ಶಿರಸಿ: ಟಿಎಸ್‍ಎಸ್’ನ ಹುಲೇಕಲ್ ಮಿನಿ ಸುಪರ್ ಮಾರ್ಕೆಟ್‍ನ ಮೊದಲ ವಾರ್ಷಿಕೋತ್ಸವದ ಅಂಗವಾಗಿ ಹುಲೇಕಲ್ ಹಬ್ಬ -2022 ಹಾಗೂ ಸದಸ್ಯರಿಗೆ ಇನ್ನೂ ಹೆಚ್ಚಿನ ಸೇವೆಯನ್ನು ಸೇವೆ ಒದಗಿಸಲು ವಿಸ್ತರಿಸಿರುವ ಸುಪರ್ ಮಾರ್ಕೆಟ್ ಕಟ್ಟಡವನ್ನು ರಾಜ್ಯದ ವಿಧಾನ ಸಭೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಟಿ.ಎಸ್.ಎಸ್. ಸಂಸ್ಥೆಯ ಹಾಗೂ ಹುಲೇಕಲ್ ಸೇವಾ ಸಹಕಾರಿ ಸಂಘದ ಆಡಳಿತ ಮಂಡಳಿ ಸದಸ್ಯರುಗಳು ಮತ್ತು ಟಿ.ಎಸ್.ಎಸ್. ಪ್ರಧಾನ ವ್ಯವಸ್ಥಾಪಕ ರವೀಶ ಆ. ಹೆಗಡೆ, ಸಿಬ್ಬಂದಿಗಳು, ಸದಸ್ಯರು ಹಾಜರಿದ್ದರು.
ನಗರ ಪ್ರದೇಶದಲ್ಲಾಗುವ ಜನದಟ್ಟಣೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಹಾಗೂ ಗ್ರಾಹಕರಿಗೆ ಜೀವನಾವಶ್ಯಕ ವಸ್ತುಗಳು ಸ್ಥಳೀಯವಾಗಿ ದೊರಕುವಂತೆ ಮಾಡುವ ಸಲುವಾಗಿ ಸಂಘವು ಪ್ರಾಥಮಿಕ ಸಹಕಾರ ಸಂಘಗಳ ಸಹಯೋಗದೊಂದಿಗೆ ಪ್ರಾಂಚೈಸಿ ಮಾದರಿಯಲ್ಲಿ ಹುಲೇಕಲ್, ಸಾಲ್ಕಣಿ, ದಾಸನಕೊಪ್ಪ, ಕೊರ್ಲಕೈ, ಇನ್ನಿತರ ಕಡೆಯಲ್ಲಿ ಮಿನಿ ಸುಪರ್ ಮಾರ್ಕೆಟ್ ಪ್ರಾರಂಭಿಸಿದೆ.
ಈ ಹೊಸ ಯೋಜನೆ ಮೊದಲು ಹುಲೇಕಲ್ ಸೇವಾ ಸಹಕಾರಿ ಸಂಘದಲ್ಲಿ ಪ್ರಾರಂಭವಾಗಿ ಒಂದು ವಸಂತವನ್ನು ಯಶಸ್ವಿಯಾಗಿ ಪೂರೈಸಿರುವ ಹಿನ್ನೆಲೆಯಲ್ಲಿ ಹುಲೇಕಲ್ ಹಬ್ಬವನ್ನು ಆಯೋಜಿಸಲಾಗಿದೆ.
ಈ ಎರಡು ದಿನಗಳ ಕಾಲ ನಡೆಯಲಿರುವ ಹುಲೇಕಲ್ ಹಬ್ಬದಲ್ಲಿ ವಿವಿಧ ಸ್ಪರ್ಧೆ ಹಾಗೂ ಮನರಂಜನಾ ಕಾರ್ಯಕ್ರಮಗಳು ನಡೆಯಲಿದೆ ಎಂದು ಟಿ.ಎಸ್.ಎಸ್. ಲಿ., ಶಿರಸಿ ಇದರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.