ಮುಂಡಗೋಡ: ಕಾಲ ಬದಲಾಗಿದೆ. ವಿದ್ಯಾರ್ಥಿಗಳಿಗೆ ಕನ್ನಡದ ಜತೆ ಇಂಗ್ಲೀಷ ಜ್ಞಾನ ಬೇಕು ಈಗಿನ ಮಕ್ಕಳು ವಿಶ್ವದ ಆಸ್ತಿ. ಮಕ್ಕಳು ಇಂಗ್ಲೀಷ ಅಭ್ಯಾಸ ಮಾಡಬೇಕು ಇದು ಮಕ್ಕಳಿಗೆ ಪರಿಣಾಮಕಾರಿಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಹೇಳಿದರು.
ತಾಲೂಕಿನ ಚವಡಳ್ಳಿ ಗ್ರಾಮದ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಆಂಗ್ಲ ಮಾಧ್ಯಮ ಕೊಠಡಿಯನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು. ಗಂಡಸರಿಗಿಂತ ಹೆಣ್ಣು ಮಕ್ಕಳು ಕಲಿತರೆ ಉಪಯೋಗ. ಕುಟುಂಬಕ್ಕೆ ತಾಯಿಯಾಗಿ ಸಂಸ್ಕಾರ ನೀಡುತ್ತಾಳೆ. ಮಕ್ಕಳು ಚೆನ್ನಾಗಿ ಓದಿ ನಾಡಿಗೆ ಕೀರ್ತಿ ತರಬೇಕು. ನೀರಿನ ತೊಂದರೆ ಹೆಣ್ಣು ಮಕ್ಕಳಿಗೆ ಮಾತ್ರ ಗೊತ್ತು ಗಂಡಸರಿಗೆ ಗೊತ್ತಾಗುವುದಿಲ್ಲ. ಸಾಮಾನ್ಯವಾಗಿ ಎಲ್ಲ ಕಡೆಗಳಲ್ಲಿ ಕಾಂಕ್ರೀಟ್ ರಸ್ತೆಗಳಾಗಿವೆ. ಮುಖ್ಯಮಂತ್ರಿ ಬೊಮ್ಮಾಯಿ ಅವರ ನೇತೃತ್ವದಲ್ಲಿ ಮತ್ತಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತೇವೆ ಎಂದರು.
ವಾಕರಸಾ ಸಂಸ್ಥೆ ಅಧ್ಯಕ್ಷ ವಿ.ಎಸ್.ಪಾಟೀಲ ಮಾತನಾಡಿ, ಆರ್ಥಿಕವಾಗಿ ಹಿಂದುಳಿದವರಿಗೆ ಕೇಂದ್ರ ಸರ್ಕಾರ ಯಾವತ್ತೂ ಅನುದಾನದ ಕೊರತೆ ಮಾಡಿಲ್ಲ. ಗ್ರಾ.ಪಂ.ಸದಸ್ಯರು ಮತ್ತು ಗ್ರಾಮಸ್ಥರು ಅನುದಾನಗಳ ಸದುಪಯೋಗ ಪಡೆಯಬೇಕು ಆರ್ಥಿಕವಾಗಿ ಹಿಂದುಳಿದರೂ ಸರ್ಕಾರದಿಂದ ಅಭಿವೃದ್ಧಿ ಕಾರ್ಯ ಮಾತ್ರ ಕುಂಠಿತಗೊಂಡಿಲ್ಲ ಎಂದರು.
ತಾಲೂಕಿನ ಚವಡಳ್ಳಿ ಗ್ರಾಮದಲ್ಲಿ ಮತ್ತು ಬಾಚಣಕಿ ಗ್ರಾ.ಪಂ.ವ್ಯಾಪ್ತಿಯ ನ್ಯಾಸರ್ಗಿ ಗ್ರಾಮದಲ್ಲಿ ಜಲ ಜೀವನ ಮಿಷನ್ ಕಾಮಗಾರಿಗೆ ಸಚಿವರು ಭೂಮಿ ಪೂಜೆ ನೆರವೇರಿಸಿದರು.
ಚವಡಳ್ಳಿ ಗ್ರಾ.ಪಂ.ಅಧ್ಯಕ್ಷೆ ನೇತ್ರಾವತಿ ಬಿಸವಣ್ಣವರ, ವೈ.ಪಿ.ಪಾಟೀಲ, ಉಮೇಶ ಬಿಜಾಪುರ, ಅರ್ಜುನ ಶಿಂಗನಳ್ಳಿ, ಪರಶುರಾಮ ತಹಸೀಲ್ದಾರ್, ಪಿ.ಪಿ.ಪಾಟೀಲ, ಕೆಂಜೋಡಿ ಗಲಬಿ, ಗುಡ್ಡಪ್ಪ ಕಾತೂರ, ಎಂ.ಪಿ. ಕುಸೂರ, ಬಸವರಾಜ ನಡುವಿನಮನಿ, ಪ್ರದೀಪ ಚವ್ಹಾಣ, ತಾ.ಪಂ.ಇಒ ಪ್ರವೀಣ ಕಟ್ಟಿ, ಬಿಇಒ ವಿ.ವಿ.ನಡುವಿನಮನಿ ಇದ್ದರು. ಸ್ವಾತಿ ಮತ್ತು ಸಂಗಡಿಗರು ಸ್ವಾಗತ ಗೀತೆ ಹೇಳಿದರು. ನಿಂಗಜ್ಜ ಕೋಣನಕೇರಿ ಸ್ವಾಗತಿಸಿದರು. ಸುರೇಶ ಪೂಜಾರ ಕಾರ್ಯಕ್ರಮ ನಿರೂಪಿಸಿದರು.