ಅಂಕೋಲಾ: ತಾಲೂಕಿನ ಹುಲಿದೇವರವಾಡ ವ್ಯಾಪ್ತಿಯ ಪೆಟ್ರೋಲ್ ಪಂಪ್ ಎದುರಿನ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಇಂದು ಬೆಳಗಿನ ಜಾವದಲ್ಲಿ ಲಾರಿ ಹಾಗೂ ಕಾರ್ ನಡುವೆ ಭೀಕರ ರಸ್ತೆ ಅಪಘಾತವಾಗಿದ್ದು, ಕಾರ್‍ನಲ್ಲಿ ಪ್ರಯಾಣಿಸುತ್ತಿದ್ದ ಓರ್ವ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟ ಘಟನೆ ವರದಿಯಾಗಿದೆ.
ಉಳಿದ ಈರ್ವರಿಗೆ ಗಂಭೀರ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಕಾರವಾರ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಂಕೋಲಾ ಕಡೆಯಿಂದ ಕಾರವಾರ ಮಾರ್ಗವಾಗಿ ಹೊರಟಿದ್ದ ಕೋಕ್ ಸಾಗಿಸುತ್ತಿದ್ದ ಲಾರಿಗೆ, ಹಿಂಬದಿಯಿಂದ ಬಂದ ಕಾರ್ ಅಪಘಾತ ಪಡಿಸಿಕೊಂಡಿದೆ ಎನ್ನಲಾಗಿದೆ. ನಸುಕಿನ ಜಾವದ ನಿದ್ದೆಯ ಮಂಪರ ಇಲ್ಲವೇ ಇತರೆ ಕಾರಣಗಳಿಂದ ಈ ಅಪಘಾತ ಸಂಭವಿಸಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಅಪಘಾತದ ತೀವ್ರತೆಗೆ ಕಾರ್, ಟ್ರಕ್ ನ ಹಿಂಬದಿಯಲ್ಲಿ ಸಿಲುಕಿ ಕೊಳ್ಳುವಂತಾಗಿದ್ದುಕಾರಿನ ಮುಂಭಾಗ ನುಜ್ಜುಗುಜ್ಜುಗೊಂಡಿದೆ.