• first
  second
  third
  Slide
  previous arrow
  next arrow
 • ಶಾಲೆಯ ಆವರಣದಲ್ಲಿ ನಡೆದ ವಾರದ ಸಂತೆ; ಪಾಲಕರ ಆಕ್ಷೇಪ

  300x250 AD

  ಮುಂಡಗೋಡ: ಪಟ್ಟಣದ ಶಾಸಕರ ಮಾದರಿ ಶಾಲೆಯ ಆವರಣದಲ್ಲಿ ಸೋಮವಾರ ನಡೆದ ವಾರದ ಸಂತೆಯ ಬಗ್ಗೆ ಹಲವು ಪಾಲಕರು ಆಕ್ರೋಶ ವ್ಯಕ್ತಪಡಿಸಿದರು. ಸಂತೆ ಮಾರುಕಟ್ಟೆ, ರೋಟರಿ ಶಾಲೆಯ ಹಿಂದಿನ ಮೈದಾನ ಹಾಗೂ ತಾಲೂಕು ಕ್ರೀಡಾಂಗಣ ಇಷ್ಟೆಲ್ಲಾಇದ್ದರೂ, 300-350 ಮಕ್ಕಳು ಕಲಿಯುವ ಮಾದರಿ ಶಾಲೆಯ ಆವರಣದಲ್ಲಿಯೇ ವ್ಯಾಪಾರಿಗಳಿಗೆ ಅವಕಾಶ ಕಲ್ಪಿಸಿದ್ದಾದರೂ ಏಕೆ? ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದರು. ಮಕ್ಕಳ ಆರೋಗ್ಯದ ದೃಷ್ಟಿಯಿಂದ ಜನಸಂದಣಿಯಿಂದ ಮುಕ್ತವಾಗಿರಬೇಕು ಎಂಬ ಕಲ್ಪನೆಗೆ, ಧಕ್ಕೆ ತರುವಂತೆ ತಾಲೂಕು ಆಡಳಿತ ಹಾಗೂಪಟ್ಟಣ ಪಂಚಾಯತದವರು ನಡೆದುಕೊಂಡಿದ್ದಾರೆ ಎಂದು ಸಾರ್ವಜನಿಕರು ದೂರಿದರು.

  ಓಮಿಕ್ರಾನ್ ಸೋಂಕಿನ ಹಿನ್ನೆಲೆಯಲ್ಲಿ, ಪ್ರತಿ ವಾರ ನಡೆಯುತ್ತಿದ್ದ ವಾರದ ಸಂತೆಯ ಸ್ಥಳದಲ್ಲಿ ಪಟ್ಟಣ ಪಂಚಾಯತದವರು ಬದಲಾವಣೆ ಮಾಡಿದ್ದರು. ರೋಟರಿ ಶಾಲೆಯ ಹಿಂದುಗಡೆ ಇರುವ ಮೈದಾನ, ಟೌನ್‍ಹಾಲ್ ಎದುರಿಗೆ ಹಾಗೂ ಶಾಸಕರ ಮಾದರಿ ಶಾಲೆಯ ಮುಂದೆ ಹೀಗೆ ಮೂರು ಕಡೆಗಳಲ್ಲಿ ಸಂತೆಯನ್ನು ವಿಂಗಡಿಸಿ, ಜನರ ದಟ್ಟಣೆ ಆಗುವುದನ್ನು ತಡೆಗಟ್ಟಲು ಕ್ರಮ ಕೈಗೊಂಡಿದ್ದರು. ಆದರೆ, ಪ್ರತಿ ವಾರ ನಡೆಯುತ್ತಿದ್ದ ಸಂತೆ ಮಾರುಕಟ್ಟೆಯಲ್ಲಿ ಯಾವುದೇ ರೀತಿಯ ವ್ಯಾಪಾರಕ್ಕೆ ಅವಕಾಶ ನೀಡಿರಲಿಲ್ಲ. ಸಂತೆ ಮಾರುಕಟ್ಟೆಯನ್ನು ಖಾಲಿ ಬಿಟ್ಟಿದ್ದಾದರೂ ಏಕೆ ಎಂಬ ಪ್ರಶ್ನೆ ಸಾರ್ವಜನಿಕರನ್ನು ಕಾಡಿತು. ಹಣ್ಣು ಮಾರುವರಿಗೆ ಈ ಸಂತೆ ಮಾರುಕಟ್ಟೆಯಲ್ಲಿ ಅವಕಾಶ ನೀಡಬಹುದಿತ್ತು. ಅದು ಬಿಟ್ಟು, ಹಣ್ಣು ವ್ಯಾಪಾರಿಗಳನ್ನು ಮಾದರಿ ಶಾಲೆಯ ಆವರಣಕ್ಕೆ ಕಳಿಸಿದ್ದಾದರೂ ಏಕೆ ಎಂಬ ಪ್ರಶ್ನೆಗೆ ಅಧಿಕಾರಿಗಳು ಸಮರ್ಪಕವಾಗಿ ಉತ್ತರ ನೀಡುತ್ತಿಲ್ಲ ಎಂದು ಸಾರ್ವಜನಿಕರು ದೂರಿದರು.

  ಶಾಸಕರ ಮಾದರಿ ಶಾಲೆಯ ಆವರಣದಲ್ಲಿ ವಾರದ ಸಂತೆಗೆ ವ್ಯಾಪಾರಿಗಳು ಕುಳಿತಿದ್ದರಿಂದ, ಆ ಕಡೆ ಮಕ್ಕಳು ಹೋಗದಂತೆ ಶಿಕ್ಷಕರು ಕಾಯುವುದೇ ದೊಡ್ಡ ಕೆಲಸವಾಗಿತ್ತು. ಕೆಲವು ತರಗತಿಗಳ ಬಾಗಿಲು ಹಾಕಿ ಪಾಠ ಮಾಡಲಾಯಿತು. ಪ್ರತಿದಿನ ವಿದ್ಯಾರ್ಥಿಗಳಿಗೆ ವಿಶ್ರಾಂತಿ ಸಮಯ ಇರುತ್ತಿತ್ತು. ಆದರೆ, ಈ ದಿನ ಸೋಮವಾರ ಸಂತೆಯಿದ್ದ ಕಾರಣ ವಿದ್ಯಾರ್ಥಿಗಳಿಗೆ ಯಾವುದೇ ವಿಶ್ರಾಂತಿಗೆ ನೀಡಲಿಲ್ಲ ಎನ್ನಲಾಗಿದೆ. ಮಕ್ಕಳನ್ನು ಕಟ್ಟಿಹಾಕಿ ಇಡುವಂತ ಸ್ಥಿತಿ ನಿರ್ಮಾಣ ಮಾಡುವಲ್ಲಿ, ಪಟ್ಟಣ ಪಂಚಾಯತದವರ ಕೊಡುಗೆ ಸಾಕಷ್ಟಿದೆ. ಮಕ್ಕಳ ಆರೋಗ್ಯದ ದೃಷ್ಟಿಯಿಂದ ವಿಚಾರ ಮಾಡದೇ, ಶಾಲಾ ಆವರಣದಲ್ಲಿ ಸಂತೆಗೆ ಅನುಕೂಲ ಮಾಡಿಕೊಟ್ಟಿರುವುದು ಅಧಿಕಾರಿಗಳ ಬೇಜವಾಬ್ದಾರಿಗೆ ಸಾಕ್ಷಿಯಾಗಿದೆ ಎಂದು ಸಾರ್ವಜನಿಕರು ಆರೋಪಿಸಿದರು.

  300x250 AD

  ಕಾರವಾರ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್: ನಾಲ್ಕು ದಿನದ ಮೊದಲು ತಿಳಿಸಿದ್ದರೆ ಬದಲಾವಣೆ ಮಾಡಬಹುದಿತ್ತು, ಈಗ ಹೇಳಿದರೆ ಹೇಗೆ ನೋಡೊಣ ಅಧಿಕಾರಿಗಳೊಂದಿಗೆ ಮಾತನಾಡುತ್ತೇನೆ. ಸಾಧ್ಯವಾದರೆ ಸ್ಥಳಾಂತರಿಸಲಾಗುವುದು ಇಲ್ಲವಾದರೆ ಮುಂದಿನ ವಾರದಿಂದ ಶಾಲಾ ಕಾಲೇಜ ಆವರಣದಲ್ಲಿ ನಡೆಯು ವಾರದ ಸಂತೆ ಸ್ಥಳ ಬದಲಾವಣೆ ಮಾಡಲಾಗುವುದು ಎಂದರು.

  ಶಾಲೆಯ ಶಿಕ್ಷಕರು: ಹೊರ ತಾಲೂಕುಗಳಿಂದ ವ್ಯಾಪಾರಸ್ಥರು ಬರುತ್ತಾರೆ. ಮೊದಲೆ ಸಂತೆ ನಮ್ಮ ಶಾಲೆಯ ಆವರಣದಲ್ಲಿ ನಡೆಸುತ್ತೇವೆ ಎಂದು ಹೇಳಿದ್ದರೆ ಮಕ್ಕಳಿಗೆ ರಜೆಯಾದರು ನೀಡಬಹುದಿತ್ತು, ಮಕ್ಕಳ ಪಾಲಕರು ಬಂದು ಹಲವು ಪ್ರಶ್ನೇ ಮಾಡುತ್ತಿದ್ದಾರೆ ಯಾರಿಗೆ ಏನು ಹೇಳಬೇಕು ಎಂದು ತಿಳಿಯುತ್ತಿಲ್ಲ ಎಂದರು.

  Share This
  300x250 AD
  300x250 AD
  300x250 AD
  Back to top