ಭಟ್ಕಳ: ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೋರ್ವಳಿಗೆ ವಿಷಪೂರಿತ ಹಾವು ಕಚ್ಚಿ ಸಾವಿಗೀಡಾದ ಘಟನೆ ಇಲ್ಲಿನ ಕಟಗಾರ ಗ್ರಾಮ ಪಂಚಾಯತ ವ್ಯಾಪ್ತಿಯ ಅತ್ತಿಬಾರ ದಲ್ಲಿ ಸೋಮವಾರ ನಡೆದಿದೆ.
ಸಾವಿಗೀಡಾದ ಮಹಿಳೆಯನ್ನು ಮಂಗಳಿ ತಿಮ್ಮಪ್ಪ ಗೊಂಡ (43) ಎಂದು ಗುರುತಿಸಲಾಗಿದೆ. ಈಕೆ ತನ್ನ ಮನೆಯ ಪಕ್ಕದಲ್ಲಿದ್ದ ಗದ್ದೆ ಕೆಲಸಕ್ಕೆ ಸೋಮವಾರ ಸಂಜೆ ಹೋದಾಗ ಈಕೆಯ ಕಾಲಿಗೆ ವಿಷಪೂರಿತ ಹಾವು ಕಚ್ಚಿದೆ. ತಕ್ಷಣ ಈಕೆಯನ್ನು ಉತ್ತಕೊಪ್ಪದಿಂದ ಮುರುಡೇಶ್ವರ ಆಸ್ಪತ್ರೆಗೆ ತರುತ್ತಿರುವಾಗ ವಿಷವೇರಿ ಮೃತಪಟ್ಟಿದ್ದಾಳೆ. ಭಟ್ಕಳ ಸರಕಾರಿ ಆಸ್ಪತ್ರೆಯಲ್ಲಿ ಮಂಗಳವಾರ ಬೆಳಿಗ್ಗೆ ಮೃತಳ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಈ ಸಂಭಂದ ಮುರುಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.