ಭಟ್ಕಳ: ಇಲ್ಲಿನ ಮುಗಳೀಕೋಣೆ ಶ್ರೀ ಅಯ್ಯಪ್ಪ ಭಜನಾ ಮಂಟಪದಲ್ಲಿ 45 ನೇ ವರ್ಷದ ಯಾತ್ರೆ ಪ್ರಯುಕ್ತ ಮಹಾ ಅನ್ನ ಸಂತರ್ಪಣೆ ಹಾಗೂ ಫಲ್ಲಕ್ಕಿ ಉತ್ಸವ ಕಾರ್ಯಕ್ರಮ ಮಂಗಳವಾರ ನಡೆಯಲಿದೆ.
ಕಾರ್ಯಕ್ರಮದ ಅಂಗವಾಗಿ ಮಂಗಳವಾರ ಬೆಳಿಗ್ಗೆ ಗಣಹೊಮ, ಅಯ್ಯಪ್ಪ ಸ್ವಾಮಿಯಲ್ಲಿ ಸ್ನಪನ ಅಧಿವಾಸ ಹೋಮ, ಪೂರ್ವಕ ಕಲಾವೃದ್ದಿ ಹೋಮ, ಕುಂಭಾಭಿಷೇಕ ಮಧ್ಯಾಹ್ನ 12-30 ರಿಂದ 3-30 ರವರೆಗೆ ಮಹಾ ಅನ್ನ ಸಂತರ್ಪಣೆ ಸಂಜೆ 5 ಗಂಟೆಗೆ ಫಲ್ಲಕ್ಕಿ ಉತ್ಸವ, ದಿನಾಂಕ 14 ಶುಕ್ರವಾರದಂದು ಸ್ವಾಮಿಯ ಇರುಮುಡಿ ಕಟ್ಟುವುದು, ಸಂಜೆ 4 ಗಂಟೆಯಿಂದ ಪಡಿಪೂಜೆ, ಸಂಜೆ 7 ಗಂಟೆಗೆ ಶ್ರೀ ಅಯ್ಯಪ್ಪ ಸ್ವಾಮಿಯ ಹೂವಿನ ಪೂಜೆ , ರಾತ್ರಿ8 ರಿಂದಮ ಸ್ವಾಮೀಯ ಇರುಮುಡಿ ಕಟ್ಟುವ ಕಾರ್ಯಕ್ರಮ ದಿನಾಂಕ 15 ರಂದು ಬೆಳಿಗ್ಗೆ 7 ಗಂಟೆಗೆ ಶಬರಿಮಲೆ ಯಾತ್ರೆಗೆ ಹೊಡುವ ಕಾರ್ಯಕ್ರಮ ನಡೆಯುವುದು ಈ ಎಲ್ಲಾ ಕಾರ್ಯಕ್ರಮಕ್ಕೆ ಭಕ್ತಾಧಿಗಳೂ ಹೆಚ್ಚಿನ ಸಂಕ್ಯೆಯಲ್ಲಿ ಹಾಜರಿದ್ದು ಶ್ರೀ ಅಯ್ಯಪ್ಪ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕೆಂದು ಮಾರುತಿ ಗುರುಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.