ಹಳಿಯಾಳ: ಜಿಲ್ಲೆಯಲ್ಲಿ ಕೊರೊನಾ ಕೇಸ್ ಹೆಚ್ಚಳವಾಗುತ್ತಿದ್ದು, ಮಂಗಳವಾರ ಕೊರೊನಾ ಪಾಸಿಟಿವ್ ಸಂಖ್ಯೆ ನೂರರ ಗಡಿ ದಾಟಿದೆ. ಇಂದು ಒಟ್ಟೂ 104 ಕೇಸ್ ವರದಿಯಾಗಿದ್ದು, ಕೋವಿಡ್’ಗೆ ಒಬ್ಬರು ಸಾವನ್ನಪ್ಪಿದ್ದು, 10 ಮಂದಿ ಗುಣಮುಖರಾಗಿದ್ದಾರೆ.
ಇಂದು ಕಾರವಾರದಲ್ಲಿ 33, ಅಂಕೋಲಾ 8, ಕುಮಟಾ 13, ಹೊನ್ನಾವರ 19, ಭಟ್ಕಳ 4, ಶಿರಸಿ 11, ಯಲ್ಲಾಪುರ 3, ಹಳಿಯಾಳದಲ್ಲಿ 5, ಜೋಯಿಡಾದಲ್ಲಿ 8 ಕೇಸ್ ದೃಢಪಟ್ಟಿದೆ.
ಕೊರೊನಾಕ್ಕೆ ಹಳಿಯಾಳದಲ್ಲಿ ಒಂದಿ ಸಾವು ಸಂಭವಿಸಿದ್ದು, ಈವರೆಗೆ ಜಿಲ್ಲೆಯಲ್ಲಿ 793 ಮಂದಿ ಕೊರೊನಾಕ್ಕೆ ಬಲಿಯಾಗಿದ್ದಾರೆ. ಇಂದು 10 ಮಂದಿ ಗುಣಮುಖರಾಗಿದ್ದು ಕಾರವಾರ, ಶಿರಸಿಯ 4 ಮಂದಿ ಅಂಕೋಲಾ, ಯಲ್ಲಾಪುರದ ತಲಾ ಒಬ್ಬೊಬ್ಬರು ಬಿಡುಗಡೆಯಾಗಿದ್ದಾರೆ.