ಯಲ್ಲಾಪುರ: ರೈತರ ಉತ್ಪನ್ನಗಳಿಗೆ ಲಾಭದಾಯಕ ಬೆಲೆ ಘೋಷಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಆಗ್ರಹಿಸಿ ತಹಸೀಲ್ದಾರ್ ಶ್ರೀಕೃಷ್ಣ ಕಾಮ್ಕರ್ ಅವರ ಮೂಲಕ ಭಾರತೀಯ ಕಿಸಾನ್ ಸಂಘದ ತಾಲೂಕು ಘಟಕದ ನೇತೃತ್ವದಲ್ಲಿ ರಾಷ್ಟ್ರಪತಿಗಳಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.
ಬೇರೆ ಕ್ಷೇತ್ರದ ಉತ್ಪಾದಕರು ತಾವು ಉತ್ಪಾದಿಸಿದ ಉತ್ಪನ್ನಗಳಿಗೆ ಬೆಲೆಯನ್ನು ತಾವೇ ನಿಗದಿ ಮಾಡುತ್ತಾರೆ. ಆದರೆ ರೈತರಿಗೆ ಮಾತ್ರ ಇದು ಸಾಧ್ಯವಾಗುತ್ತಿಲ್ಲ. ಮಧ್ಯವರ್ತಿಗಳು ದರ ನಿಗದಿ ಮಾಡುತ್ತಿದ್ದು ಇದೇ ರೀತಿ ಮುಂದುವರೆದರೆ ಕೃಷಿ ಕ್ಷೇತ್ರ ಅವನತಿಗೊಂಡು ಆಹಾರದ ಅಭಾವ ಉಂಟಾಗುತ್ತದೆ. ಈ ಹಿನ್ನೆಲೆಯಲ್ಲಿ ಉತ್ಪಾದನೆ ವೆಚ್ಚ ಆಧಾರದ ಮೇಲೆ ಲಾಭದಾಯಕ ಬೆಲೆ ದೊರೆಯುವಂತಾಗಬೇಕು. ಸರ್ಕಾರ ಕೇವಲ ಕನಿಷ್ಠ ಬೆಂಬಲ ಬೆಲೆ ಘೋಷಿಸಿದರೆ ಸಾಲದು. ಲಾಭಧಾಯಕ ಬೆಲೆ ಜತೆಗೆ ಖರೀದಿ ಗ್ಯಾರಂಟಿ ನೀಡುವಂತಾಗಬೇಕು. ಘೋಷಿತ ಬೆಲೆಗಿಂತ ಕಡಿಮೆ ಬೆಲೆ ಖರೀದಿ ಶಿಕ್ಷಾರ್ಹವಾಗಬೇಕು ಎಂದು ಆಗ್ರಹಿಸಿದರು.
ಭಾರತೀಯ ಕಿಸಾನ್ ಸಂಘದ ಜಿಲ್ಲಾ ಉಪಾಧ್ಯಕ್ಷ ನರಸಿಂಹ ಸಾತೊಡ್ಡಿ, ಜಿಲ್ಲಾ ಕೋಶಾಧ್ಯಕ್ಷ ಗೋಪಾಲಕೃಷ್ಣ ಬಾಳೆಗದ್ದೆ, ಜಿಲ್ಲಾ ಸಹಕಾರ್ಯದರ್ಶಿ ಪ್ರಸನ್ನ ವಾಗಳ್ಳಿ, ತಾಲೂಕು ಅಧ್ಯಕ್ಷ ವಿಘ್ನೇಶ್ವರ ಭಟ್ಟ ಹೊಸ್ತೋಟ, ಕಾರ್ಯದರ್ಶಿ ಸುದರ್ಶನ ಭಟ್ಟ ಮಲವಳ್ಳಿ, ಸಂಘದ ಪ್ರಮುಖರಾದ ಶ್ರೀಪಾದ ಮೆಣಸುಮನೆ, ನಾಗೇಂದ್ರ ಪತ್ರೇಕರ್,ಶಿವಪ್ರಸಾದ ಭಟ್ಟ ಕಳಚೆ, ಉಮಾಶಂಕರ ಜಡ್ಡಿಗದ್ದೆ,ಗೋಪಾಲಕೃಷ್ಣ ಕಿರವತ್ತಿ, ಶ್ಯಾಮ ಹೆಗಡೆ ಕಳಚೆ, ಶ್ರೀಧರ ಭಟ್ಟ, ದೀಪಕ ಭಟ್ಟ ಕುಂಕಿ, ವಿವಿಧ ಗ್ರಾಮಸಮಿತಿ ಪದಾಧಿಕಾರಿ ತಾಲೂಕು ಪದಾಧಿಕಾರಿಗಳು ಇದ್ದರು