ಕುಮಟಾ: ಸರ್ಕಾರಿ ಕಚೇರಿ ಎದುರಿನ ಅಂಗಡಿಯೊಂದರ ಸಿಸಿ ಕ್ಯಾಮರಾವನ್ನು ಧ್ವಂಸ ಮಾಡಿ ಕಳುವು ಮಾಡಲು ಯತ್ನಿಸುತ್ತಿರುವ ಪ್ರಕರಣವೊಂದು ಗುರುವಾರ ಬೆಳಕಿಗೆ ಬಂದಿದೆ.
ಹೊನ್ನಾವರ ತಾಲೂಕಿನ ಕಡ್ನೀರು ಗ್ರಾಮದ ನಿವಾಸಿ ಮಾರುತಿ ಪ್ರಭು ಸಿಸಿ ಕ್ಯಾಮರಾವನ್ನು ಧ್ವಂಸ ಮಾಡುತ್ತಿದ್ದ ವ್ಯಕ್ತಿಯಾಗಿದ್ದು, ಸಿಸಿ ಕ್ಯಾಮರಾಗಳಿಗೆ ಕಲ್ಲು ಎಸೆಯುತ್ತಿರುವ ದೃಶ್ಯಾವಳಿಗಳಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಕುರಿತು ಕುಮಟಾ ಪೊಲೀಸ್ ಠಾಣೆಯಲ್ಲಿ ಅಂಗಡಿ ಮಾಲೀಕ ವಿಶ್ವನಾಥ ಗಣೇಶ ನಾಯ್ಕ ಅವರು ದೂರು ನೀಡಿದ್ದು, ಪೆÇಲೀಸರು ವಿಚಾಣೆ ನಡೆಸುತ್ತಿದ್ದಾರೆ. ಗುರುವಾರ ರಾತ್ರಿ ಬೈಕ್ ಮೂಲಕ ಬಂದ ಇಬ್ಬರು ವ್ಯಕ್ತಿಗಳಲ್ಲಿ ಓರ್ವ ಮಾರುತಿ ಪ್ರಭು ಎಂದು ಗುರುತಿಸಲಾಗುದೆ.
ಅಕ್ರಮ ದಂಧೆಗೆ ಅಡ್ಡಿಯಾಯಿತೆ ಕ್ಯಾಮರಾ: ಇನ್ನು ಸಾಂತಗಲ್ ಅರಣ್ಯ ಇಲಾಖೆ ಎದುರು ವಿಶ್ವನಾಥ ಅವರ ಅಂಗಡಿ ಇದ್ದು ತಮ್ಮ ಅಂಗಡಿಯ ಭದ್ರತೆಗಾಗಿ ಸಿಸಿ ಕ್ಯಾಮರಾ ಅಳವಡಿಸಿದ್ದರು. ಇದರಿಂದ ಅಕ್ರಮ ದಂಧೆ ನಡೆಸುವವರಿಗೆ ತೀವ್ರ ತೊಂದರೆ ಆಗಿದ್ದಲ್ಲದೆ ಸಂಪೂರ್ಣ ಚಿತ್ರಣ ಈ ಸಿಸಿ ಕ್ಯಾಮರಾದಲ್ಲಿ ಸೆರೆಯಾಗುತ್ತಿತ್ತು. ಇದರಿಂದಾಗಿ ಅಕ್ರಮ ದಂಧೆಗೆ ಹಿನ್ನಡೆಯಾಗಲಿದೆ ಎನ್ನುವ ಕಾರಣಕ್ಕೆ ಈ ರೀತಿಯ ಕೃತ್ಯ ಎಸಗಲಾಗಿದೆ ಎಂದು ಅಂಗಡಿಯ ಮಾಲಿಕ ವಿಶ್ವನಾಥ ನಾಯ್ಕ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ. ಒಟ್ಟಾರೆ ಇಂತಹ ಕಿಡಿಗೇಡಿಗಳ ಕೃತ್ಯಕ್ಕೆ ಪೆÇಲೀಸರು ಯಾವ ರೀತಿಯಲ್ಲಿ ಕ್ರಮ ಕೈಗೊಳ್ತಾರೆ ಅನ್ನೋದನ್ನ ಕಾದುನೋಡಬೇಕಿದೆ