ಶಿರಸಿ: ಸೋಂದಾ ಸ್ವರ್ಣವಲ್ಲೀಯಲ್ಲಿ ಸಮೀಪ ಇರುವ ಕೆರೆ ಅಭಿವೃದ್ಧಿ ಕಾಮಗಾರಿಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಚಾಲನೆ ನೀಡಿದರು.
ಮಠದ ಆವರಣದಲ್ಲಿ ಇರುವ ಗುರು ಮಂದಿರದ ಪಕ್ಕವೇ ಇರುವ ಈ ಕೆರೆಯ ಸುಧಾರಣೆಯನ್ನು ಗುಣಮಟ್ಟದಲ್ಲಿ ನಡೆಸುವಂತೆ ಸ್ಪೀಕರ್ ಸೂಚಿಸಿದರು.
ಸ್ವರ್ಣವಲ್ಲೀ ಮಠಾಧೀಶ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ಸಾನಿಧ್ಯ ನೀಡಿದ್ದರು. ಅಧಿಕಾರಿ ರಾಮಚಂದ್ರ ಗಾಂವಕರ್, ತಾ.ಪಂ. ಮಾಜಿ ಸದಸ್ಯ ನರಸಿಂಹ.ವಿ.ಹೆಗಡೆ ಬಕ್ಕಳ, ರವಿ ಹೆಗಡೆ ಹಳದೋಟ, ಗ್ರಾಪಂ ಮಾಜಿ ಅಧ್ಯಕ್ಷ ಮಂಜುನಾಥ ಭಂಡಾರಿ, ಪಂಚಾಯತ ಸದಸ್ಯರು ಇತರರು ಇದ್ದರು.