ಮುಂಡಗೋಡ: ಕೇಂದ್ರ ಸರ್ಕಾರದ ಮಹತ್ವಾಕಾಕ್ಷೆ ಯೋಜನೆಯಾದ ಜಲ ಜೀವನ ಮಿಷನ್ ಯೋಜನೆಯನ್ನು ತಾಲೂಕಿನ ಕ್ಯಾಸಿನಕೇರಿ ಹಾಗೂ ಕುಸೂರ ಗ್ರಾಮದಲ್ಲಿ ಜಾರಿ ಮಾಡದಂತೆ ಅಲ್ಲಿನ ಗ್ರಾಮಸ್ಥರು ಒತ್ತಾಯಿಸಿದ ಘಟನೆ ಗುರುವಾರ ಜರುಗಿದೆ.
ತಾಲೂಕಿನ ಕ್ಯಾಸಿನಕೇರಿ, ಕುಸುರ, ಚವಡಳ್ಳಿ, ಹಾಗೂ ನ್ಯಾಸರ್ಗಿ ಗ್ರಾಮದಲ್ಲಿ ಜಲ ಜೀವನ ಮಿಷನ್ ಯೋಜನೆಯಡಿಯಲ್ಲಿ ಕಾಮಗಾರಿಯ ಉದ್ಘಾಟನೆಗೆಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಆಗಮಿಸಿದ್ದರು. ಆದರೆ ಎರಡು ಗ್ರಾಮಗಳಲ್ಲಿ ಮಾತ್ರ ಜಲಜೀವನ ಮಿಷನ್ ಯೋಜನೆ ಬೇಡವೇ ಬೇಡ ಈಗಾಗಲೇ ನಳಗಳ ಸಂಪರ್ಕವಿದೆ. ಸಾಕಷ್ಟು ನೀರು ಬರುತ್ತದೆ. ಯೋಜನೆಯ ಹೆಸರಿನಲ್ಲಿ ರಸ್ತೆ ಅಗೆದು ಹಾಳು ಮಾಡಿದರೆ ಮುಂದೆ ರಸ್ತೆ ದುರಸ್ಥಿ ಮಾಡಿ ಕೊಡುವರು ಯಾರು ಇರುವುದಿಲ್ಲ ಜನರಿಗೆ ಬೇಕಾದಂತ ಯೋಜನೆಗಳನ್ನು ಜಾರಿಗೆಗೊಳಿಸುವುದನ್ನು ಬಿಟ್ಟು ಜನರಿಗೆ ತೊಂದರೆ ಆಗುವಂತ ಯೋಜನೆಗಳನ್ನು ಏಕೆ ಜಾರಿಗೆ ಗೊಳಿಸುತ್ತಿರಿ ಎಂದು ಗ್ರಾಮಸ್ಥರು ಸಚಿವರನ್ನು ಪ್ರಶ್ನಿಸಿದರು.
ಇದರಿಂದ ಕಕ್ಕಾಬಿಕ್ಕಿಯಾದ ಸಚಿವ ಶಿವರಾಮ ಹೆಬ್ಬಾರ ಅವರು ಗ್ರಾಮಗಳ ಅಭೀವೃದ್ಧಿಗೆ ಇಷ್ಟೇಲ್ಲ ಅನುದಾನ ತಂದಿದ್ದೇನೆ. ಈ ಯೋಜನೆಯು ಒಂದು ಜನರಿಗೆ ಮೂಲ ಸೌಕರ್ಯ ಒದಗಿಸುವ ಯೋಜನೆಯಾಗಿದ್ದು ಇದನ್ನು ಜಾರಿಮಾಡಬೇಕಾಗಿತ್ತು ಎಂದರು. ಆದರೆ ಜನರು ಇದಕ್ಕೆ ಒಪ್ಪಲಿಲ್ಲ ಈ ಹಿಂದೆಯೆ ನಿಮಗೆ ಹಾಗೂ ಸಂಬದಿಸಿದ ಅಧಿಕಾರಿಗಳಿಗೆ ಮನವಿಯನ್ನು ನೀಡಿದ್ದೇವೆ ಈ ಯೋಜನೆ ಬಿಟ್ಟು ರಸ್ತೆ, ಚರಂಡಿ, ಹಾಗೂ ಸ್ಮಶಾನಗಳನ್ನು ಮಾಡಿಕೊಡಿ ಎಂದು ಹೇಳಿದರು.
ನಂತರ ಹತ್ತು ನಿಮಿಷಗಳ ಕಾಲ ಕುಳಿತ ಸಚಿವರು ಜನರ ಅಹವಾಲಗಳನ್ನು ಸ್ವೀಕರಿಸಿ ಜಲ ಜೀವನ ಮಿಷನ್ ಯೋಜನೆಯ ಅಡಿಗಲ್ಲು ಹಾಕದೆ ತೆರಳಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ರವಿಗೌಡ ಪಾಟೀಲ, ದೇವು ಪಾಟೀಲ, ಗುಡ್ಡಪ್ಪ ಕಾತೂರ, ನಿಂಗಜ್ಜಾ ಕೋಣನಕೇರಿ, ಕೆಂಜೋಡಿ ಗಲಬಿ, ಎಮ್.ಪಿ.ಕುಸೂರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.