• first
    second
    third
    Slide
    previous arrow
    next arrow
  • ಮಾಂಸ ವಶಕ್ಕೆ ಪಡೆದು ತನಿಖೆ ಕೈಗೊಂಡ ಅರಣ್ಯ ಇಲಾಖೆ

    300x250 AD

    ಮುಂಡಗೋಡ: ಪಟ್ಟಣದ ಲಮಾಣೆ ತಾಂಡಾದಲ್ಲಿನ ಜ್ಯೋತಿ ಆಸ್ಪತ್ರೆಯ ಸನಿಹದ ಮನೆಯ ಕೊಟ್ಟಿಗೆಯಲ್ಲಿ ಸೋಮವಾರ ಅಪರಿಚಿತರು ಯಾವುದೋ ಮಾಂಸವನ್ನು ಇಟ್ಟು ಹೋಗಿದ್ದು ಅರಣ್ಯ ಇಲಾಖೆಯವರು ಪರಿಶೀಲಿಸಿ ಮಾಂಸವನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ.

    ಲಮಾಣಿ ತಾಂಡಾದ ಪ್ರವೀಣ ಲಮಾಣಿ ಎಂಬುವರ ಮನೆಯ ಹತ್ತಿರ ಯಾರೋ ಅಪರಿಚಿತರು ಮಾಂಸವನ್ನು ಇಟ್ಟು ಹೋಗಿದ್ದರು. ಸೋಮವಾರ ಬೆಳಿಗ್ಗೆ ಮನೆಯವರ ಗಮನಕ್ಕೆ ಬಂದ ತಕ್ಷಣವೇ ಪೊಲೀಸರಿಗೆ ಮತ್ತು ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದ್ದಾರೆ. ನಂತರ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲಿಸಿ ಅರಣ್ಯ ಇಲಾಖೆ ಸಂಬಂಧಿಸಿದ ಪ್ರಕರಣ ಇದಾಗಿದ್ದು ಎಂದು ತೆರಳಿದರು. ನಂತರ ಮಾಹಿತಿ ಪಡೆದ ಆರ್.ಎಫ್.ಒ ಸುರೇಶ ಕುಳ್ಳಳ್ಳಿ ನೇತೃತ್ವದ ತಂಡದ ಅಧಿಕಾರಿಗಳು ಮಾಂಸವನ್ನು ವಶಕ್ಕೆ ಪಡೆದು ಪಶು ವೈದ್ಯರಿಂದ ಮಾಂಸವನ್ನು ಪರೀಕ್ಷಿಸಿ ನಂತರ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

    ಆದರೆ ಸ್ಥಳಿಯರು ಇದು ಯಾರೋ ಬೇಟೆಯಾಡಿದ ಜಿಂಕೆಯ ಮಾಂಸವೆಂದು ಮಾತನಾಡಿಕೊಳ್ಳುತ್ತಿರುವುದು ಕಂಡು ಬಂದಿತು. ಮಾಂಸವನ್ನು ವಂಶಪಡಿಸಿಕೊಂಡ ಅರಣ್ಯ ಇಲಾಖೆಯವರ ಯಾವು ಪ್ರಾಣೆಯದು ಎಂದು ಖಚಿತ ಪಡಿಸುತ್ತಾರೋ ಕಾದು ನೋಡಬೇಕಾಗಿದೆ.

    300x250 AD

    ಅರುಣಕುಮಾರ ಕಾಶಿ, ಉಪವಲಯ ಅರಣ್ಯಾಧಿಕಾರಿ ಮುಂಡಗೋಡ: ಮಾಂಸವನ್ನು ವಶಕ್ಕೆ ಪಡೆದಿದ್ದೇವೆ. ಈ ಮಾಂಸವು ಕಾಡು ಪ್ರಾಣಿಯೊಂದು ಇಲ್ಲವೋ ಸಾಕು ಪ್ರಾಣಿಯೊಂದು ಎಂದು ತಿಳಿಯಲು ಪ್ರಯೋಗಾಲಯಕ್ಕೆ ಕಳುಹಿಸಿ ವರದಿ ಬಂದು ನಂತರ ತಿಳಿಯುತ್ತದೆ ಎಂದು ಪಶು ವೈದ್ಯರು ತಿಳಸಿದ್ದಾರೆ ಎಂದು ಹೇಳಿದರು.

    Share This
    300x250 AD
    300x250 AD
    300x250 AD
    Back to top