• first
  second
  third
  Slide
  previous arrow
  next arrow
 • ಈಡೇರದ ಅತಿಥಿ ಉಪನ್ಯಾಸಕರ ಬೇಡಿಕೆ; ವಿದ್ಯಾರ್ಥಿಗಳ ಪರದಾಟ

  300x250 AD

  ಅಂಕೋಲಾ : ಸೇವಾ ಭದ್ರತೆ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯಾದ್ಯಂತ ಅತಿಥಿ ಉಪನ್ಯಾಸಕರು ನಡೆಸುತ್ತಿರುವ ಪ್ರತಿಭಟನೆ ಇಂದು 32ನೇ ದಿನಕ್ಕೆ ಕಾಲಿಟ್ಟಿದೆ. ಅಪ್ಪ ಅಮ್ಮನ ಜಗಳದಲ್ಲಿ ಕೂಸು ಬಡವಾಯ್ತು ಎನ್ನುವ ಹಾಗೆ ಸರಕಾರ ಮತ್ತು ಅತಿಥಿ ಉಪನ್ಯಾಸಕರ ಜಿದ್ದಾಜಿದ್ದಿನಲ್ಲಿ ಅಂಕೋಲಾದ ಸರಕಾರಿ ಪದವಿ ಕಾಲೇಜು ವಿದ್ಯಾರ್ಥಿಗಳು ಪಾಠ-ಪ್ರವಚನಕ್ಕಾಗಿ ಪರದಾಡುವಂತಾಗಿದೆ.

  ರಾಜ್ಯದಲ್ಲಿ 420 ಸರ್ಕಾರಿ ಪದವಿ ಕಾಲೇಜುಗಳಿದ್ದು, 8 ಲಕ್ಷ ವಿದ್ಯಾರ್ಥಿಗಳಿದ್ದಾರೆ. 4000 ಸಾವಿರ ಕಾಯಂ ಉಪನ್ಯಾಸಕರಿದ್ದರೆ, 19 ಸಾವಿರ ಅತಿಥಿ ಉಪನ್ಯಾಸಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.ಒಂದು ರೀತಿಯಲ್ಲಿ ಸರ್ಕಾರಿ ಪದವಿ ಕಾಲೇಜುಗಳಲ್ಲಿ ತರಗತಿಗಳು ನಡೆಯುತ್ತಿರುವುದೇ ಅತಿಥಿ ಉಪನ್ಯಾಸಕರಿಂದಾಗಿ ಎನ್ನುವಂತಾಗಿದೆ. ಅಂಕೋಲಾದ ಸರ್ಕಾರಿ ಪದವಿ ಕಾಲೇಜಿನಲ್ಲಿ 800 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸದ್ಯ 16 ಖಾಯಂ ಉಪನ್ಯಾಸಕರಿದ್ದು ಉಳಿದ 43 ಉಪನ್ಯಾಸಕರು ಅತಿಥಿ ಉಪನ್ಯಾಸಕರೇ ಆಗಿದ್ದಾರೆ. ಕಾಲೇಜುಗಳಲ್ಲಿ ಭೌತಿಕ ತರಗತಿಗಳು ಆರಂಭವಾಗಿ ಮೂರು ತಿಂಗಳμÉ್ಟೕ ಕಳೆದಿದೆ. ಈಗ ಅತಿಥಿ ಉಪನ್ಯಾಸಕರೇ ಪ್ರತಿಭಟನೆಗೆ ಇಳಿದಿರುವ ಕಾರಣ ಸರ್ಕಾರಿ ಪದವಿ ಕಾಲೇಜಿನ ವಿದ್ಯಾರ್ಥಿಗಳಲ್ಲಿ ಆತಂಕ ಮೂಡಿದೆ. ಪರೀಕ್ಷೆಗೆ ಸಿದ್ಧತೆ ನಡೆಸುವುದು ಹೇಗೆನ್ನುವ ಆತಂಕ ಕಾಡಲು ಶುರುವಾಗಿದೆ.

  ಅಂಕೋಲಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಈ ಮೊದಲು ಉಪನ್ಯಾಸಕರ ಕೊರತೆ ಅಷ್ಟಾಗಿ ಕಾಡುತ್ತಿರಲಿಲ್ಲ. 16 ಖಾಯಂ ಉಪನ್ಯಾಸಕರ ಜೊತೆ 43 ಅತಿಥಿ ಉಪನ್ಯಾಸಕರು ಪಾಠ-ಪ್ರವಚನಗಳನ್ನು ಬೋಧಿಸುತ್ತಾ ವಿದ್ಯಾರ್ಥಿಗಳಿಗೆ ಪಾಠಗಳ ಕೊರತೆ ಆಗದಂತೆ ನೋಡಿಕೊಳ್ಳುತ್ತಿದ್ದರು. ಆದರೆ ಕಳೆದ 30 ದಿನಗಳಿಂದ ಅತಿಥಿ ಉಪನ್ಯಾಸಕರು ತಮ್ಮ ಬೇಡಿಕೆ ಈಡೇರಿಕೆಗಾಗಿ ಮುಷ್ಕರ ನಡೆಸುತ್ತಿರುವದರಿಂದ ವಿದ್ಯಾರ್ಥಿಗಳಿಗೆ ಸರಿಯಾದ ತರಗತಿಗಳು ನಡೆಯದೆ ವಿದ್ಯಾರ್ಥಿಗಳ ಭವಿಷ್ಯ ತ್ರಿಶಂಕು ಸ್ಥಿತಿಗೆ ಬಂದು ನಿಂತಿದೆ.
  ಇದರಿಂದ ಬೇಸತ್ತ ಕಾಲೇಜಿನ ವಿದ್ಯಾರ್ಥಿಗಳು, ತರಗತಿಗಳು ಸೂಕ್ತವಾಗಿ ನಡೆಯುತ್ತಿಲ್ಲ ಈ ಸಮಸ್ಯೆಯನ್ನು ಶೀಘ್ರವಾಗಿ ಬಗೆಹರಿಸಿ ಎಂದು ಆಗ್ರಹಿಸುತ್ತಿದ್ದಾರೆ.

  ಅಸಹಾಯಕತೆಯಲ್ಲಿ ಪ್ರಾಂಶುಪಾಲರು :
  ಅತಿಥಿ ಉಪನ್ಯಾಸಕರು ಸೇವಾ ಭದ್ರತೆ ಹಾಗೂ ವೇತನ ಹೆಚ್ಚಳಕ್ಕಾಗಿ ಧರಣಿ ಕುಳಿತಿದ್ದರಿಂದ ಕಾಲೇಜಿನ ಪ್ರಾಂಶುಪಾಲರು ಅಸಹಾಯಕರಾಗಬೇಕಾಗಿದೆ.
  ಸರ್ಕಾರ ಮತ್ತು ಕಾಲೇಜು ಶಿಕ್ಷಣ ಇಲಾಖೆ ಇದರ ಬಗ್ಗೆ ತಕ್ಷಣ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು. ಅಲ್ಲಿಯವರೆಗೂ ನಾವು ಏನೂ ಮಾಡಲಾಗದ ಸ್ಥಿತಿಯಲ್ಲಿದ್ದೇವೆ ಎನ್ನುತ್ತಾರೆ ಪ್ರಾಂಶುಪಾಲರು. ಖಾಯಂ ಉಪನ್ಯಾಸಕರಿಂದ ಹೆಚ್ಚಿನ ತರಗತಿಯನ್ನು ತೆಗೆದುಕೊಂಡು ಸರಿದೂಗಿಸಲಾಗುತ್ತಿದೆಯಾದರೂ ಇದು ಧೀರ್ಘಾವಧಿಗೆ ಸಾಧ್ಯವಿಲ್ಲ.ಹೆಚ್ಚೆಂದರೆ ಆನ್‍ಲೈನ್ ಶಿಕ್ಷಣವನ್ನು ನೀಡಬಹುಹುದು ಎನ್ನುತ್ತಾರೆ.

  ವಿದ್ಯಾರ್ಥಿ: ಕಳೆದ ಎರಡು ವರ್ಷಗಳಿಂದ ಕೊರೋನಾದಿಂದಾಗಿ ತರಗತಿಗಳೇ ನಡೆದಿಲ್ಲ, ಇನ್ನೇನು ಎಲ್ಲಾ ಸಹಜ ಸ್ಥಿತಿಗೆ ಬಂತು ಎನ್ನುವಾಗ ಅತಿಥಿ ಉಪನ್ಯಾಸಕರು ಮುಷ್ಕರ ನಿರತರಾಗಿದ್ದಾರೆ ಹೀಗಾದರೆ ನಮ್ಮ ವಿದ್ಯಾಭ್ಯಾಸ ಏನಾಗಬೇಕು ಸರ್ಕಾರ ಏನಾದರೂ ಮಾಡಿಕೊಳ್ಳಲಿ ನಮಗೆ ತರಗತಿಗಳು ನಡೆಯಬೇಕು. ಎಲ್ಲಿ ನಮ್ಮ ವಿದ್ಯಾಭ್ಯಾಸ ಹಾಳಾಗಿ ನಮ್ಮ ತಂದೆ-ತಾಯಿಯೆ ಆಸೆ ನೆರವೇರುವುದಿಲ್ಲವೊ ಎಂಬ ಆತಂಕದಲ್ಲಿದ್ದೇವೆ ಗ್ರಾಮಾಂತರ ಪ್ರದೇಶದಿಂದ ಕಷ್ಟಪಟ್ಟು ಕಾಲೇಜಿಗೆ ಬಂದರೆ ಇಲ್ಲಿ ತರಗತಿಗಳು ನಡೆಯುತ್ತಿಲ್ಲ. ಸರ್ಕಾರ ಶೀಘ್ರವಾಗಿ ಅತಿಥಿ ಉಪನ್ಯಾಸಕರ ಸಮಸ್ಯೆ ಬಗೆಹರಿಸಲಿ, ಅಥವಾ ಬದಲಿ ಉಪನ್ಯಾಸಕರನ್ನು ನೇಮಿಸಲಿ.

  ಚಿಂತೆಗೀಡು ಮಾಡಿದ ಭವಿಷ್ಯ.
  ಸರ್ಕಾರ ಸೂಕ್ತ ಸಮಯದಲ್ಲಿ ನೇಮಕಾತಿಯನ್ನು ಮಾಡಿದ್ದರೆ ಇಂದು ಅತಿಥಿ ಉಪನ್ಯಾಸಕರ ಸಮಸ್ಯೆಯೆ ಉದ್ಭವಿಸುತ್ತಿರಲಿಲ್ಲ. ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗಾಗಿ ನಮ್ಮ ಜೀವಮಾನವನ್ನೆ ತೇಯ್ದಿದ್ದೇವೆ. ತಿಂಗಳಿಗೆ ₹.11,000 ದಿಂ ₹.13,000 ಗೌರವಧನ ನೀಡಲಾಗುತ್ತಿದೆ ಇದು ಸರಕಾರವೇ ನಿಗದಿಪಡಿಸಿದ ಮೂಲ ವೇತನಕ್ಕಿಂತ ಕಡಿಮೆ. ಕೆಲವು ಅತಿಥಿ ಉಪನ್ಯಾಸಕರು ಸರ್ಕಾರಿ ಕೆಲಸಗಳಿಗೆ ಅರ್ಜಿ ಹಾಕುವ ವಯೋಮಿತಿ ಮೀರಿದೆ, ಈಗ ನಡೆಯುತ್ತಿರುವ ನೇಮಕಾತಿಯಲ್ಲಿ ನಮಗೆ ವಯೋಮಿಯಲ್ಲಿ ಸಡಿಲಿಕೆಯನ್ನಾದರೂ ಮಾಡಿ ನಮಗೂ ಅರ್ಜಿ ಸಲ್ಲಿಸಲು ಅವಕಾಶ ನೀಡಿ ಎಂದು ಸರ್ಕಾರವನ್ನು ಕೇಳುತ್ತಿದ್ದೇವೆ. ಆದರೆ ಸರ್ಕಾರದ ಮೊಂಡುತನದಿಂದ ಅಮಾಯಕ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯವು ಡೋಲಾಯಮಾನವಾಗಿದೆ. ನಮ್ಮ ಬೇಡಿಕೆ ನ್ಯಾಯಯುತವಾಗಿದ್ದು, ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. 15-20 ವರ್ಷಗಳಿಂದ ಅತಂತ್ರ ಸ್ಥಿತಿಯಲ್ಲಿಯೇ ಸೇವೆ ಸಲ್ಲಿಸುತ್ತಿದ್ದೇವೆ. ಬೆಳಗಾವಿ ಅಧಿವೇಶನದಲ್ಲಿ ಅತಿಥಿ ಉಪನ್ಯಾಸಕರ ಸಮಸ್ಯೆ ಕುರಿತು ಚರ್ಚೆಯಾಗಿದೆ. ಉನ್ನತ ಶಿಕ್ಷಣ ಸಚಿವರು ಬೇಡಿಕೆ ಈಡೇರಿಸುವ ಭರವಸೆಯನ್ನೂ ನೀಡಿದ್ದಾರೆ. ಆದರೆ, ಸೇವಾಭದ್ರತೆ ಹಾಗೂ ವಿವಿಧ ಬೇಡಿಕೆ ಈಡೇರಿಕೆ ಕುರಿತು ಲಿಖಿತ ಭರವಸೆ ನೀಡುವಂತೆ ಉಪನ್ಯಾಸಕರು ಪಟ್ಟು ಹಿಡಿದಿರುವ ಹಿನ್ನೆಲೆಯಲ್ಲಿ ಪ್ರತಿಭಟನೆ ಮುಂದುವರೆದಿದೆ.
  ——- ವಯೋಮಿತಿ ಮೀರುತ್ತಿರುವ ಉಪನ್ಯಾಸಕ

  300x250 AD

  ಪೋಷಕರ ಅಳಲು:
  ಮಕ್ಕಳು ವಿದ್ಯಾವಂತರಾಗಲಿ ಎಂದು ಹೊಟ್ಟೆ-ಬಟ್ಟೆ ಕಟ್ಟಿ ಮಕ್ಕಳಿಗೆ ಸೂಕ್ತ ವಿದ್ಯಾಭ್ಯಾಸ ಕೊಡಿಸಲು ಕಾಲೇಜಿಗೆ ಕಳುಹಿಸಿತ್ತಿದ್ದೇವೆ. ಅದರೆ ಪಾಠ-ಪ್ರವಚನಗಳು ಸರಿಯಾಗಿ ನಡೆಯದೆ ಕಾಲೇಜಿಗೆ ಕಳುಹಿಸಬೇಕೊ ಬೇಡವೊ ಎಂಬ ಗೊಂದಲದಲ್ಲಿದ್ದೇವೆ.

  2017 ರಲ್ಲಿ ನಿಯುಕ್ತಿಗೊಂಡ ಬಹುತೇಕ ಖಾಯಂ ಉಪನ್ಯಾಸಕರಲ್ಲಿ ಕೆಲವರು ಬೇರೆ ಜಿಲ್ಲೆಗೆ ಡೆಪ್ಯುಟೇಶನ ಆಗಿ ಹೋಗಿದ್ದು ಖಾಯಂ ಉಪನ್ಯಾಸಕರ ಕೊರತೆಯೂ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಹಿನ್ನಡೆಯುಂಟು ಮಾಡಿದೆ. ಹೀಗಾದರೆ ನಾವು ಪರೀಕ್ಷೆ ಎದುರಿಸುವುದು ಹೇಗೆ ಎಂದು ವಿದ್ಯಾರ್ಥಿಗಳು ಬೇಸರ ವ್ಯಕ್ತಪಡಿಸುತ್ತಾರೆ. ಕಾಲೇಜಿನಲ್ಲಿ ಬಿಬಿಏ ಕೋರ್ಸ ಇದ್ದು ನಿರ್ವಹಿಸುವವರು ಇಲ್ಲದೆ ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗಿದೆ.

  ಸರಕಾರ ಈಗಾಗಲೇ 1236 ಉಪನ್ಯಾಸಕರ ನೇಮಕಾತಿಗೆ ಮುಂದಾಗಿದೆ ಆದರೆ ಪ್ರತಿಭಟನಾಕಾರರು ಅದಕ್ಕೆ ತಡೆ ನೀಡುವಂತೆ ಕೋರಿದ್ದಾರೆ. ಈ ನಿರ್ಣಯ ಅರ್ಹತೆ ಹೊಂದಿರುವ ಪ್ರತಿಭಾವಂತ ಅಬ್ಯರ್ಥಿಗಳಿಗೆ ತೊಡಕಾಗಲಿದೆ.

  ಪ್ರತಿಭಟನೆಯಲ್ಲಿ ಪಾಲ್ಗೊಂಡವರಲ್ಲಿ ಹಲವರು ಸಂಘಟನೆಯ ಮೇಲಿನವರ ಒತ್ತಡದಲ್ಲಿ ಭಾಗವಹಿಸಿರುವ ಅಸಮಾಧಾನವೂ ಇದೆ. ನೂತನ ಸದಸ್ಯರನ್ನು ಇನ್ನೂ ಸಂಘಕ್ಕೆ ಸೇರ್ಪಡೆಗೊಳಿಸಿಕೊಳ್ಳಲಿಲ್ಲ ಎನ್ನಲಾಗಿದೆ.

  Share This
  300x250 AD
  300x250 AD
  300x250 AD
  Back to top