ಶಿರಸಿ: ಆದರ್ಶ ಸುಗಮ ಸಂಗೀತ ಅಕಾಡೆಮಿಯ ಬೆಂಗಳೂರು ನೀಡಲ್ಪಟ್ಟ ನಿತ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಾಗೂ ಶಿರಸಿ ಕರೋಕೆ ಸ್ಟುಡಿಯೋದ ತರಬೇತುದಾರ ಶಿರಸಿ ರತ್ನಾಕರರಿಗೆ ಕರೋಕೆ ಬಳಗದ ಸರ್ವ ಸದಸ್ಯರೂ ಸೇರಿ ಜ.12 ರ ಸಂಜೆ ಶಿರಸಿಯ ಅರುಣೋದಯ ತರಬೇತಿಕೇಂದ್ರದಲ್ಲಿ ಅಭಿನಂದನೆ ಸಲ್ಲಿಸಿದರು.
ಅಭಿನಂದನಾ ವೇದಿಕೆಯಲ್ಲಿ ಜ್ಯೋತಿ ರತ್ನಾಕರ ದಂಪತಿಗಳು ಜೊತೆ ಶಿವಪ್ರಕಾಶ್ ನಾಯ್ಕ, ವಿ. ಪ್ರಕಾಶ್ ಹೆಗಡೆ ಯಡಳ್ಳಿ, ನೋಟರಿ ಸತೀಶ್ ನಾಯ್ಕ, ಡಾ. ಮಹೇಶ್ ಭಟ್ ಉಪಸ್ಥಿತರಿದ್ದರು.
ಅಭಿನಂದನಾ ಸಂದರ್ಭದಲ್ಲಿ ಕರೋಕೆ ಬಳಗದ ವನಿತೆಯರು ದಂಪತಿಗಳಿಗೆ ಆರತಿ ಬೆಳಗಿದರು. ಶಿರಸಿ ರತ್ನಾಕರಗೆ ಸಂದ ಪ್ರಶಸ್ತಿ ತಮಗೆಲ್ಲರಿಗೂ ಸಿಕ್ಕ ಗೌರವ, ಇಂಥ ಪ್ರತಿಭೆಯನ್ನ ಗುರುತಿಸಿದ ಆದರ್ಶ ಸುಗಮ ಸಂಗೀತ ಅಕಾಡೆಮಿಯ ಡಾ. ಕಿಕ್ಕೇರಿ ಕೃಷ್ಣ ಮೂರ್ತಿಯವರನ್ನು ಎಲ್ಲರೂ ಸ್ಮರಿಸಿಕೊಂಡರು. ಕಾರ್ಯಕ್ರಮವನ್ನು ಉಮಾಕಾಂತ ಗೌಡ ನಿರೂಪಿಸಿದರು ಸಂತೋಷ್ ಶೇಟ್ ಹಾಗೂ ವಿನಾಯಕ ಶೇಟ್ ಸ್ವಾಗತಿಸಿದರು. ಕಿರಣ್ ಬಿ ವಂದಿಸಿದರು. ದಿವ್ಯಾ ಶೇಟ್ ಹಾಗೂ ಸುಪ್ರಿಯಾ ನಾಯ್ಕ ಸಹಕರಿಸಿದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದ ಸಾಧಕರಾದ ಗಾನವಿ ಮೋಟಾರ್ಸ್’ನ ಗುರುಸ್ವಾಮಿ ಹಾಗೂ ಲೇಖಕಿ ಗಾಯತ್ರಿ ಹಾಗೂ ಮಂಜು ಇವರನ್ನೂ ಗೌರವಿಸಲಾಯಿತು.