಾಯ ಹಾಗೂ ಆ ಸಮುದಾಯದ ಉಪ ಪಂಗಡದವರಿಗೆ ತೀವ್ರ ಸಂತಸ ಉಂಟಾಗಿದೆ ಎಂದು ಜಿಲ್ಲೆಯ ಮರಾಠಾ ಸಮುದಾಯದ ಮುಖಂಡರಾದ ಶ್ರೀ ಪಾಂಡುರಂಗ ವಿ. ಪಾಟೀಲ ತಿಳಿಸಿದ್ದಾರೆ.