• first
    second
    third
    previous arrow
    next arrow
  • ಯುವ ಸಪ್ತಾಹ ಪ್ರಯುಕ್ತ ಯುವ ಸಂಘದ ವತಿಯಿಂದ ರಕ್ತದಾನ ಶಿಬಿರ

    300x250 AD

    ಕಾರವಾರ; ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರೂ ಯುವ ಕೇಂದ್ರ ಕಾರವಾರ,ಕಡಲ ಸಿರಿ ಯುವ ಸಂಘ, ಗಜಾನನ ಯುವಕ ಸಂಘ ಸಂಯುಕ್ತ ಆಶ್ರಯದಲ್ಲಿ ಗುರುವಾರದಂದು ಜಿಲ್ಲಾ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರ ನಡೆಯಿತು.


    ಕೊರೋನಾದ ಸಮಯದಲ್ಲಿ ರಕ್ತದಾನ ಮಾಡಲು ಜನರು ಹಿಂದೆಟು ಹಾಕುವ ದಿನಗಳಲ್ಲಿ. ಸ್ವಾಮಿ ವಿವೇಕಾನಂದರ ತತ್ವ, ಸಿದ್ಧಾಂತಗಳನ್ನು ಕಡಲ ಸಿರಿ ಯುವ ಸಂಘ ಹಾಗೂ ಗಜಾನನ ಯುವಕ ಸಂಘ ದವರು ಪಾಲನೆ ಮಾಡಿ ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡುವಂತೆ ಯುವ ಜನತೆ ಗೆ ತಿಳಿಸಿ ಹೇಳಿದರು. ಇವರ ಕರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲಾ ಆಸ್ಪತ್ರೆಯಲ್ಲಿ ಬಂದು ರಕ್ತದಾನ ಮಾಡಿದರು.

    300x250 AD


    ಈ ರಕ್ತದಾನ ಶಿಬಿರದಲ್ಲಿ ನೆಹರೂ ಯುವ ಕೇಂದ್ರದ ಯುವ ಅಧಿಕಾರಿ ಯಶ್ವಂತ್ ಯಾದವ್, ಕಡಲ ಸಿರಿ ಯುವ ಸಂಘದ ಉಪಾಧ್ಯಕ್ಷ ಅಭಿಷೇಕ ಕಳಸ, ಪ್ರಧಾನ ಕಾರ್ಯದರ್ಶಿ ಪ್ರಜ್ವಲ್ ಶೇಟ್, ಗಜಾನನ ಯುವ ಸಂಘದ ಅಧ್ಯಕ್ಷ ಸಿದ್ದೇಶ್ ಬಾಂದೇಕರ, ಉಪಾಧ್ಯಕ್ಷ ಸುಮೀತ ಮಾಳಸೇಕರ, ಪ್ರಧಾನ ಕಾರ್ಯದರ್ಶಿ ಆಕಾಶ ನಾಯ್ಕ,ಆರೋಗ್ಯ ಇಲಾಖೆಯ ಸಿಬ್ಬಂದಿಗಳು, ಯುವ ಸಂಘದ ಸದಸ್ಯರು ಉಪಸ್ಥಿತರಿದ್ದರು.

    Share This
    300x250 AD
    300x250 AD
    300x250 AD
    Back to top