ಕಾರವಾರ: ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಪ್ರಮಾಣ ಹೆಚ್ಚುತ್ತಿದ್ದು, ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮಾಹಿತಿ ನೀಡಿದ್ದಾರೆ.
ಬುಧವಾರ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕೊರೊನಾ ಏರಿಕೆಯಿಂದಾಗಿ ಪಾಸಿಟಿವಿಟಿ ಪ್ರಮಾಣ ಶೇ.4.8 ಕ್ಕೆ ತಲುಪಿದೆ. ದಿನದಿಂದ ದಿನಕ್ಕೆ ಕೊರೊನಾ ಕೇಸ್ ಹೆಚ್ಚಳವಾಗುತ್ತಿದೆ. ಆದರೆ ಜಿಲ್ಲೆಯಲ್ಲಿ ಈವರೆಗೆ ಆಕ್ಸಿಜನ್, ಬೆಡ್’ಗಳ ಕೊರತೆ ಉಂಟಾಗಿಲ್ಲ ಎಂದು ಮಾಹಿತಿ ನೀಡಿದರು. ಮಂಗಳವಾರದವರೆಗೆ ಜಿಲ್ಲೆಯಲ್ಲಿ ಕೊರೊನಾ ಸಕ್ರಿಯ ಕೇಸ್ ಪ್ರಕರಣ 414 ಪ್ರಕರಣವಿತ್ತು. ಅದರಲ್ಲಿ 180 ಪ್ರಕರಣ ಕಾರವಾರ ಒಂದರಲ್ಲೇ ಇರುವುದು ಆತಂಕಕಾರಿ. ಅಷ್ಟೇ ಅಲ್ಲದೇ ಇಂದು ಜಿಲ್ಲೆಯಲ್ಲಿ ಒಂದೇ ಸಮನೆ ಕೊರೊನಾ ಏರಿಕೆ ಪ್ರಮಾಣದಲ್ಲಿ ಹೆಚ್ಚಳವಾಗಿ 240 ರಿಂದ 250 ಕೇಸ್ ಪಾಸಿಟಿವ್ ಬರುವ ಸಾಧ್ಯತೆಗಳಿದೆ ಎಂದರು.
ಕಾರವಾರ ಒಂದರಲ್ಲೇ 180 ಕೇಸ್ ಪಾಸಿಟಿವ್ ಬಂದಿದ್ದು, ಮುಖ್ಯವಾಗಿ ಮೆಡಿಕಲ್ ಕಾಲೇಜಿನ ಒಂದಿಷ್ಟು ಮಕ್ಕಳಿಗೆ ಕೊರೊನಾ ಪಾಸಿಟಿವ್ ದೃಢವಾಗಿದ್ದು, ಅವರ ಸಂಪರ್ಕದಲ್ಲಿದ್ದ ಮಕ್ಕಳನ್ನು ಪರೀಕ್ಷೆ ಮಾಡಿದಾಗ 25 ಕೇಸ್ ಪಾಸಿಟಿವ್ ಮತ್ತು ನೇವಲ್ ಬೇಸಿನಲ್ಲಿ 15 ಕೇಸ್ ಪಾಸಿಟಿವ್ ಬಂದಿದೆ. ಮೆಡಿಕಲ್ ಕಾಲೇಜಿನಲ್ಲಿ ಎಲ್ಲ ತರಗತಿಗಳನ್ನು ಬಂದ್ ಮಾಡಲಾಗಿದ್ದು, ಕೊನೆಯ ವರ್ಷದ ವಿದ್ಯಾರ್ಥಿಗಳ ಪರೀಕ್ಷೆ ಮಾತ್ರ ನಡೆಯುತ್ತಿದೆ. ಇನ್ನುಳಿದ ಎಲ್ಲ ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಲು ಆದೇಶಿಸಲಾಗಿದೆ ಎಂದರು
ಕೊರೊನಾ ತಡೆ ನಿಯಂತ್ರಣಕ್ಕಾಗಿ ಕಂಟೈನ್’ಮೆಂಟ್ ವಲಯದಲ್ಲಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವ ಅನಿವಾರ್ಯವಿದೆ. ಮತ್ತು ಪ್ರವಾಸಿ ತಾಣಗಳಿಗೆ ಕೊರೊನಾ ವ್ಯಾಕ್ಸಿನ್ ಪಡೆದವರಿಗೆ ಮಾತ್ರ ಅವಕಾಶ. ಸಾರ್ವಜನಿಕರು ಸಾಧ್ಯವಾದಷ್ಟು ಸ್ವಯಂ ಪ್ರೇರಿತರಾಗಿ ಕೊರೊನಾ ತಡೆಗೆ ಸಹಕಾರನೀಡಿ. ಹಾಗೂ ಕೇರಳ, ಮಹಾರಾಷ್ಟ್ರ, ಗೋವಾ ಇತರೆ ಹೊರಗಡೆಯಿಂದ ಬರುವವರಿಗೆ ಕೊರೊನಾ ನೆಗೆಟಿವ್ ಪ್ರಮಾಣ ಪತ್ರ ಕಡ್ಡಾಯ ಎಂದು ತಿಳಿಸಿದರು.
0-6 ವರ್ಷದ 7 ಮಕ್ಕಳಿಗೆ, 7-12 ವರ್ಷದ 5 ಮಕ್ಕಳಿಗೆ, 12-18 ವರ್ಷದ 41, ಎಲ್ಲ ಸೇರಿ ಒಟ್ಟೂ 53 ಮಕ್ಕಳಿಗೆ ಕೊರೊನಾ ಕೇಸ್ ಸಕ್ರಿಯವಾಗಿದೆ. ಹಾಗಾಗಿ 10 ದಿನಕೊಮ್ಮೆ ಹಾಸ್ಟೇಲ್’ಗಳಲ್ಲಿ ಸ್ಟಾಪ್’ಗಳಿಗೆ ರ್ಯಾಂಡಮ್ ಟೆಸ್ಟ್ ತಪ್ಪದೇ ಮಾಡಲಾಗುತ್ತಿದೆ. ಮತ್ತು ಅಲ್ಲಿಂದ ಹೊರ ಹೋಗುವ, ಬರುವವರಿಗೆ ಕೂಡಾ ಸ್ಯಾಂಪಲ್ ಕೊರೊನಾ ಟೆಸ್ಟ್ ಮಾಡುತ್ತಿದ್ದೇವೆ. ಮತ್ತು ನಮ್ಮ ಕಂಟ್ರೋಲ್ ರೂಂ, ಹಾಗೂ ಆರೋಗ್ಯ ಸಿಬ್ಬಂದಿಗಳಿಗೆ ಶ್ಯಾಡೋ ಟೀಂ ಮಾಡಲು ಆದೇಶ ಮಾಡಿದ್ದೇನೆ ಎಂದು ತಿಳಿಸಿದರು.
ತಾಲೂಕಾವಾರು ಪಾಸಿಟಿವಿಟಿ ಪ್ರಮಾಣದ ಆಧಾರದಲ್ಲಿ ಕಠಿಣ ಕಾನೂನು ಕ್ರಮ ಕೈಗೊಳ್ಳು ಸರ್ಕಾರ ಆದೇಶ ನೀಡಿದೆ. ಅದೇ ಪ್ರಕಾರ ಕಾರವಾರದಲ್ಲಿ ಹೆಚ್ಚಿನ ಪಾಸಿಟಿವಿಟಿ ಪ್ರಮಾಣವಿರುವುದರಿಂದ, ಅದರಲ್ಲೂ ನಗರ-ಗ್ರಾಮೀಣ ಎಂದು ವಿಭಾಗ ಮಾಡಿದ್ದೇವೆ. ಸದ್ಯಕ್ಕೆ ವಿದ್ಯಾರ್ಥಿಗಳ ಮಧ್ಯದಲ್ಲೇ ಕೊರೊನಾ ಹರಡುತ್ತಿದ್ದು, ಶಾಲೆಯಿಂದ-ಶಾಲೆ ಕ್ಲಸ್ಟರ್ ಆಗುತ್ತಿದೆ. – ಉತ್ತರ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್