• Slide
    Slide
    Slide
    previous arrow
    next arrow
  • ಶಿರಸಿ ಲಯನ್ಸ್ ಶಾಲೆಯಿಂದ ವಿನೂತನ ಕಾರ್ಯಕ್ರಮ: ‘ಲೋಚನ’ – ಬಿಯಾಂಡ್ ಅಕಾಡೆಮಿಕ್ಸ್

    300x250 AD

    ಶಿರಸಿ: ಇಲ್ಲಿನ ಲಯನ್ಸ್ ಶಿಕ್ಷಣ ಸಂಸ್ಥೆಯ ವತಿಯಿಂದ ಲೋಚನ’ – ಬಿಯಾಂಡ್ ಅಕಾಡೆಮಿಕ್ಸ್ ಹೆಸರಿನಲ್ಲಿ ವಿನೂತನ ಕಲಿಕಾ ಕಾರ್ಯಕ್ರಮವನ್ನು ಪ್ರಾರಂಭಿಸಲಾಗುತ್ತಿದೆ.
    ವಿದ್ಯಾರ್ಥಿಗಳಿಗೆ ಕಲಿಕೆಯ ಜೊತೆಗೆ ಕಲಿಕೇತರ ಚಟುವಟಿಕೆಗಳಿಗೆ ಒತ್ತುಕೊಡುವ ದೃಷ್ಟಿಯಿಂದ ಈ ಕಲಿಕಾ ಕಾರ್ಯಕ್ರಮವನ್ನು ರೂಪಿಸಲಾಗಿದ್ದು ಯೂಟ್ಯೂಬ್ ಚಾನೆಲ್ ಮೂಲಕ ಕಾರ್ಯಕ್ರಮ ನಡೆಯಲಿದೆ.
    ಕೇವಲ ಮಕ್ಕಳಿಗೊಂದೇ ಅಲ್ಲದೇ ಪಾಲಕರಿಗೆ ಶಿಕ್ಷಕರಿಗೆ ಹಾಗೂ ಕಲಿಕಾ ಮನೋಭಾವವುಳ್ಳ ಎಲ್ಲರೂ ಈ ಕಾರ್ಯಕ್ರಮದ ಸದುಪಯೋಗ ಪಡೆದು ಕೊಳ್ಳಬಹುದಾಗಿದೆ‌. ನಾಡಿನ ಹೆಸರಾಂತ ಸಂಪನ್ಮೂಲ ವ್ಯಕ್ತಿಗಳು ಈ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಲಿದ್ದು ಪ್ರತೀ ವಾರಾಂತ್ಯದಲ್ಲಿ ಸಂಚಿಕೆಗಳು ಪ್ರಸಾರವಾಗಲಿದೆ.
    ಲೋಚನ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಸ್ವರ್ಣವಲ್ಲಿಯ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು. ಡಾ. ವಿಜಯಲಕ್ಷ್ಮಿ ಬಾಳೇಕುಂದ್ರಿ , ಶ್ರೀಮತಿ ಸುಧಾಮೂರ್ತಿ, ಡಾ.ಗುರುರಾಜ ಕರ್ಜಗಿ, ವಿದ್ವಾನ್. ಉಮಾಕಾಂತ ಭಟ್, ಮೋಹನ್ ಆಳ್ವ, ಭುವನೇಶ್ವರಿ ಹೆಗಡೆ, ರವೀಂದ್ರ ಭಟ್ ಐನಕೈ, ನಾಗೇಶ ಹೆಗಡೆ , ಶಿವಾನಂದ ಕಳವೆ, ನಾ.ಡಿಸೋಜಾ, ರಮಾನಂದ ಐನಕೈ, ಡಾ.ಶಿವರಾಂ ಕೆ.ವಿ., ಡಾ.ಕೇಶವ ಕೂರ್ಸೆ ಸೇರಿದಂತೆ ನಾಡಿನ ವಿವಿಧ ಸಾಧಕರು ಪಾಲ್ಗೊಳ್ಳಲಿದ್ದಾರೆ.
    ಲಯನ್ಸ್ ಶಿಕ್ಷಣ ಸಂಸ್ಥೆಶಿರಸಿ , ಲಯನ್ಸ್ ಕ್ಲಬ್ ಶಿರಸಿ ಹಾಗೂ ರೋಟರಿ ಕ್ಲಬ್ ಶಿರಸಿ ಜಂಟಿಯಾಗಿ ಈ ಕಾರ್ಯಕ್ರಮವನ್ನು ಸಂಘಟಿಸಿವೆ. ನಾಡಿನ ಎಲ್ಲ ಶಿಕ್ಷಣಾಸಕ್ತರಿಗೆ ಮುಕ್ತವಾಗಿ ಸಂಚಿಕೆಕೆಗಳು ದೊರೆಯಲಿದ್ದು ವರ್ಷಪೂರ್ತಿ ವಾರಾಂತ್ಯದ ಸಂಚಿಕೆಗಳ ರೂಪದಲ್ಲಿ ಪ್ರಸಾರವಾಗಲಿದೆ‌.

    ದಿನಾಂಕ 10-07-2021ರಂದು ಬೆಳಿಗ್ಗೆ 10ಗಂಟೆಗೆ ಮೊದಲ ಸಂಚಿಕೆ ಪ್ರಸಾರವಾಗಲಿದ್ದು. ಈ ಸಂಚಿಕೆಯಲ್ಲಿ ಡಾ. ವಿಜಯಲಕ್ಷ್ಮಿ ಬಾಳೇಕುಂದ್ರಿಯವರ ‘ ಎ ಪಾಥ್ ಟು ವೆಲ್ನೆಸ್’ ಶೀರ್ಷಿಕೆಯಡಿಯಲ್ಲಿ ಕಾರ್ಯಕ್ರಮ ನಡೆಯಲಿದೆ. ಲಯನ್ಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರೋ.ಎನ್.ವಿ‌.ಜಿ.ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು ಲಯನ್ಸ್ ಕ್ಲಬ್ ಅಧ್ಯಕ್ಷ ಲ.ಉದಯಸ್ವಾದಿ ಹಾಗೂ ರೋಟರಿ ಕ್ಲಬ್ ಅಧ್ಯಕ್ಷ ರೋ.ಪಾಂಡುರಂಗ ಪೈ ಉಧ್ಘಾಟನೆ ನೆರವೇರಿಸಲಿದ್ದಾರೆ.
    ಕಾರ್ಯಕ್ರಮವನ್ನು ಲಯನ್ಸ್ ಶಾಲೆಯ ಯೂಟ್ಯೂಬ್ ಚಾನೆಲ್ ನಲ್ಲಿ ವೀಕ್ಷಿಸಬಹುದಾಗಿದ್ದು https://www.youtube.com/channel/UCufan-pOTYMaoIsI9-qEXXA ಲಿಂಕ್ ನಲ್ಲಿ ಲಭ್ಯವಿರುತ್ತದೆ‌.
    ನಾಡಿನ ಎಲ್ಲ ಆಸಕ್ತರು ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕೆಂದು ಲಯನ್ಸ್ ಶಾಲೆಯ ಮುಖ್ಯಾಧ್ಯಾಪಕ ಶಶಾಂಕ್‌ಹೆಗಡೆ ತಿಳಿಸಿದ್ದಾರೆ‌.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top