
ಬೆಂಗಳೂರು: ರಸ್ತೆಯಲ್ಲಿ ಸಂಚರಿಸುವಾಗ ವಾಹನ ತಪಾಸಣೆ ಸಂದರ್ಭದಲ್ಲಿ ವಾಹನ ಸವಾರರು ಡಿಜಿಟಲ್ ರೂಪದಲ್ಲಿ ತಮ್ಮ ವಾಹನದ ದಾಖಲೆ ತೋರಿಸಲು ರಾಜ್ಯ ಸರ್ಕಾರ ಅನುಮತಿ ನೀಡಿದೆ.
ಪೋಲೀಸರ ತಪಾಸಣೆಯ ಸಂದರ್ಭದಲ್ಲಿ ಡಿಜಿಟಲ್ ದಾಖಲೆ ತೋರಿಸಬಹುದು ಈ ಕುರಿತಾಗಿ ಅವಕಾಶ ನೀಡಲಾಗಿದೆ ಎಂದು ಸಂಚಾರ ವಿಭಾಗದ ಜಂಟೀ ಪೋಲೀಸ್ ಆಯುಕ್ತ ಡಾ.ಬಿ.ಆರ್.ರವಿಕಾಂತೇಗೌಡ ಸ್ಪಷ್ಟಪಡಿಸಿದ್ದಾರೆ.
ಡಿಜಟಲ್ ಅಪ್ಲಿಕೇಷನ್ ಗಳಾದ ‘ಡಿಜಿ ಲಾಕರ್’ ಅಥವಾ ‘ಎಂಪರಿವಾಹನ್’ ಮೂಲಕ ಸಂಚಾರಕ್ಕೆ ಅಗತ್ಯವಾದ ದಾಖಲೆಗಳನ್ನು ಸೇವ್ ಮಾಡಿಟ್ಟುಕೊಂಡು ತಪಾಸಣೆ ವೇಳೆಗೆ ಅದನ್ನು ತೋರಿಸಬಹುದು. ಅಧಿಕಾರಿಗಳೂ ಸಹ ಅದನ್ನು ಸ್ಕ್ಯಾನ್ ಮಾಡಿ ಅಧಿಕೃತ ಎಂದು ಪರಿಗಣಿಸಬೇಕು. ಹಾಗೂ ಈ ಎರಡು ಅಪ್ಲಿಕೇಷನ್ ಗಳಲ್ಲಿ ಡಿಜಿಟಲ್‌ರೂಪದಲ್ಲಿರುವ ದಾಖಲೆಗಳನ್ನು ಸ್ವೀಕರಿಸಬಹುದು ಎಂದು ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ , ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವಾಲಯಗಳು ಸಹ ಸ್ಪಷ್ಟಪಡಿಸಿವೆ.
ಇದರಿಂದ ನಕಲಿ ದಾಖಲೆಗಳ ಹಾವಳಿ ತಪ್ಪಿಸಲು ಸಾಧ್ಯವಿದೆ. ಅಸಲಿದಾಖಲೆಗಳು ಕಳೆದು ಹೋಗುವ ಭಯವೂ ಇಲ್ಲ. ಪೋಲೀಸ್ ಸಿಬ್ಬಂದಿಗಳಿಗೂ ಈ ವ್ಯವಸ್ಥೆ ಅನುಕೂಲಕಾರಿ ಎಂದು ಅವರು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
ಕೃಪೆ:- ನ್ಯೂಸ್13