• Slide
  Slide
  Slide
  previous arrow
  next arrow
 • ಶಿರಸಿಯಲ್ಲಿ ದನಗಳ್ಳತನ: ಮತ್ತೆ ಹೆಚ್ಚಾದ ದನಗಳ್ಳರ ಹಾವಳಿ

  300x250 AD
  ಜಾನುವಾರು ಹೊತ್ತೊಯ್ಯುತ್ತಿರುವ ದನಗಳ್ಳರು

  ಶಿರಸಿ: ಶಿರಸಿಯಲ್ಲಿ ಮತ್ತೆ ದನಗಳ್ಳರ ಹಾವಳಿ ಹೆಚ್ಚಾಗಿದ್ದು. ಇಂದು ಬೆಳಗಿನ ಜಾವ ಕ್ರೇಟಾ ಕಾರಿನಲ್ಲಿ ಬಂದ ದನಗಳ್ಳರು ನಾಲ್ಕು ದನಗಳನ್ನು ಹೊತ್ತೊಯ್ದಿದ್ದಾರೆ‌.
  ಮರಾಟಿಕೊಪ್ಪದ ಮುಖ್ಯ ರಸ್ತೆಯಲ್ಲಿ ಇಂದು ಬೆಳಗಿನಜಾವ ದನಗಳ್ಳರು ಸುಮಾರು 3-50ರ ಸುಮಾರಿಗೆ ನಾಲ್ಕು ದನಗಳನ್ನು ಕದ್ದೊಯ್ದಿದ್ದಾರೆ. ಬಹುಬೆಲೆಯ ಕ್ರೇಟಾ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಈ ಕೃತ್ಯವೆಸಗಿದ್ದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ತನಿಖೆ ಆರಂಭಗೊಂಡಿದೆ.
  ಮಣ್ಣೆತ್ತಿನ ಅಮಾವಾಸ್ಯೆ ದಿನವೇ ಈ ದುರ್ಘಟನೆ ನಡೆದಿದ್ದು ಸುತ್ತಮುತ್ತಲಿನ ಜನರು ದಿಗ್ಭ್ರಾಂತರಾಗಿದ್ದಾರೆ. ಇನ್ನಾದರೂ ದನಗಳನ್ನು ಸಾಕುವವರು ಎಚ್ಚರಗೊಂಡು ತಮ್ಮ‌ ಜಾನುವಾರುಗಳ ರಕ್ಷಣೆ ಮಾಡಿಕೊಳ್ಳಬೇಕಿದೆ‌.

  300x250 AD
  Share This
  300x250 AD
  300x250 AD
  300x250 AD
  Leaderboard Ad
  Back to top