• Slide
    Slide
    Slide
    previous arrow
    next arrow
  • ಚಿಕಾಗೋ ಸಮ್ಮೇಳನಕ್ಕೆ ತೆರಳಿದ ಸ್ವಾಮಿ ವಿವೇಕಾನಂದರ ಗುರುಭಕ್ತಿ

    300x250 AD

    ವ್ಯಕ್ತಿ ವಿಶೇಷ: ಸರ್ವಧರ್ಮ ಸಮ್ಮೇಳನಕ್ಕಾಗಿ ಸ್ವಾಮಿ ವಿವೇಕಾನಂದರು ಭಾರತದ ಪ್ರತಿನಿಧಿಯಾಗಿ ಚಿಕಾಗೋ, ಅಮೇರಿಕಾಗೆ ಹೋಗಿದ್ದರು. ಅಲ್ಲಿ ಸ್ವಾಮಿ ವಿವೇಕಾನಂದರು ಎಲ್ಲ ಶ್ರೋತೃಗಳ ಮನಸ್ಸನ್ನು ಗೆದ್ದು `ನ ಭೂತೋ ನ ಭವಿಷ್ಯತಿ’ ಎಂಬಂತೆ ಎಲ್ಲರ ಮೇಲೆ ಪ್ರಭಾವ ಬೀರಿದರು. ಇದರಿಂದಾಗಿ ಸನಾತನ ಹಿಂದೂ ಧರ್ಮದ ಶ್ರೇಷ್ಠತೆ ಪಾಶ್ಚಾತ್ಯರಿಗೆ ತಿಳಿಯಿತು. ಆಗ ಸ್ವಾಮಿ ವಿವೇಕಾನಂದರಿಗೆ ಅನೇಕ ಸಂಸ್ಥೆಗಳಿಂದ ವ್ಯಾಖ್ಯಾನ ನೀಡಬೇಕೆಂದು ಆಮಂತ್ರಣ ಬರಲು ಶುರುವಾಯಿತು. ಅಲ್ಲಿ ಅವರು ಜ್ಞಾನಯೋಗ, ಭಕ್ತಿಯೋಗ, ಕರ್ಮಯೋಗ ಮತ್ತು ರಾಜಯೋಗದ ಬಗ್ಗೆ ಅನೇಕ ವಿಷಯಗಳನ್ನು ಮಂಡಿಸಿದರು. ಎಲ್ಲಾ ಶ್ರೋತೃಗಳು ಮಂತ್ರಮುಗ್ಧರಾಗಿ, ಸಮಯದರಿವಿಲ್ಲದೆ ಸ್ವಾಮೀಜಿಯವರ ಮಾತನ್ನು ಕೇಳುತ್ತಿದ್ದರು. ಜನರಿಗೆ ಇನ್ನೂ ಮುಂದಿನ ವಿಷಯ ಕೇಳಬೇಕೆಂದು ತೀವ್ರ ಇಚ್ಛೆ ಉಂಟಾಗುತ್ತಿತ್ತು.

    ಇಂತಹ ಒಂದು ಕಾರ್ಯಕ್ರಮ ಮುಗಿದ ನಂತರ ಶ್ರೋತೃಗಳು ಸ್ವಾಮಿ ವಿವೇಕಾನಂದರನ್ನು ತೀವ್ರ ಜಿಜ್ಞಾಸೆಯಿಂದ ಪ್ರಶ್ನೆಗಳನ್ನು ಕೇಳಿದರು, “ಹೇ ಮಹಾನ ಸಂನ್ಯಾಸಿ, ನೀವು ಈ ಅಲೌಕಿಕ ಜ್ಞಾನವನ್ನು ಯಾವ ಶಾಲೆಯಲ್ಲಿ ಅಥವಾ ವಿಶ್ವವಿದ್ಯಾಲಯದಲ್ಲಿ ಕಲಿತಿರಿ ? ಕೃಪೆ ಮಾಡಿ ನಮಗೆ ವಿಸ್ತಾರವಾಗಿ ಹೇಳಿರಿ”. ಅದಕ್ಕೆ ಸ್ವಾಮಿ ವಿವೇಕಾನಂದರು, “ಅವಶ್ಯವಾಗಿ, ಈ ಜ್ಞಾನವು ನನಗೆ ಕೇವಲ ನನ್ನ ಗುರುಗಳಿಂದ ಸಿಕ್ಕಿದೆ” ಎಂದು ಹೇಳಿದರು. ಆಗ ಶ್ರೋತೃಗಳು ಅಧೀರರಾಗಿ, “ನಿಮ್ಮ ಗುರುಗಳು ಯಾರು?” ಎಂದು ಕೇಳಿದರು. ಆಗ ಸ್ವಾಮಿ ವಿವೇಕಾನಂದರು ಹೇಳಿದರು,” ನಿಮಗೆ ಈ ಬಗ್ಗೆ ತಿಳಿಯಲು ತೀವ್ರ ಜಿಜ್ಞಾಸೆ ಇದ್ದರೆ ನಾನು ಅವಶ್ಯವಾಗಿ ಹೇಳುವೆನು”. ಅದೇ ದಿವಸ ಸ್ವಾಮಿ ವಿವೇಕಾನಂದರ ವಿಶೇಷ ಪ್ರವಚನದ ಆಯೋಜನೆಯನ್ನು ಮಾಡಲಾಯಿತು. ಪ್ರವಚನದ ಹೆಸರು ನನ್ನ ಗುರು', ಇದರ ಕುರಿತು ವರ್ತಮಾನ ಪತ್ರಿಕೆಗಳಲ್ಲಿ ಪ್ರಸಿದ್ಧಿಯನ್ನು ನೀಡಲಾಯಿತು. ಹಾಗಾಗಿ ಕುತೂಹಲದಿಂದ ಶ್ರೋತೃಗಳ ಸಾಗರವೇ ಅಲ್ಲಿ ನಿರ್ಮಾಣವಾಯಿತು. ಪ್ರವಚನ ಶುರುವಾಗುವ ವೇಳೆ ಸ್ವಾಮಿ ವಿವೇಕಾನಂದರು ಎದ್ದು ವ್ಯಾಸಪೀಠಕ್ಕೆ ಬರುತ್ತಿದ್ದರು ಆಗ ಒಮ್ಮೆಲೆ ಶಾಂತಿ ನಿರ್ಮಾಣವಾಯಿತು. ನೆರೆದಿರುವ ಜನಸಾಗರವನ್ನು ನೋಡಿ ಸ್ವಾಮಿ ವಿವೇಕಾನಂದರಿಗೆ ಸದ್ಗುರುಗಳ ಬಗ್ಗೆ ಕೃತಜ್ಞತೆಯು ಉಕ್ಕಿ ಬಂತು. ಅವರು ಮಾತಾಡಲು ಶೂರು ಮಾಡಿದಾಗ ಮೊದಲು ಹೇಳಿದ್ದುನನ್ನ ಗುರುದೇವ !’ ಈ ವಾಕ್ಯವನ್ನು ಅತ್ಯಂತ ಭಾವಾವಸ್ಥೆಯಲ್ಲಿಉದ್ಗರಿಸಿದ್ದರು.

    ಅವರು ಭಾವದಲ್ಲಿ ಹೇಳಿದ ಕಾರಣ ಅವರ ಕಣ್ಣಿನ ಮುಂದೆ ಸಾಕ್ಷಾತ್ ಗುರುಗಳ ರೂಪ ಕಾಣಿಸಿತು. ಇದರಿಂದಾಗಿ ಅವರ ಕಂಠ ಗದ್ಗದಿತವಾಯಿತು. ಕಣ್ಣುಗಳಿಂದ ಅಶ್ರುಗಳು ಬರಲಾರಂಭಿಸಿ ಮತ್ತು ರೋಮಾಂಚಿತವಾಗಿ ನಡುಗಲಾರಂಭಿಸಿದರು. ಇದರಿಂದಾಗಿ ಅವರು 10 ನಿಮಿಷ ಏನೂ ಹೇಳಲೇ ಇಲ್ಲ. ಅವರ ಈ ಅವಸ್ಥೆಯನ್ನು ನೋಡಿ ಶ್ರೋತೃಗಳು ಆಶ್ಚರ್ಯಚಕಿತರಾಗಿದ್ದರು. ಇದಕ್ಕೆ ಮುಂಚೆ ದೇಹಕ್ಕೆ ನೋವಾದಾಗ, ತುಂಬಾ ದುಃಖಕರ ಪ್ರಸಂಗ ನಡೆದಾಗ ಅಥವಾ ತಂದೆ-ತಾಯಿ, ನೆಂಟರ ಮೃತ್ಯುವಾದಾಗ ಮಾತ್ರ ಕಣ್ಣಲ್ಲಿ ನೀರು ಬರುವುದನ್ನು ಜನರು ನೋಡಿದ್ದರು. ಈ ಪ್ರಸಂಗದ ಮಾಧ್ಯಮದಿಂದ ನೆರೆದವರೆಲ್ಲರಿಗೂ ಗುರುಗಳು ಯಾರು, ಅವರ ಮಹತ್ವವೇನು ಎಂಬುದು ತಿಳಿಯಿತು.

    ಗುರೋರ್ಮೌನಂ ತು ವ್ಯಾಖ್ಯಾನಂ ಶಿಷ್ಯಸ್ತು ಛಿನ್ನಸಂಶಯಃ

    300x250 AD

    ಅರ್ಥ : ಗುರುಗಳು ಮೌನದಲ್ಲಿ ಶಿಷ್ಯನಿಗೆ ಕಲಿಸಿದರು ಮತ್ತು ಶಿಷ್ಯನು ಮೌನದಲ್ಲಿ ಅದನ್ನು ಕಲಿತನು.

    ಆಧಾರ : : Hindujagruti.org

    ಸಂಗ್ರಹ
    ಶ್ರೀ ಶರತ್ ಕುಮಾರ್

    ಉತ್ತರಕನ್ನಡ ಜಿಲ್ಲೆ
    ಸಂಪರ್ಕ : 9480567514

    Share This
    300x250 AD
    300x250 AD
    300x250 AD
    Leaderboard Ad
    Back to top