• first
  second
  third
  Slide
  previous arrow
  next arrow
 • ಅತಿ ವೇಗದಲ್ಲಿ ಕಾರು ಚಲಾಯಿಸುತ್ತಿದ್ದ ವ್ಯಕ್ತಿ; ವಿದ್ಯುತ್ ಕಂಬಕ್ಕೆ ಡಿಕ್ಕಿ

  300x250 AD

  ಅಂಕೋಲಾ : ತಾಲೂಕಿನ ಹೆಬ್ಬುಳ್ ಬಳಿ ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಅತಿ ವೇಗದಲ್ಲಿ ಕಾರು ಚಲಾಯಿಸಿ ಬಂದು ಎದುರುಗಡೆ ಬರುತ್ತಿರುವ ಲಾರಿ ತಪ್ಪಿಸಲು ಹೋಗಿ ರಸ್ತೆ ಪಕ್ಕದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ಸಂಭವಿಸಿದೆ.ಈ ಕುರಿತಂತೆ ಕಾರು ಚಾಲಕ ಆಂಧ್ರ ಪ್ರದೇಶದ ಶಕ್ತಿನಗರ ನಿವಾಸಿ ಶೇಖ್ ನೂರ್ ಅಹ್ಮದ್ (44) ಎಂಬಾತನ ಮೇಲೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

  ಆರೋಪಿತನು ಹುಬ್ಬಳ್ಳಿ ಕಡೆಯಿಂದ ಅಂಕೋಲಾ ಕಡೆ ಕಾರು ನಂ ಎ.ಪಿ 21 ಎ ಎಕ್ಸ್ 7449 ಅತಿ ವೇಗವಾಗಿ ಚಲಾಯಿಸಿಕೊಂಡು ಬರುತ್ತಿದ್ದ ಸಂದರ್ಭದಲ್ಲಿ ಯಾವುದೋ ವಾಹನವನ್ನು ಓವರ್ ಟೇಕ್ ಮಾಡಿ ಎದುರಿಗೆ ಬಂದ ಲಾರಿಯನ್ನು ತಪ್ಪಿಸುವ ಯತ್ನದಲ್ಲಿ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಹಾನಿ ಪಡಿಸಿದ ಕುರಿತು ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ರವಿಪ್ರಕಾಶ್ ನಾಗೇಶ್ವರ ರಾವ ಬಿ.ಕೆ, (ಪುರೋಹಿತ – ಬ್ರಾಹ್ಮಣ ) ಎನ್ನುವವರು ದೂರು ದಾಖಲಿಸಿದ್ದು, ಪ್ರಕರಣ ದಾಖಲಿಸಿಕೊಂಡ ಅಂಕೋಲಾ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

  300x250 AD

  ರಾಷ್ಟ್ರೀಯ ಹೆದ್ದಾರಿ 63 ರ ಯಲ್ಲಾಪುರ – ಅಂಕೋಲಾ ಮಧ್ಯೆ ಮುಖ್ಯ ರಸ್ತೆಯಲ್ಲಿ ನಿರ್ವಹಣೆ ಕೊರತೆಯಿಂದ ಹಲವೆಡೆ ಡಾಂಬರ ಹೊದಿಕೆ ಸಂಪೂರ್ಣಕಿತ್ತು ಹೋಗಿದೆ . ಇನ್ನು ಕೆಲವೆಡೆ ರಸ್ತೆಯಲ್ಲಿಯೇ ಗುಂಡಿ – ತಗ್ಗುಗಳಾಗಿದ್ದು ಸುಗಮ ಸಂಚಾರ ವ್ಯವಸ್ಥೆಗೆ ತೀವ್ರ ತೊಂದರೆಯಾಗುತ್ತಿದ್ದು ಸಂಬಧಿಸಿದ ಇಲಾಖೆ ತುರ್ತು ಕ್ರಮ ಕೈಗೊಂಡು ಹೆದ್ದಾರಿ ದುರಸ್ತಿಗೆ ಮುಂದಾಗಬೇಕಿದೆ.

  Share This
  300x250 AD
  300x250 AD
  300x250 AD
  Back to top