ಕಾರವಾರ: ಕದಂಬ ನೌಕಾ ನೆಲೆ ಪ್ರದೇಶದಲ್ಲಿ ಕೋವಿಡ್ ಪ್ರಕರಣಗಳನ್ನು ಗುರುತಿಸುವದರೊಂದಿಗೆ ಹೆಚ್ಚಿನ ಸ್ಯಾಂಪಲ್ ಮಾದರಿ ಸಂಗ್ರಹಿಸಬೇಕು ಮತ್ತು ಐಸೋಲೇಷನ್ ಮಾಡುವ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸೂಚಿಸಿದರು.
ನೆವಲ್ ಬೆಸ್ ಪ್ರದೇಶದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗಿ ಕಂಡು ಬಂದ ಹಿನ್ನಲೆಯಲ್ಲಿ ಬುಧವಾರ ಜಿಲ್ಲಾಧಿಕಾರಿ ಕಚೇರಿ ನ್ಯಾಯಾಲಯ ಸಭಾಂಗಣದಲ್ಲಿ ಜಿಲ್ಲಾ ಮತ್ತು ತಾಲೂಕಾ ಮಟ್ಟದ ಅಧಿಕಾರಿಗಳ ತುರ್ತು ಸಭೆ ಕೆರದು ಮಾತನಾಡಿದ ಅವರು ಸರಕಾರದ ಪ್ರೋಟೋಕಾಲ್‍ನ್ನು ಎಲ್ಲರೂ ತಪ್ಪದೇ ಅನುಸರಿಸಬೇಕಾಗಿದ್ದು, ಈಗಾಗಲೇ ನೆವಲ್ ಪ್ರದೇಶದಲ್ಲಿ ಗುತ್ತಿಗೆದಾರರ ವತಿಯಿಂದ 500 ಕಾರ್ಮಿಕರು ಕಾರ್ಯನಿರ್ವಹಿಸುತ್ತಿರುವದರಿಂದ ಬೇರೆ ಬೇರೆಪ್ರದೇಶಗಳಿಂದ ಬಂದು ಕಾರ್ಯನಿರ್ವಹಿಸುವವರ ಅನಿವಾರ್ಯತೆ ಈ ಸದ್ಯ ಮಟ್ಟಿಗೆ ಇರುವುದಿಲ್ಲ ಆದ್ದರಿಂದ ಹೊರಗಿನಿಂದ ಬರುವವರಿಗೆ ಯಾರಿಗೂ ಅವಕಾಶ ಕೊಡಬಾರದೆಂದು ನೆವೆಲ್ ಅಧಿಕಾರಿಗಳಿಗೆ ಹೇಳಿದರು.
ಕದಂಬ ನೌಕಾ ನೆಯ ಹಿಡನ್ ಗಾಲಿಯಲ್ಲಿ ಹೆಚ್ಚು ಕೋವಿಡ್ ಪ್ರಕರಣಗಳು ಕಂಡುಬರುತ್ತಿದ್ದು, ಸೋಂಕಿತರನ್ನು ಪ್ರತ್ಯೇಕಿಸಲು (ಐಸೋಲೇಷನ್) ಕ್ರಮ ಕೈಗೊಳ್ಳಬೇಕು ಅಲ್ಲದೇ ಸಹಾಯಕ ಆಯುಕ್ತರು ಮತ್ತು ತಹಶೀಲ್ದಾರರು ಸ್ಥಳಕ್ಕೆ ಭೇಟಿ ನೀಡಿ ಸೋಂಕಿತರನ್ನು ಕಂಟೋನ್ಮೆಂಟ್ ಮಾಡುವಂತೆ ಜಿಲ್ಲಾಧಿಕಾರಿ ನಿರ್ದೇಶಿಸಿದರು.
ಈ ಸಂದರ್ಭದಲ್ಲಿ ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶರದ್ ನಾಯಕ್ ಸೇರಿದಂತೆ ಇತರರು ಇದ್ದರು.