ಶಿರಸಿ: ತಾಲೂಕಿನ ಯಡಳ್ಳಿ ಮಾಧ್ಯಮಿಕ ಶಿಕ್ಷಣ ಪ್ರಸಾರಕ ಸಮಿತಿಗೆ ಶಿರಸಿಯ ಅಡಿಕೆ ಕಾಳುಮೆಣಸು ಹಾಗೂ ಏಲಕ್ಕಿ ವರ್ತಕರ ಸಂಘದಿಂದ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಶುದ್ಧಕುಡಿಯುವ ನೀರಿನ ಘಟಕವನ್ನು ದೇಣಿಗೆ ನೀಡಲಾಯಿತು. ಶಿರಸಿ ಅಡಿಕೆ ವರ್ತಕರ ಸಂಘದ ಅಧ್ಯಕ್ಷ ಸತೀಶ ಭಟ್ಟ ನಾಡಗುಳಿಯವರು ನೀರಿನ ಘಟಕದ ನಲ್ಲಿ ತಿರಿಸುವ ಮೂಲಕ ಚಾಲನೆ ಮಾಡಿದರು.
ವರ್ತಕರ ಸಂಘದ ಪರವಾಗಿ ಪ್ರಧಾನ ಕಾರ್ಯದರ್ಶಿ ಲೋಕೇಶ ಹೆಗಡೆ ಪ್ರಗತಿ ಮಾತನಾಡಿ ಇಂದು ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ. ಪ್ರಮುಖವಾಗಿ ನೀರು ಎಲ್ಲರಿಗೂ ಬೇಕು ಅದರಲ್ಲೂ ವಿದ್ಯಾರ್ಥಿಗಳಿಗೆ ನೀರು ಪ್ರಮುಖವಾಗಿದ್ದು ಶುದ್ಧ ನೀರನ್ನು ಸೇವಿಸಿದರೆ ಯಾವುದೇ ರೋಗಗಳು ಬರುವದಿಲ್ಲ ಹಾಗೆ ಅನುಕೂಲವಾಗಲೆಂದು ವಿದ್ಯಾರ್ಥಿಗಳಿಗಾಗಿ ಈ ಸಂಸ್ಥೆಗೆ ಶುದ್ಥ ನೀರಿನಘಟಕ ನೀದಲಾಗಿದೆ ಎಂದರು.
ವೇದಿಕೆಯಲ್ಲಿ ವರ್ತಕರ ಸಂಘದ ಕಾರ್ಯದರ್ಶಿ ಸದಾನಂದಹೆಗಡೆ, ಖಜಾಂಜಿ ರಿಜ್ವಾನ್ ಬೆಸಾನಿಯಾ, ಪ್ರಾಚಾರ್ಯ ಡಾ. ಆರ್.ಟಿ.ಭಟ್ಟ ಸದಸ್ಯ ಗಿರಿಧರ ಕಬ್ನಳ್ಳಿ ಉಪಸ್ಥಿತರಿದ್ದರು.
ನೀರಿನ ಘಟಕದ ದೇಣಿಗೆಗಾಗಿ ಮಾ.ಶಿ.ಪ್ರ ಸಮಿತಿಯ ಗೌರವ ಕಾರ್ಯದರ್ಶಿ ಎಂ.ವಿ ಹೆಗಡೆ ಕಾನಗೋಡ ಅಭಿನಂದನೆ ತಿಳಿಸಿದರು. ಮುಖ್ಯಾಧ್ಯಾಪಕ ಕೆ.ಜಿ. ಭಟ್ಟ ಮಶಿಗದ್ದೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರೆ, ಶಿಕ್ಷಕ ಹನುಮಂತಪ್ಪ ಎಸ್‍ಆರ್ ವಂದಿಸಿದರು.