ಕುಮಟಾ : ಜಿಲ್ಲಾಡಳಿತ ಉತ್ತರ ಕನ್ನಡ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ನಿರ್ಮಾಣವಾದ ತಾಲೂಕಿನ ಹೆಗಡೆ ಗ್ರಾಮದ ಕಲ್ಕೋಡನ ಅಂಗನವಾಡಿ ಕಟ್ಟಡವನ್ನು ಶಾಸಕ ದಿನಕರ ಶೆಟ್ಟಿ ಉದ್ಘಾಟಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕರು ಕಲ್ಕೋಡ ಮತ್ತು ತಣ್ಣೀರಕುಳಿ ಹಾಲಕ್ಕಿ ಸಮಾಜದವರು ನಾನು ಭಾಗದಲ್ಲಿ ಬಂದಾಗ ತುಂಬಾ ಪ್ರೀತಿ ವಿಶ್ವಾಸ ವ್ಯಕ್ತಪಡಿಸುತ್ತಾರೆ. ನಮ್ಮ ಹಾಲಕ್ಕಿ ಸಮಾಜದ ವಿದ್ಯಾರ್ಥಿಗಳು ಈಗೀಗ ತುಂಬಾ ವಿದ್ಯಾಭ್ಯಾಸ ಮಾಡುತ್ತಿದ್ದಾರೆ ನಮ್ಮ ಹಾಲಕ್ಕಿ ತಾಯಂದಿರೂ ಕೂಡ ಮುಂದೆ ಬರುವಂತಾಗಬೇಕು ಈಗಾಗಲೇ ನಮ್ಮ ಮೋದಿಯವರ ಸರ್ಕಾರ ಹಾಗೂ ರಾಜ್ಯದಲ್ಲಿ ಬೊಮ್ಮಾಯಿ ಯವರ ಸರ್ಕಾರ ಬಡ ಮಹಿಳೆಯರಿಗೆ ಮಾತೃ ಪೂರ್ಣ ಮಾತೃ ವಂದನ ಯೋಜನೆ ಮೂಲಕ ಧನ ಸಹಾಯ ನೀಡುವ ಕಾರ್ಯಕ್ರಮ ಮಾಡುತ್ತಿದೆ. ಮಹಿಳೆಯರಿಗೆ ಉಜ್ವಲ ಗ್ಯಾಸ್ ಉಚಿತವಾಗಿ ನೀಡಿದೆ ನಮ್ಮ ಕಾರ್ಯಕರ್ತರು ಅದನ್ನು ಮಾಡಿಸಿ ತಮ್ಮ ಮನೆಗೆ ತಲುಪಿಸುವ ಕೆಲಸ ಮಾಡಿದ್ದಾರೆ.
ಹಾಲಕ್ಕಿ ಸಮಾಜದವರಿಗೆ ಸ್ವಂತ ಕಟ್ಟಡ ಇರಬೇಕು ಅನುಕೂಲ ಆಗಬೇಕು ಎನ್ನುವ ದೃಷ್ಟಿಯಿಂದ ದೀವಗಿ ಯಲ್ಲಿ ನನ್ನ ಸ್ವಂತ ಜಾಗ ವನ್ನು ಕೊಟ್ಟು ನಂತರ ಕಟ್ಟಡಕ್ಕಾಗಿ ಸರ್ಕಾರ ದಿಂದ 1 ಕೋಟಿ 20 ಲಕ್ಷ ಕೊಡಿಸಿ ಭವ್ಯ ಕಟ್ಟಡ ನಿರ್ಮಾಣ ಆಗೋದಕ್ಕೆ ನನ್ನ ಪ್ರಯತ್ನ ಕೂಡ ತುಂಬಾ ಮಾಡಿದ್ದೇನೆ. ನಮ್ಮ ಸರ್ಕಾರ ಮಕ್ಕಳಿಗೆ ತುಂಬಾ ಪೌಷ್ಠಿಕ ಆಹಾರ ನೀಡುತ್ತಿದೆ.
ಶೆಂಗಾ ಚಿಕ್ಕ, ಕಡಲೆಕಾಳು, ಹಾಲು, ಮೊಟ್ಟೆ ಹೀಗೆ ಅವರ ಆರೋಗ್ಯ ಬೆಳವಣಿಗೆ ಹೆಚ್ಚಲು ಹಾಗೂ ಉತ್ಸಾಹ ದಿಂದ ಕಲಿಯಲು ಪ್ರೋತ್ಸಾಹ ನೀಡುತ್ತಿದೆ. ಕಲ್ಕೋಡ ಗೆ ಸಂಸದರ ನಿಧಿಯಿಂದ ಹಾಗೂ ನಮ್ಮ ಫಂಡ್ ನಿಂದ ಉತ್ತಮ ರಸ್ತೆ ನಿರ್ಮಾಣ ಮಾಡಲಾಗಿದೆ ಇನ್ನೂ ಮುಂದೆ ಹೊಳೆಯತನಕ ಅಂಬಿಗರ ಕೇರಿ ಗೆ ಹೋಗಲು ರಸ್ತೆ ಹಾಗೂ ಬ್ರಿಜ್ ಸದ್ಯದಲ್ಲೇ ಆಗಲಿದೆ ಎಂದರು.
ನೆರೆ ಬಂದ ಸಮಯದಲ್ಲಿ ಹೆಗಡೆಯಲ್ಲಿ ನೀರು ನುಗ್ಗಿದ ಮನೆಗಳಿಗೆ ಹತ್ತು ಸಾವಿರ ರೂಪಾಯಿಯಂತೆ 914 ಮನೆಗಳಿಗೆ ಹಣ ಅವರ ಖಾತೆಗೆ ಜಮಾ ಮಾಡಿಸುವ ಕೆಲಸ ಮಾಡಿದ್ದೇನೆ. ನೆರೆ ಬಂದಾಗ ಹಣ ನೀಡುವ ಕೆಲಸ ನಾನು ಶಾಸಕನಾದ ನಂತರ ಆಗಿದೆ ಹಿಂದೆ ಇಷ್ಟು ವರ್ಷ ಯಾರೂ ನೀಡಿರಲಿಲ್ಲ ಎನ್ನುವುದು ನೆನಪಿನಲ್ಲಿ ಇಟ್ಟುಕೊಳ್ಳಬೇಕು ಎಂದರು ಹೀಗೆ ಅನೇಕ ಹೊಸ ರಸ್ತೆಗಳು ಹೆಗಡೆಯಲ್ಲಿ ನನ್ನ ಈಗಿನ ಅವಧಿಯಲ್ಲಿ ಆಗಿರುವುದು ತಾವು ನೋಡಬಹುದು ಕುಡಿಯುವ ನೀರಿನ ಯೋಜನೆ ಕೂಡ ಮಾಡಲಾಗುವುದು ಎಂದರು.
ನಂತರ ಕಲ್ಕೊಡ ವಾರ್ಡ್ ಸದಸ್ಯ ಬಿ ಜಿ ಶಾನಭಾಗ ಪಂಚಾಯತ ಉಪಾಧ್ಯಕ್ಷ ಶಾಂತಾರಾಮ ನಾಯ್ಕ ಹಾಗೂ ಅಧ್ಯಕ್ಷತೆ ವಹಿಸಿದ್ದ ಗ್ರಾಮ ಪಂಚಾಯತ ಅಧ್ಯಕ್ಷೆ ಚಂದ್ರಕಲಾ ಪಟಗಾರ ಮಾತನಾಡಿ ಅಂಗನವಾಡಿ ಕಟ್ಟಡ ಉದ್ಘಾಟನೆ ಗೊಂಡಿಧ್ದು ಮಕ್ಕಳು ಚೆನ್ನಾಗಿ ಅಭ್ಯಾಸ ಮಾಡಿ ಉತ್ತಮ ಶಿಕ್ಷಣ ಪಡೆಯುವಂತಾಗಲಿ ಎಂದು ಶುಭ ಹಾರೈಸಿದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ನಾಗರತ್ನ ನಾಯಕ ಮೊದಲು ಪ್ರಾಸ್ತಾವಿಕ ಮಾತನಾಡಿ ಎಲ್ಲರನ್ನೂ ಸ್ವಾಗತಿಸಿದರು. ಸುಧಾ ಹೆಗಡೆ ಕೊನೆಯಲ್ಲಿ ವಂದಿಸಿದರು. ಭಾರತಿ ಪಟಗಾರ ನಿರೂಪಿಸಿದರು.
ವೇದಿಕೆಯಲ್ಲಿ ಕಲ್ಕೋಡನ ಹಾಲಕ್ಕಿ ಸಮಾಜದ ಯಜಮಾನರಾದ ಲಕ್ಷ್ಮಣ ಗೌಡರು, ಗ್ರಾ ಪಂ ಸದಸ್ಯರಾದ ಶಿವಾನಂದ ಪಟಗಾರ, ರಾಮಚಂದ್ರ ಪಟಗಾರ, ಮಂಜು ನಾಯ್ಕ, ವಿದ್ಯಾಲಕ್ಷ್ಮಿ ಗೌಡ, ನಾಗವೇಣಿ ಮುಕ್ರಿ, ಕಲ್ಕೋಡು ಪ್ರಾಥಮಿಕ ಶಾಲೆ ಮುಖ್ಯಾಧ್ಯಾಪಕ ರಾಜು ನಾಯ್ಕ , ಶಿಶು ಅಭಿವೃದ್ಧಿ ಯೋಜನಾಧಿಕಾರಿ ನಾಗರತ್ನ ನಾಯಕ, ನಿರ್ಮಿತ ಕೇಂದ್ರದ ಅಧಿಕಾರಿ ಹರ್ಷ ಶೆಟ್ಟಿಗಾರ್ , ಗ್ರಾಮ ಲೆಕ್ಕಾಧಿಕಾರಿ ವಿನೋದ ರಾವ್, ಗ್ರಾ ಪಂ ಕಾರ್ಯದರ್ಶಿ ಕೇಶವ ನಾಯ್ಕ ಹಾಗೂ ಕಲ್ಕೋಡನ ಪ್ರಮುಖರಾದ ಶ್ರೀಧರ ಗೌಡ ಕಮಲಾಕರ ಗೌಡ ಹಾಗೂ ಇತರ ಗ್ರಾಮಸ್ಥರು ಉಪಸ್ಥಿತರಿದ್ದರು.