• first
  second
  third
  Slide
  previous arrow
  next arrow
 • ವಿರಳ ರಕ್ತದ ಗುಂಪು ಹೊಂದಿದವರ ಮಾಹಿತಿ ಸಂಗ್ರಹ; ಎಸ್. ಡಿ.ಎಂ. ಕಾಲೇಜಿನಲ್ಲಿ ಚಾಲನೆ

  300x250 AD

  ಹೊನ್ನಾವರ : ಯುವಾ ಬ್ರಿಗೇಡ್ ಹೊನ್ನಾವರ ವತಿಯಿಂದ ಸ್ವಾಮಿ ವಿವೇಕಾನಂದರ ಜನ್ಮ ದಿನದ ಅಂಗವಾಗಿ “ನೆತ್ತರ ಹನಿ ಕೊಟ್ಟವನೆ ಧಣಿ” ಎನ್ನುವ ಪರಿಕಲ್ಪನೆಯಡಿಯಲ್ಲಿ ವಿರಳ ರಕ್ತದ ಗುಂಪು ಹೊಂದಿದವರ ಮಾಹಿತಿ ಸಂಗ್ರಹ ಕಾರ್ಯಕ್ಕೆ ಎಸ್. ಡಿ.ಎಂ. ಕಾಲೇಜಿನಲ್ಲಿ ಚಾಲನೆ ನೀಡಿದರು.

  ಹೊನ್ನಾವರದಲ್ಲಿ ಹೆಚ್ಚಿನ ಆಸ್ಪತ್ರೆಗಳು ಕಾರ್ಯ ನಿರ್ವಹಿಸುತ್ತಿದ್ದು ಇಲ್ಲಿ ಬೇರೆ ಬೇರೆ ತಾಲೂಕಿನ, ಜಿಲ್ಲೆಯ ರೋಗಿಗಳು ಚಿಕಿತ್ಸೆ ಪಡೆಯುತ್ತಾರೆ. ಬ್ಲಡ್ ಬ್ಯಾಂಕ್ ಹೊನ್ನಾವರದಿಂದ 20km ದೂರದ ಕುಮಟಾ ತಾಲೂಕಿನಲ್ಲಿರುವುದರಿಂದ ಕೆಲವೊಮ್ಮೆ ವಿರಳ ಗುಂಪಿನ ರಕ್ತದ ಅವಶ್ಯಕತೆ ಬಿದ್ದಾಗ ರಕ್ತಕ್ಕಾಗಿ ಒದ್ದಾಟ ನಡೆಸುವ ಅನೇಕ ಸನ್ನಿವೇಶಗಳು ನಡೆದಿವೆ.

  ಈ ಕಾರಣ ಮನಗಂಡ ಯುವಾ ಬ್ರಿಗೇಡ್ “ನೆತ್ತರ ಹನಿ ಕೊಟ್ಟವನೇ ಧಣಿ” ಎನ್ನುವ ಪರಿಕಲ್ಪನೆಯಲ್ಲಿ ವಿರಳ ರಕ್ತದ ಗುಂಪು ಹೊಂದಿರುವ ಮಾಹಿತಿ ಸಂಗ್ರಹಿಸಿ ಅವಶ್ಯಕತೆ ಇದ್ದವರಿಗೆ ಸಂಪರ್ಕಿಸಿ ಕೊಡುವ ಯೋಜನೆ ಹಾಕಿಕೊಂಡಿದ್ದಾರೆ.

  300x250 AD

  ಕೆಲವು ವಿದ್ಯಾರ್ಥಿಗಳಿಗೆ ತಮ್ಮ ರಕ್ತದ ಗುಂಪು ಗೊತ್ತಿಲ್ಲದ ಕಾರಣ ಮೂರು ದಿನದಲ್ಲಿ ರಕ್ತ ತಪಾಸಣಾ ಶಿಬಿರ ಹಮ್ಮಿಕೊಳ್ಳುವ ಯೋಜನೆ ಮಾಡಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಬಸ್ ನಿಲ್ದಾಣ ದೇವಸ್ಥಾನ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ರಕ್ತ ದಾನಿಗಳ ಹೆಸರು, ಸಂಪರ್ಕ ಹಾಗೂ ರಕ್ತದ ಗುಂಪು ಸಂಗಹಿಸುವ ಕಾರ್ಯ ಹಮ್ಮಿಕೊಳ್ಳುವ ಯೋಜನೆ ಮಾಡಲಾಗಿದೆ ಎಂದು ಯುವಾ ಬ್ರಿಗೇಡ್ ಸದಸ್ಯರು ತಿಳಿಸಿದ್ದಾರೆ.

  Share This
  300x250 AD
  300x250 AD
  300x250 AD
  Back to top