ಕಾರವಾರ: ಗೋವಾದಿಂದ ರಾಜ್ಯ ಪ್ರವೇಶಿಸಬೇಕಾದರೆ ಕೊರೊನಾ ನೆಗೆಟಿವ್ ವರದಿ (ಆರ್.ಟಿ.ಪಿ.ಸಿ.ಆರ್) ಕಡ್ಡಾಯ ಮಾಡಿದ ಹಿನ್ನೆಲೆಯಲ್ಲಿ ಗೋವಾ ಗಡಿಯಲ್ಲಿ ಗೋವಾದ ನಾಗರೀಕರು ಪ್ರತಿಭಟನೆ ನಡೆಸಿದರು.
ಗೋವಾ ನಗರಿಕರು ಕರ್ನಾಟಕ ಪ್ರವೇಶ ಮಾಡಬೇಕೆಂದರೆ ಗಡಿಯಲ್ಲಿ ಕೊರೊನಾ ತಪಾಸಣೆಗೆ ನಿಂತವರಿಗೆ ಆರ್.ಟಿ.ಪಿ.ಸಿ.ಆರ್ ನಗೆಟಿವ್ ವರದಿಯ ತೋರಿಸುವುದು ಕಡ್ಡಾಯ. ಅದಿಲ್ಲದಿದರೆ ರಾಜ್ಯಕ್ಕೆ ಪ್ರವೇಶ ನಿರ್ಬಂಧಿಸಿ ಆದೇಶ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಬುಧವಾರ ಕಾರವಾರ ತಾಲೂಕಿನ ಮಾಜಾಳಿ ಗಡಿಯಲ್ಲಿ ಗೋವಾ ನಾಗರಿಕರು ಪ್ರತಿಭಟಿಸಿದರು. ಕರ್ನಾಟಕರಿಂದ ಗೋವಾ ಪ್ರವೇಶಕ್ಕೆ ಯಾವುದೇ ಆರ್‍ಟಿಪಿಸಿಆರ್ ಟೆಸ್ಟ್ ಕಡ್ಡಾಯವಿಲ್ಲ. ಆದರೆ ಕರ್ನಾಟಕ ಕಡ್ಡಾಯ ಮಾಡಿರುವುದರಿಂದ ಪ್ರತಿನಿತ್ಯ ಓಡಾಡುವ ಕಾರ್ಮಿಕರಿಗೆ ತೊಂದರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕದಿಂದ ಗೋವಾಕ್ಕೆ ಬರುವ ವಾಹನ ತಡೆದು ಆಕ್ರೋಶಿಸಿ, ಗಡಿಯಲ್ಲಿದ್ದ ಕರ್ನಾಟಕ ಪೆÇಲೀಸರ ಜೊತೆ ಗೋವಾ ನಾಗರೀಕರು ಮಾತಿನ ಚಕಮಕಿ ನಡೆಸಿದರು.