ಶಿರಸಿ: ನಗರದ ಝೂ ಸರ್ಕಲ್ ಬಳಿಯ ಆಲೇಸರ ರಸ್ತೆಯಲ್ಲಿ ವ್ಯಕ್ತಿಯೋರ್ವನನ್ನು ದುಷ್ಕರ್ಮಿಗಳು ಚಾಕುವಿನಿಂದ ಇರಿದು ಕೊಲೆ ಪ್ರಯತ್ನ ನಡೆಸಿದ ಘಟನೆ ಇಂದು ನಡೆದಿದೆ.
ತರಕೇಶ್ವರ ಹನುಮಂತ ತಿಳವಳ್ಳಿ, ಹಾನಗಲ್ ಎಂಬಾತನೇ ಚೂರಿ ಇರಿತಕ್ಕೆ ಒಳಗಾದವನು. ಘಟನೆ ನಡೆದ ತಕ್ಷಣದಲ್ಲಿ ಸ್ಥಳೀಯರು ಆತನನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಸ್ಥಳಕ್ಕೆ ಎಡಿಶನಲ್ ಎಸ್.ಪಿ ಬದರಿನಾಥ, ಡಿಎಸ್ಪಿ ರವಿ ನಾಯ್ಕ, ಸಿಪಿಐ ರಾಮಚಂದ್ರ ನಾಯಕ ಭೇಟಿ ನೀಡಿದ್ದು, ಶಿರಸಿ ನಗರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ. ಪಿಎಸೈ ರಾಜಕುಮಾರ ಅವರಿಂದ ತನಿಖೆ ತೀವ್ರಗೊಂಡಿದ್ದು, ಆರೋಪಿ ಹಿಡಿಯಲು ನಾಲ್ವರು ಪಿಎಸೈ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಿ ತನಿಖೆ ನಡೆಸುತ್ತಿದ್ದಾರೆ.