• first
  second
  third
  previous arrow
  next arrow
 • ಚಂಪಾ ನಿಧನಕ್ಕೆ ಅಂಕೋಲಾ ಮಿತ್ರ ಸಂಗಮದಿಂದ ಸಂತಾಪ

  300x250 AD

  ಅಂಕೋಲಾ: ಕನ್ನಡದ ಹಿರಿಯ ಸಾಹಿತಿ, ಪ್ರೊ. ಚಂದ್ರಶೇಖರ ಪಾಟೀಲರ ನಿಧನಕ್ಕೆ ಅಂಕೋಲೆಯ ಮಿತ್ರ ಸಂಗಮದ ಸದಸ್ಯರು ಸಂತಾಪ ವ್ಯಕ್ತಪಡಿಸಿದ್ದು, ಚಂಪಾ ನಿಧನದಿಂದ ಕನ್ನಡ ಸಾರಸ್ವತ ಲೋಕದ ಬಹುದೊಡ್ಡ ಕೊಂಡಿಯೊಂದು ಕಳಚಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.


  ಮಿತ್ರ ಸಂಗಮದ ಸದಸ್ಯರಾದ ಹಿರಿಯ ಸಾಹಿತಿ ಮೋಹನ ಹಬ್ಬು ಚಂಪಾ ಅವರ ನಿಧನದಿಂದ ಕನ್ನಡ ಸಾಹಿತ್ಯ ಲೋಕ ನೇರ ನುಡಿಯ ಕ್ರಿಯಾಶೀಲ ವ್ಯಕ್ತಿಯೊಬ್ಬನನ್ನು ಕಳೆದುಕೊಂಡಿದೆ ಎಂದರು. ಕನ್ನಡ ಸಾರಸ್ವತ ಲೋಕಕ್ಕೆ ಅಪಾರ ನಷ್ಟವಾಗಿದೆಯೆಂದರು.
  ಯಕ್ಷಗಾನ ಕಲಾವಿದ ಕತೆಗಾರ ಡಾ. ರಾಮಕೃಷ್ಣ ಗುಂದಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತ ಕ್ರಾಂತಿಕಾರಿ ಮನೋಭಾವದ ಚಂಪಾ, ಅಪ್ಪಟಕನ್ನಡ ಹೋರಾಟಗಾರರಾಗಿದ್ದಾರೆ. ಗೋಕಾಕ್ ಚಳುವಳಿಯಲ್ಲಿ ಅವರು ಮುಂಚೂಣಿಯಲ್ಲಿದುದನ್ನು ಮರೆಯಲಾಗದೆಂದರು. ಅವರ ನಿಧನದಿಂದ ಕನ್ನಡ ಸಾರಸ್ವತ ಲೋಕಕ್ಕೆ ಬಹುದೊಡ್ಡ ಹಾನಿಯಾಗಿದೆಯೆಂದರು. ದ್ವೇಷವನ್ನುಕೂಡಾ ಪ್ರೀತಿಯಿಂದ ಮಾಡಿದ ಚಂಪಾ, ಮಾತಿನಲ್ಲಿ ಕಟುಕಿದ್ದರೂ ಎಲ್ಲರ ಲೇಸನ್ನೇ ಬಯಸಿದವರೂ ಎಂದು ಲೇಖಕ ಮಹಾಂತೇಶ ರೇವಡಿ ಅಭಿಪ್ರಾಯಪಟ್ಟರು.
  ಅಂಕೋಲೆಯ ದಿನಕರ ಸ್ಮಾರಕ ಪ್ರತಿಷ್ಠಾನ ನೀಡುವ ದಿನಕರ ಪ್ರಶಸ್ತಿಯನ್ನು ಅವರ ಅರ್ಧ ಸತ್ಯದ ಹುಡುಗಿ ಕಾವ್ಯ ಸಂಕಲನಕ್ಕೆ ಪ್ರದಾನ ಮಾಡಿದುದನ್ನು ಸಾಹಿತಿಗೋಪಾಲಕೃಷ್ಣ ನಾಯಕ ನೆನಪಿಸಿಕೊಂಡರು.

  300x250 AD


  ಪ್ರೊ. ವೇರ್ಣೆಕರತಮ್ಮ ಸಂತಾಪ ವ್ಯಕ್ತಪಡಿಸುತ್ತ ಚಂಪಾ ಅವರು ನಾಟಕಕಾರ, ಸಂಘಟಕಾರ, ಪತ್ರಿಕಾ ಸಂಪಾದಕ, ಕನ್ನಡ ಹೋರಾಟಗಾರ ಹೀಗೆ ಬಹುಮುಖ ವ್ಯಕ್ತಿತ್ವ ಹೊಂದಿದ್ದರೆಂದರು. ಲೇಖಕ ಜಿ. ಪ್ರೇಮಾನಂದ ಮಾತನಾಡುತ್ತ ಚಂಪಾ ಉತ್ತರಕನ್ನಡಜಿಲ್ಲೆಯ ಅಂಕೋಲೆಗೆ ಹಲವಾರು ಸಾರಿ ಬಂದಿದ್ದು ಉತ್ತರಕನ್ನಡ ಜಿಲ್ಲೆಯಲ್ಲಿ ಅವರಿಗೆ ಅಪಾರ ಸಂಖ್ಯೆಯ ಸ್ನೇಹಿತರಿದ್ದಾರೆಂದರು. ಸಿ. ಅಶ್ವತ್ಥರವರು ಹಾಡಿರುವ ಚಂಪಾರವರ ಗೀತೆಗಳನ್ನು ನೆನಪಿಸಿಕೊಂಡರು.

  Share This
  300x250 AD
  300x250 AD
  300x250 AD
  Back to top