• first
    second
    third
    Slide
    previous arrow
    next arrow
  • ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪೂರ್ಣಗೊಳಿಸುವಂತೆ ಮನವಿ

    300x250 AD

    ಹೊನ್ನಾವರ : ಪಟ್ಟಣ ವ್ಯಾಪ್ತಿಯಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ಅವೈಜ್ಞಾನಿಕ ರೀತಿಯಲ್ಲಿ ನಡೆಯುತ್ತಿರುವುದಲ್ಲದೇ, ಹತ್ತಾರು ವರ್ಷಗಳಿಂದ ಕುಂಟುತ್ತಾ ಕಾಮಗಾರಿ ಸಾಗಿದ್ದು, ಈ ಬಗ್ಗೆ ತಾಲೂಕಾಡಳಿತ ಗಮನಹರಿಸಬೇಕೆಂದು ತಹಶೀಲ್ದಾರರಿಗೆ ಸೋಮವಾರ ಪ.ಪಂ ಸದಸ್ಯ ಶ್ರೀಪಾದ ನಾಯ್ಕ ಮುಂದಾಳತ್ವದಲ್ಲಿ ಸಾರ್ವಜನಿಕರು ಮನವಿ ಸಲ್ಲಿಸಿದರು.

    ಕಾಮಗಾರಿ ಮುಗಿಯುವ ಹಂತದಲ್ಲಿ ಇದೆ ಎಂದೆನಿಸಿದರೂ ಇನ್ನಷ್ಟು ಅಲ್ಲಲ್ಲಿ ಕಾಮಗಾರಿ ಬಾಕಿ ಇದೆ. ಪಟ್ಟಣದ ಹೃದಯ ಭಾಗದಲ್ಲಂತೂ ಆರಂಭವೇಗೊಂಡಿಲ್ಲಾ. ಕಳೆದ 10 ವರ್ಷಗಳಿಂದ ನಡೆದಿರುವ ಕೆಲಸ ಯಾವುದೇ ಒಂದು ಕಾಲಾವಧಿಯ ಮಿತಿ ಇಲ್ಲದೇ ಅವೈಜ್ಞಾನಿಕವಾಗಿ ಕುಂಟುತ್ತಾ ಸಾಗಿದೆ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು, ಜನ ಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆ ಇದೆ. ಎಮ್ಮೆ ಫೈಲಿನಿಂದ ಹಿಡಿದು ಶರಾವತಿ ಜೀವ ವಿಮಾ ವಿಭಾಗದಿಂದ ಮುಂದುವರೆದು ಗೌಡರ ಕೇರಿಯವರೆಗೂ ಆಗಲೀಕರಣ ಕೆಲಸ ಮೊನ್ನೆ ಮೊನ್ನೆಯಷ್ಟೇ ಆಗಿದೆ. ಆದರೂ ಅಲ್ಲಲ್ಲಿ ತೇಪೆ ಹಚ್ಚುವ ಕೆಲಸ ನಡೆದು ಸಂಪೂರ್ಣಗೊಂಡಿಲ್ಲ. ಅಗಲೀಕರಣದ ಜೊತೆಗೆ ಓಡಾಡಲು ಸರ್ವೀಸ್ ರೋಡ್ ಇಲ್ಲದೇ ಜನ ಪರದಾಡುವ ಪರಿಸ್ಥಿತಿ ಇದೆ. ಮನೆಯ ಹಿತ್ತಲುಗಳಿಂದ ಹೆದ್ದಾರಿಯಿರುವುದರಿಂದ ಅಪಘಾತಗಳಿಗೆ ಆಸ್ಪದವಾಗುವುದರಲ್ಲಿ ಸಂಶಯವಿಲ್ಲ. ರಸ್ತೆಯ ಪಕ್ಕದಲ್ಲಿರುವ ತೋಡು ಮಳೆಗಾಲದಲ್ಲಿ ತುಂಬಿ ಹರಿದು ಸರಿಯಾದ ವ್ಯವಸ್ಥೆ ಆಗದೇ ಇದ್ದಲ್ಲಿ ಪಕ್ಕದ ಎಲ್ಲಾ ಹಿತ್ತಲುಗಳಿಗೆ ನೀರು ನುಗ್ಗಿ ಬದುಕು ದುಸ್ತರವಾಗುತ್ತದೆ. ಈ ತೋಡಿನ ಕೆಲಸ ಅದರ ಜೊತೆಗೆ ಸರ್ವೀಸ್ ರೋಡ್ ಇವುಗಳು ತುರ್ತು ಅವಶ್ಯಕತೆ ಇದೆ. ಈ ಕೆಲಸ ಯಾರ ಸುಪರ್ದಿಯಲ್ಲಿ ನಡೆದು ಮುಗಿಯಬೇಕು. ಯಾವ ಇಲಾಖೆಗೆ ಇದು ಸಂಬಂಧಪಟ್ಟ ವಿಷಯ? ಇಲ್ಲಿ ತಮ್ಮ ಹೊಣೆಗಾರಿಕೆಯಿಂದ ಜಾರಿಕೊಳ್ಳಲು ಪ್ರತಿ ಇಲಾಖೆಯೂ ಪ್ರಯತ್ನ ಪಡುವುದು ಕಂಡುಬಂದಿದೆ ಎಂದು ಮನವಿಯಲ್ಲಿ ಪ್ರಶ್ನಿಸಿ, ಆರೋಪಿಸಿದ್ದಾರೆ.

    300x250 AD

    ತಹಶೀಲ್ದಾರರು ಈ ಪ್ರದೇಶಕ್ಕೆ ಸ್ವತಃ ಭೇಟಿಕೊಟ್ಟು ಸಂಬಂಧಪಟ್ಟ ಅಧಿಕಾರಿಗಳ ಸಮ್ಮುಖದಲ್ಲಿ, ಈ ವಿಷಯವನ್ನು ಇತ್ಯರ್ಥಗೊಳಿಸಿ ಪಕ್ಕದಲ್ಲಿ ವಾಸಿಸುತ್ತಿರುವ ಜನ ಸಾಮಾನ್ಯರ ಕಷ್ಟವನ್ನು ಪರಿಹರಿಸಬೇಕು ಎಂದು ಮನವಿಯಲ್ಲಿ ವಿನಂತಿಸಿದ್ದಾರೆ.
    ತಹಶೀಲ್ದಾರ ನಾಗರಾಜ ನಾಯ್ಕಡ್ ಮನವಿ ಸ್ವೀಕರಿಸಿದರು.

    Share This
    300x250 AD
    300x250 AD
    300x250 AD
    Back to top