
ಅಖಿಲ ಭಾರತೀಯ ವಿದ್ಯಾರ್ಥಿಯ ಪರಿಷತ್ ಶಿರಸಿ ವತಿಯಿಂದ 73ನೇ ಎ.ಬಿವಿ.ಪಿ ಸಂಸ್ಥಾಪನೆ ದಿನದ ಅಂಗವಾಗಿ ವೃದ್ಧಾಶ್ರಮಕ್ಕೆ ಆಹಾರ ಸಾಮಗ್ರಿ ಹಾಗೂ ಸ್ವಚ್ಛತಾ ಕಾರ್ಯಕ್ರಮ ಮಾಡಲಾಯಿತು. ಹಾಗೂ ಕಾರ್ಯಕರ್ತರು ತಮ್ಮ ಮನೆಯಲ್ಲಿ ಗಿಡ ನೆಡುವುದರ ಮೂಲಕ ವಿದ್ಯಾರ್ಥಿ ದಿವಸ್ ಆಚರಣೆ ಮಾಡಿದರು. ಜೂನ್ 5 ಕ್ಕೆ ಪ್ರಾರಂಭವಾದ ಆಕ್ಸಿಜನ್ ಚಾಲೆಂಜ್ ಅಭಿಯಾನದಲ್ಲಿ ಶಿರಸಿ ವಿಭಾಗದಲ್ಲಿ ಅಂದಾಜು 50,200 ಸಿಡ್ ಬಾಲ್ ಹಾಗೂ 30,800 ಗಿಡಗಳನ್ನು ನೆಡಲಾಗಿದೆ ಎಂದು ಪ್ರಾಂತಕಾರ್ಯಕಾರಣಿ ಸಮಿತಿ ಸದಸ್ಯ ಹಾಗೂ ಶಿರಸಿ ವಿಭಾಗ ಸಂಚಾಲಕ ಕಮಲಾಕರ ಮರಾಠಿ ತಿಳಿಸಿದರು.
ವಿದ್ಯಾರ್ಥಿ ದಿವಸ್ ಕಾರ್ಯಕ್ರಮದಲ್ಲಿ ಶಿರಸಿ ವಿಭಾಗ ಎಸ್‍ಎಫ್.ಡಿ ಪ್ರಮೋದ ಚಂದ್ರಶೇಖರ ಪ್ರಾಂತಕಾರ್ಯ ಕಾರಣಿ ಸದಸ್ಯ ಅಶ್ವತ್ಥ ಭಟ್ಟ ಶಿರಸಿ ಜಿಲ್ಲಾ ವಿದ್ಯಾರ್ಥಿನಿ ಪೂಣಿಮಾ ಗೌಡ ಹಾಗೂ ಶಿರಸಿ ವಿಭಾಗ ಸಂಚಾಲಕ ಕಮಲಾಕರ ಮರಾಠಿ ಕಾರ್ಯಕರ್ತರಾದ ಹರೀಶ ಗೌಡ ಉಪಸ್ಥಿತರಿದ್ದರು.