• first
    second
    third
    previous arrow
    next arrow
  • ಕುಮಟಾದ ಜಿ.ಎಲ್. ಹೆಗಡೆ ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾಗಿ ನೇಮಕ

    300x250 AD

    ಬೆಂಗಳೂರು: ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕರನ್ನಾಗಿ ಹಿರಿಯ ಅರ್ಥಧಾರಿ, ಸಾಹಿತಿ ಡಾ.ಜಿ.ಎಲ್. ಹೆಗಡೆ ಅವರನ್ನು ನೇಮಕಗೊಳಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. 

    ಯಕ್ಷಗಾನ ವೇಷಧಾರಿಯಾಗಿ, ದಕ್ಷಿಣೋತ್ತರ ಕನ್ನಡದ ಪ್ರಸಿದ್ಧ ಯಕ್ಷಗಾನ ತಾಳಮದ್ದಳೆ ಅರ್ಥಧಾರಿಯಾಗಿಯೂ ಹೆಸರು ಪಡೆದಿರುವ ಡಾ.ಜಿ.ಎಲ್ ಹೆಗಡೆ, ಕುಮಟಾದ ಡಾ.ಎ.ವಿ.ಬಾಳಿಗಾ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. ಇವರು ಯಕ್ಷಗಾನ ಸಂಶೋಧನಾ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿದ್ದು, ಯಕ್ಷಗಾನ ವರ್ಣವೈಭವ, ಶೇಣಿ ರಾಮಾಯಣ, ಶೇಣಿ ಭಾರತ, ನಮ್ಮ ಚಿಟ್ಟಾಣಿ ಸೇರಿದಂತೆ ಹಲವು ಪುಸ್ತಕಗಳ ಲೇಖಕರಾಗಿರಾಗಿದ್ದಾರೆ. 

    300x250 AD

    ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ಎಂ.ಎ.ಹೆಗಡೆ ನಿಧನ ಹಿನ್ನೆಲೆಯಲ್ಲಿ ತೆರವಾದ ಸ್ಥಾನಕ್ಕೆ ಜಿ.ಎಲ್.ಹೆಗಡೆ ಅವರನ್ನು ನೇಮಕ ಮಾಡಿ ಕನ್ನಡ ಹಾಗೂ ಸಂಸ್ಕೃತಿ ಇಲಾಖೆ ಬುಧವಾರ ಆದೇಶ ಹೊರಡಿಸಿದೆ.

    Share This
    300x250 AD
    300x250 AD
    300x250 AD
    Back to top