• first
    second
    third
    previous arrow
    next arrow
  • ಮಕರ ಸಂಕ್ರಾಂತಿಗೆ ಸಹಸ್ರಲಿಂಗಕ್ಕೆ ಸಾರ್ವಜನಿಕ ಪ್ರವೇಶ ನಿರ್ಬಂಧ

    300x250 AD

    ಶಿರಸಿ: ಜಿಲ್ಲೆಯಲ್ಲಿ ಕೊರೊನಾ 3ನೇ ಅಲೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಆದೇಶದಂತೆ ತಾಲೂಕಿನ ಭೈರುಂಬೆ ಗ್ರಾಪಂ ವ್ಯಾಪ್ತಿಯ ಪುಣ್ಯ ಕ್ಷೇತ್ರ ಸಹಸ್ರಲಿಂಗಕ್ಕೆ ಮಕರ ಸಂಕ್ರಾಂತಿಯ ದಿನವಾದ ಜ.14 ಮತ್ತು 15ರಂದು ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ ಎಂದು ಗ್ರಾಪಂ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

    300x250 AD


    ಸಂಕ್ರಾಂತಿ ಸಂದರ್ಭದಲ್ಲಿ ಸಾವಿರಾರು ಭಕ್ತಾದಿಗಳು ಸಹಸ್ರಲಿಂಗಕ್ಕೆ ಬರುವುದು ಒಂದು ಸಂಪ್ರದಾಯದಂತೆ ಬೆಳೆದು ಬಂದಿದೆ. ಈ ಸಂದರ್ಭದಲ್ಲಿ ಜಾತ್ರೆಯೇ ಸೇರಿದಂತೆ ಆಗುತ್ತದೆ. ಅಂಗಡಿ ಮುಗ್ಗಟ್ಟುಗಳು ವ್ಯಾಪಾರ ನಡೆಸುವಷ್ಟರಮಟ್ಟಿಗೆ ಜನಜಂಗುಳಿ ಸೇರುತ್ತಿದ್ದುದು ಗಮನೀಯ. ಜಿಲ್ಲೆಯ ವಿವಿಧ ತಾಲೂಕುಗಳಿಂದಲೂ ಇಲ್ಲಿಗೆ ಭಕ್ತರು ಬರುತ್ತಾರೆಂಬುದನ್ನು ಇಲ್ಲಿ ಉಲ್ಲೇಖಿಸಬಹುದು.

    Share This
    300x250 AD
    300x250 AD
    300x250 AD
    Back to top