ಶಿರಸಿ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಮಂತ್ರಾಲಯ ಶಿಕ್ಷಣ ಸಚಿವಾಲಯ ನವದೆಹಲಿ ಇವರಿಂದ ಆಯೋಜನೆಗೊಂಡ 100 ದಿನಗಳ ಓದುವ ಅಭಿಯಾನ ಕಾರ್ಯಕ್ರಮವನ್ನು ಶಿರಸಿ ಲಯನ್ಸ ಶಾಲೆಯ ಗ್ರಂಥಾಲಯದಲ್ಲಿ ಚಾಲನೆ ನೀಡಲಾಯಿತು.
ಶಾಲೆಯ ಮುಖ್ಯೋಪಾಧ್ಯಾಪಕ ಶಶಾಂಕ್ ಹೆಗಡೆ ಇವರು ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ಓದುವ ಬಗ್ಗೆ ಹಾಗೂ ಅದರ ಪ್ರಯೋಜನದ ಬಗ್ಗೆ ಮಾಹಿತಿ ನೀಡಿದರು. ಗ್ರಂಥಪಾಲಕ ರಾಘವೇಂದ್ರ ಹೊಸೂರ್ ಇವರು ವಿದ್ಯಾರ್ಥಿಗಳಿಗೆ ನಮ್ಮ ಶಾಲೆಯ ಗ್ರಂಥಾಲಯದಲ್ಲಿರುವ 7,000 ಕ್ಕೂ ಹೆಚ್ಚಿನ ಪುಸ್ತಕಗಳ ಬಗ್ಗೆ ಮಾಹಿತಿ ನೀಡಿದರು.
ದೈಹಿಕ ಶಿಕ್ಷಣ ಶಿಕ್ಷಕಿ ಚೇತನಾ ಪಾವಸ್ಕರ್ ವಿದ್ಯಾರ್ಥಿಗಳಿಗೆ ಕುಟುಂಬದ ಸದಸ್ಯರ ಬಗ್ಗೆ ಕಥೆಗಳನ್ನು ಹೆಣೆಯುವುದು, ಈ ಕಥೆ ಪುಸ್ತಕದಲ್ಲಿ ರಜಾದಿನಗಳು, ಜನ್ಮದಿನಗಳು, ವಿಶೇಷ ದಿನದ ಸವಿನೆನಪುಗಳ ಫೋಟೋ ಸಹಿತ ಮಾಹಿತಿಯನ್ನು ಅಭಿಯಾನದ ಮಾರ್ಗಸೂಚಿಯಂತೆ ಸಂಗ್ರಹಿಸಲು ತಿಳಿಸಿದರು.