• first
  second
  third
  Slide
  previous arrow
  next arrow
 • ಪಶುಸಂಗೋಪನಾ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ

  300x250 AD

  ಯಲ್ಲಾಪುರ: ತಾಲೂಕಿನಲ್ಲಿ ಪಶುಸಂಗೋಪನಾ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಹೆಚ್ಚಾಗಿದ್ದು, ಇರುವ ಸಿಬ್ಬಂದಿಯೇ ಎಲ್ಲವನ್ನೂ ನಿಭಾಯಿಸುವ ಅನಿವಾರ್ಯತೆ ಎದುರಾಗಿದೆ. ಇದರಿಂದ ಇರುವ ಸಿಬ್ಬಂದಿಯ ಮೇಲೆ ಒತ್ತಡವೂ ಹೆಚ್ಚುವ ಜತೆಗೆ, ಜಾನುವಾರುಗಳಿಗೆ ಸಮಯಕ್ಕೆ ಸರಿಯಾಗಿ ಸಮರ್ಪಕ ಚಿಕಿತ್ಸೆ ದೊರಕುವುದು ಕಷ್ಟಕರವಾಗಿದೆ.

   ಪಶು ಸಂಗೋಪನಾ ಇಲಾಖೆಯ ತಾಲೂಕು ಪಶು ಆಸ್ಪತ್ರೆ, ಸಂಚಾರಿ ಪಶು ಚಿಕಿತ್ಸಾಲಯ, ಮಂಚಿಕೇರಿ ಪಶು ಆಸ್ಪತ್ರೆ ಹಾಗೂ ಗ್ರಾಮೀಣ ಭಾಗದ 12 ಪಶು ಚಿಕಿತ್ಸಾಲಯಗಳಲ್ಲಿ ಪಶುವೈದ್ಯಾಧಿಕಾರಿ, ಪಶುವೈದ್ಯಕೀಯ ಪರಿವೀಕ್ಷಕರು, ಜಾನುವಾರು ಅಧಿಕಾರಿ, ಡಿ ದರ್ಜೆ ನೌಕರ ಸೇರಿ ಒಟ್ಟು 69 ಹುದ್ದೆಗಳಿವೆ. ಆದರೆ ಅದರಲ್ಲಿ ಕೇವಲ 10 ಕಾಯಂ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. 16 ಜನ ಹೊರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಉಳಿದ ಎಲ್ಲಾ ಹುದ್ದೆಗಳು ಖಾಲಿ ಇವೆ. ಯಲ್ಲಾಪುರ ಪಶು ಆಸ್ಪತ್ರೆಯಲ್ಲಿ 11 ಮಂಜೂರಿ ಹುದ್ದೆಗಳಲ್ಲಿ 6 ಸಿಬ್ಬಂದಿ ಇದ್ದು, ಇಬ್ಬರು ಹೊರಗುತ್ತಿಗೆ ನೌಕರರಿದ್ದಾರೆ. ಸಂಚಾರಿ ಪಶು ಚಿಕಿತ್ಸಾಲಯಕ್ಕೆ ಮಂಜೂರಿ ಇರುವ ಮೂರೂ ಹುದ್ದೆಗಳು ಖಾಲಿ ಇವೆ. ಇಡಗುಂದಿ ಹಾಗೂ ವಜ್ರಳ್ಳಿ ಪಶು ಚಿಕಿತ್ಸಾಲಯಗಳನ್ನು ಹೊರತುಪಡಿಸಿ ಗ್ರಾಮೀಣ ಭಾಗದ 11 ಚಿಕಿತ್ಸಾಲಯಗಳಲ್ಲಿ ಪಶುವೈದ್ಯರೇ ಇಲ್ಲ.    

  ಕುಂದರಗಿ, ಹುಣಶೆಟ್ಟಿಕೊಪ್ಪ, ಉಮ್ಮಚಗಿ, ಕಿರವತ್ತಿ, ದೇಹಳ್ಳಿ, ಅರಬೈಲ್, ನಂದೊಳ್ಳಿ, ಕೊಡಸೆಗಳಲ್ಲಿ 4, ಕಳಚೆ, ಮಾವಿನಮನೆ ಪಶು ಚಿಕಿತ್ಸಾಲಯಗಳಲ್ಲಿ 3 ಹುದ್ದೆಗಳು ಮಂಜೂರಿ ಇವೆ. ಆದರೆ ಈ ಎಲ್ಲ ಚಿಕಿತ್ಸಾಲಯಗಳು ಕೇವಲ ಹೊರಗುತ್ತಿಗೆ ಆಧಾರದ ಒಬ್ಬ ಡಿ ದರ್ಜೆ ನೌಕರರಿಂದ ನಡೆಯುತ್ತಿವೆ.    

  300x250 AD

  ಜಿಲ್ಲಾ ಪಾಲಿ ಕ್ಲಿನಿಕ್ ಗೂ ಸಿಬ್ಬಂದಿ ಕೊರತೆ:
  ಪಟ್ಟಣದಲ್ಲಿರುವ ಜಿಲ್ಲಾ ಪಾಲಿ ಕ್ಲಿನಿಕ್ ಗೂ ಸಿಬ್ಬಂದಿ ಕೊರತೆ ಕಾಡುತ್ತಿದೆ. ಇರುವ 8 ಹುದ್ದೆಗಳ ಪೈಕಿ ಉಪನಿರ್ದೇಶಕರು ಹಾಗೂ ಪ್ರಥಮ ದರ್ಜೆ ಸಹಾಯಕರು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಮುಖ್ಯ ಪಶುವೈದ್ಯಾಧಿಕಾರಿ, ಪಶುವೈದ್ಯಕೀಯ ಪರೀಕ್ಷಕರು, ಕ್ಷಕಿರಣ ಹಾಗೂ ಲ್ಯಾಬ್ ಟೆಕ್ನಿಷಿಯನ್, ವಾಹನ ಚಾಲಕ, 2  ಡಿ ದರ್ಜೆ ನೌಕರರು ಸೇರಿ ಒಟ್ಟು 6 ಹುದ್ದೆಗಳು ಖಾಲಿ ಇವೆ.    ಹೈನುಗಾರಿಕೆ ನಡೆಸುವ ಗ್ರಾಮೀಣ ಭಾಗದ ರೈತರು ತಮ್ಮ ಜಾನುವಾರುಗಳಿಗೆ ಅನಾರೋಗ್ಯ ಉಂಟಾದರೆ ಚಿಕಿತ್ಸೆ ಕೊಡಿಸುವುದು ಹರಸಾಹಸ ಎನ್ನುವಂತಾಗಿದೆ. ಇರುವ 3-4 ವೈದ್ಯರೇ ಇಡೀ ತಾಲೂಕಿನ ಜಾನುವಾರುಗಳಿಗೆ ಚಿಕಿತ್ಸೆ ನೀಡಲು ಹೆಣಗಾಡುವಂತಾಗಿದೆ.    ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ ಶೀಘ್ರ ಕ್ರಮ ಕೈಗೊಂಡಲ್ಲಿ ಪರಿಣಾಮಕಾರಿಯಾಗಿ ಇಲಾಖೆ ಕಾರ್ಯನಿರ್ವಹಿಸಲು ಅನುಕೂಲವಾಗಬಹುದು.

  Share This
  300x250 AD
  300x250 AD
  300x250 AD
  Back to top