ಭಟ್ಕಳ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉತ್ತರಕನ್ನಡ ಜಿಲ್ಲೆ, ಕಾರವಾರ ಹಾಗೂ ಭಟ್ಕಳ ಸರಕಾರಿ ಆಸ್ಪತ್ರೆ ಇವರ ಸಹಯೋಗದಲ್ಲಿ ಕೋವಿಡ್ ವ್ಯಾಕ್ಷೀನ್ ಬೂಸ್ಟರ ಲಸಿಕಾ ಮೇಳ ತಾಲೂಕು ಆಸ್ಪತ್ರೆಯಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಶಾಸಕ ಸುನೀಲ್ ನಾಯ್ಕ ಉದ್ಘಾಟಿಸಿದರು. ನಂತರ ಮಾತನಾಡಿ ಕೇಂದ್ರ ಸರಕಾರ ಕರೋನಾ ತಡೆಗಟ್ಟಲುಸಕಾಲದಲ್ಲಿ
ಜನರಿಗೆ ಲಸಿಕೆ ನೀಡಿದ್ದು ಇದರಿಂದ ಸೊಂಕಿತರಲ್ಲಿ ರೋಗ ಲಕ್ಷಣ ಕಡಿಮೆ ಆಗಿದೆ. ಮೂರನೆ ಅಲೆ ಪ್ರಮಾಣ ತಗ್ಗಿದೆ ಎಂದರಲ್ಲದೆ
ಕರೋನಾ ಎರಡು ಡೋಸ್ ಪಡೆದ ಆರೋಗ್ಯ ಕಾರ್ಯಕರ್ತರಿಗೆ ಮುಂಚೂಣಿ ಕೋವಿಡ್ ಕಾರ್ಯಕರ್ತರಿಗೆ ಹಾಗೂ 60 ವರ್ಷ ಮೇಲ್ಪಟ್ಟವರಿಗೆ ಪ್ರಥಮ ಆಧ್ಯತೆಯಾಗಿ ಕೋವಿಡ್ ಬೂಸ್ಟರ್ ವ್ಯಾಕ್ಸಿನ್ ನೀಡಲಾಗುತ್ತಿದ್ದು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದರು.
ಕಾರ್ಯಕ್ರಮದಲ್ಲಿ ಭಟ್ಕಳ ಎಜ್ಯುಕೇಶ ಟ್ರಸ್ ಅಧ್ಯಕ್ಷ ಡಾ. ಸುರೆಸ ನಾಯ್ಕ, ತಾಲೂಕು ವೈದ್ಯಾಧಿಕಾರಿ ಡಾ. ಸವಿತಾ ಕಾಮತ್, ಉಪಸ್ಥಿತರಿದ್ದರು.