• first
  second
  third
  Slide
  previous arrow
  next arrow
 • ಬೂಸ್ಟರ ಡೋಸ್ ಲಸಿಕಾ ಕಾರ್ಯಕ್ರಮ ಉದ್ಘಾಟಿಸಿದ ಗಣಪತಿ ಉಳ್ವೇಕರ

  300x250 AD

  ಅಂಕೋಲಾ : ಕೊರೋನ ಮೊದಲನೆ ಹಾಗೂ ಎರಡನೆ ಅಲೆಗಳ ದುಷ್ಪರಿಣಾಮಗಳನ್ನು ಕಣ್ಣಾರೆ ಕಂಡಿದ್ದೇವೆ, ಮತ್ತೆ ಅಂತಹ ಪರಿಸ್ಥಿತಿಗಳು ಬಾರದಂತೆ ತಡೆಯುವದು ಸರಕಾರದ ಹಾಗೂ ನಮ್ಮೆಲ್ಲರ ಜವಾಬ್ದಾರಿಯಾಗಿದೆ.ಕೊವಿಡ್ ಲಸಿಕೆ ಪಡೆದವರು ಈಗ ಬೂಸ್ಟರ ಡೋಸ್ ಪಡೆಯುವದರಿಂದ ರೋಗ ಹರಡುವದನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಎದುರಿಸಬಹುದು ಎಂದು ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ ಹೇಳಿದರು.

  ಅವರು ಆರೋಗ್ಯ ಇಲಾಖೆ ವತಿಯಿಂದ ಅಂಕೋಲಾ ತಾಲೂಕ ಆಸ್ಪತ್ರೆಯಲ್ಲಿ ಹಮ್ಮಿಕೊಂಡ ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿ ಕಾರ್ಯಕರ್ತರಿಗೆ ಬೂಸ್ಟರ ಡೋಸ್ ಲಸಿಕೆ ನೀಡುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

  ಪುರಸಭೆಯ ಅಧ್ಯಕ್ಷೆ ಶಾಂತಲಾ ನಾಡಕರ್ಣಿ ಮಾತನಾಡಿ ಕೊರೋನ ಹರಡುವದನ್ನು ನಿಯಂತ್ರಿಸಲು ಮಾಸ್ಕ ಹಾಗೂ ಸಾಮಾಜಿಕ ಅಂತರವೇ ಪ್ರಮುಖ ಅಸ್ತ್ರ ಹಾಗೆಯೇ ವ್ಯಾಕ್ಸಿನ್ ಪಡೆಯದೆ ಇದ್ದವರು ವ್ಯಾಕ್ಸಿನ್ ಪಡೆದರೆ ಕೊರೋನ ನಿಯಂತ್ರಣಕ್ಕೆ ಸಹಕಾರಿಯಾಗುವದು ಎಂದರು.

  300x250 AD

  ಪುರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷೆ ಜಯಾ ಬಾಲಕೃಷ್ಣ ನಾಯ್ಕ ಮಾತನಾಡಿ ಪ್ರಧಾನಿ ನರೇಂದ್ರ ಮೋದಿಯವರ ಆಶಯದಂತೆ 15 ರಿಂದ 18 ವಯೋಮಿತಿ ಒಳಗಿನವರಿಗೆ ವ್ಯಾಕ್ಸಿನ್ ನೀಡಲಾಗುತ್ತಿದೆ. ಹಾಗೂ ಈಗ ಬೂಸ್ಟರ ಡೋಸ್ ನೀಡಲಾಗುತ್ತಿದೆ ಕೊರೋನ ನಿಯಂತ್ರಿಸಲು ಸಾರ್ವಜನಿಕರು ಎಲ್ಲ ರೀತಿಯ ಸಹಕಾರ ನೀಡಬೇಕು ಎಂದರು.

  ತಾಲೂಕ ಆರೋಗ್ಯಾಧಿಕಾರಿ ಡಾ. ನಿತಿನ ಹೊಸ್ಮಲಕರ ಪ್ರಾಸ್ತಾವಿಕ ಮಾತನಾಡಿ ತಾಲೂಕಿನಲ್ಲಿ ಕೊವಿಡ್ ವ್ಯಾಕ್ಸಿನೇಶನ್ ಯಶಸ್ವಿಯಾಗಿ ನಡೆಯುತ್ತಿದೆ, ಮೊದಲ ಡೋಸ್ ಪಡೆದ 9 ತಿಂಗಳ ನಂತರ ಬೂಸ್ಟರ್ ಡೋಸ್ ನೀಡಲಾಗುತ್ತದೆ. ಇದನ್ನು ಆದ್ಯತೆಯ ಪ್ರಕಾರ ನೀಡಲಾಗುವದು ಎಂದರು. ವೇದಿಕೆಯಲ್ಲಿ ತಾಲೂಕಾ ದಂಡಾಧಿಕಾರಿ ಉದಯ ಕುಂಬಾರ, ಪುರಸಭೆಯ ಉಪಾಧ್ಯಕ್ಷೆ ರೇಖಾ ಗಾಂವಕರ, ವೈದ್ಯಾಧಿಕಾರಿ ಡಾ. ಮಹೇಂದ್ರ ನಾಯಕ ಉಪಸ್ಥಿತರಿದ್ದರು. ಜ್ಯೋತಿ ನಾಯ್ಕ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.
  ಬೂಸ್ಟರ ಡೋಸ್ ಪ್ರಥಮ ವ್ಯಾಕ್ಸಿನನ್ನು ತಹಶೀಲ್ದಾರ ಉದಯ ಕುಂಬಾರ ಮತ್ತು ಆರೋಗ್ಯಾಧಿಕಾರಿ ಡಾ. ನಿತಿನ ಹೊಸ್ಮಲಕರ ತೆಗೆದುಕೊಳ್ಳುವದರ ಮೂಲಕ ಚಾಲನೆ ನೀಡಿದರು.

  Share This
  300x250 AD
  300x250 AD
  300x250 AD
  Back to top