
ಶಿರಸಿ/ ಯಲ್ಲಾಪುರ: ತಾಲೂಕಿನಲ್ಲಿ ಬುಧವಾರ 9 ಕೊರೊನಾ ಕೇಸ್ ಪತ್ತೆಯಾಗಿದ್ದು, ಇಬ್ಬರು ಗುಣಮುಖರಾಗಿದ್ದಾರೆ.
ಗಣೇಶ ನಗರದಲ್ಲಿ 1, ಭಾಂಶಿ ಬನವಾಸಿಯಲ್ಲು 3, ಗಣೇಶ ನಗರ ಮಾರುತಿ ದೇವಸ್ಥಾನ ಹತ್ತಿರ 4, ಹುಲೇಕಲ್ ನಲ್ಲಿ 1 ಕೇಸ್ ದೃಢಪಟ್ಟಿದೆ.
ತಾಲೂಕಿನಲ್ಲಿ ಈವರೆಗೆ 6847 ಮಂದಿಯಲ್ಲಿ ಕೊರೊನಾ ದೃಢಪಟ್ಟಿದ್ದು, 6718(98%) ಮಂದಿಯಲ್ಲಿ ಗುಣಮುಖರಾಗಿದ್ದಾರೆ. ಇಬ್ಬರು ಗುಣಮುಖರಾಗಿ ಬಿಡುಗಡೆಯಾಗಿದ್ದು, ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ 8 ಮಂದಿ, ಹೋಂ ಐಸೋಲೇಶನ್ ನಲ್ಲಿ 58 ಮಂದಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ಯಲ್ಲಾಪುರ ತಾಲೂಕಿನಲ್ಲೂ 6 ಕೇಸ್ ದೃಢಟ್ಟಿದ್ದು, ಸದ್ಯ 34 ಕೊರೊನಾ ಕೇಸ್ ಸಕ್ರಿಯವಾಗಿದೆ.
ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವರದಿಯಾದಂತೆ ನಂದೊಳ್ಳಿ ವ್ಯಾಪ್ತಿಯಲ್ಲಿ (ನಗರ ಸೇರಿ) 2, ದೇಹಳ್ಳಿ ವ್ಯಾಪ್ತಿಯಲ್ಲಿ 3, ವಜ್ರಳ್ಳಿಯಲ್ಲಿ 1 ಕೇಸ್ ದೃಢಪಟ್ಟಿದೆ. ತಾಲೂಕಿನಲ್ಲಿ ಈವರೆಗೆ 3832 ಮಂದಿಯಲ್ಲಿ ಕೊರೊನಾ ದೃಢಪಟ್ಟಿದ್ದು, 3764 ಮಂದಿ ಗುಣಮುಖರಾಗಿದ್ದಾರೆ. ಈವರೆಗೆ 34 ಮಂದಿ ಸಾವನ್ನಪ್ಪಿದ್ದಾರೆ.