ಮುಂಡಗೋಡ: ಕೋವಿಡ್ ಮುನ್ನೆಚ್ಚರಿಕೆ ಕ್ರಮವಾಗಿ ತಾಲೂಕಿನ ಸಾಲಗಾಂವ ಗ್ರಾಮದ ಬಾಣಂತಿದೇವಿ ಜಾತ್ರಾ ಮಹೋತ್ಸವವು ಜನೇವರಿ 14 ಹಾಗೂ 15 ರಂದು ಸಾಂಕೇತಿಕವಾಗಿ ನಡೆಸಲು ಗ್ರಾಮಸ್ಥರು ಹಾಗೂ ಸಮಿತಿಯವರು ನಿರ್ಧರಿಸಿದ್ದಾರೆ.
ಶಿರಸಿ-ಹುಬ್ಬಳ್ಳಿ ರಾಜ್ಯ ಹೆದ್ದಾರಿಗೆ ತಾಗಿರುವ ತಾಲೂಕಿನ ಸಾಲಗಾಂವ ಬಳಿಯ ವಿಶಾಲವಾದ ಬ್ರಹತ್ ಕೆರೆಯ ದಡದಲ್ಲಿ ಬಾಣಂತಿದೇವಿ ದೇವಸ್ಥಾನವಿದ್ದು ಪ್ರತಿವರ್ಷವೂ ಸಂಕ್ರಮಣಕ್ಕೆ ದೇವಿಯ ಜಾತ್ರೆಯನ್ನು ಐದು ದಿನಗಳ ಕಾಲ ಅದ್ಧೂರಿಯಾಗಿ ನಡೆಸಲಾಗುತ್ತದೆ. ಈ ಜಾತ್ರೆಯೂ ಹೊಸವರ್ಷ ಆರಂಭವಾದ ಮೇಲೆ ತಾಲೂಕಿನಲ್ಲಿ ಜರುಗುವ ಪ್ರಥಮ ಜಾತ್ರೆಯಾಗಿದೆ.
ಗ್ರಾಮೀಣ ಪ್ರದೇಶಗಳಲ್ಲಿ ನಡೆಯುವ ಜಾತ್ರೆ-ಹಬ್ಬಗಳು ಅಲ್ಲಿನ ಜನತೆಯನ್ನು ಒಂದಡೆ ಸೇರಿಸಿ ಸಮನ್ವಯತೆನ್ನು ತೋರಿಸುತ್ತವೆ ಅದರಂತೆ ಬಾಣಂತಿದೇವಿ ಜಾತ್ರೆ ಸಾಲಗಾಂವ ಗ್ರಾಮಕ್ಕಷ್ಟೆ ಸೀಮಿತವಾಗದೆ ಅಕ್ಕಪಕ್ಕದಲ್ಲಿರುವ ಗ್ರಾಮಗಳಾದ ತುಂಬರಗಿ, ಅಜ್ಜಳ್ಳಿ, ಹೊಸಕೊಪ್ಪ, ಚಿಗಳ್ಳಿ, ಕಾವಲಕೊಪ್ಪ, ಗಣೇಶಪುರ, ಹಿರಳ್ಳಿ. ಗ್ರಾಮಗಳ ಜನರು ತಮ್ಮದೆ ಗ್ರಾಮದ ಜಾತ್ರೆಯಂತೆ ಆಚರಿಸುತ್ತಾರೆ. ಎಲ್ಲರ ಮನೆಗಳಲ್ಲು ಜಾತ್ರೆಯ ಸಂಭ್ರಮ ಕಂಡು ಬರುತ್ತಿತ್ತು. ಆದರೆ ಕೋವಿಡ್ ಹಿನ್ನಲೆಯಲ್ಲಿ ಸರಕಾರವು ಯಾವೂದೆ ಜಾತ್ರೆ ಸಭೆ ಸಮಾರಂಭಗಳಿಗೆ ಅವಕಾಶ ನೀಡದ ಕಾರಣ ಸಾಂಕೇತಿವಾಗಿ ಧಾರ್ಮಿಕ ವಿಧಿ ವಿಧಾನಗಳ ಪ್ರಕಾರ ದೇವಿಗೆ ಪೂಜೆ ಸಲ್ಲಿಸಲು ಗ್ರಾಮಸ್ಥರು ಹಾಗೂ ಸಮಿತಿಯವರು ನಿರ್ಧರಿದ್ದಾರೆ.