ಮುಂಡಗೋಡ: ಪಟ್ಟಣದ ಪ್ರಥಮ ದರ್ಜೆ ಕಾಲೇಜಿನ ಬಿ.ಎ ಪ್ರಥಮ ವರ್ಷದ ವಿದ್ಯಾರ್ಥಿನಿಗೆ ಕೋವಿಡ್ ಸೋಂಕು ಪತ್ತೆಯಾಗಿದ್ದು ಸೋಮವಾರ ನಡೆಯಬೇಕಾದ ಪರೀಕ್ಷೆಗಳು ಮುಂದೂಡಲಾಗಿದೆ.
ಪ್ರಥಮ ದರ್ಜೆ ಕಾಲೇಜಿನ ಬಿ.ಎ ಪ್ರಥಮ ವರ್ಷದ ವಿದ್ಯಾರ್ಥಿನಿಯಲ್ಲಿ ಸೋಂಕು ದೃಢವಾಗಿದೆ. ಮೂರ್ನಾಲ್ಕು ದಿನಗಳ ಹಿಂದೆ ಕಾಲೇಜಿನ್ ವಿದ್ಯಾರ್ಥಿಗಳಿಗೆ ಕೋವಿಡ ತಪಾಸಣೆ ಮಾಡಿಸಿದ್ದರು. ಇದರಲ್ಲಿ ಒಬ್ಬ ವಿದ್ಯಾರ್ಥಿನಿಯ ವರದಿ ಸೋಮವಾರದಂದು ಪಾಸಿಟಿವ್ ಬಂದಿದೆ. ಪಟ್ಟಣದ ಕರ್ಮಾ ಫೌಂಡೇಶನ್ ವಸತಿ ನಿಲಯದಲ್ಲಿ ಇರುವ ಈ ವಿದ್ಯಾರ್ಥಿನಿಯಾಗಿದ್ದಾಳೆ. ಪಾಸಿಟಿವ್ ವರದಿ ಬಂದ ಹಿನ್ನೆಲೆಯಲ್ಲಿ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಗಳ ತಂಡ ಕಾಲೇಜಿಗೆ ಬಂದು ಈಕೆಯ ಸಂಪರ್ಕದಲ್ಲಿರುವ ವಿದ್ಯಾರ್ಥಿಗಳಿಗೆ ಕೋವಿಡ್ ತಪಾಸಣೆಗೆ ಒಳಪಡಿಸಿದರು. ನಂತರ ಪಾಲಕರನ್ನು ಕರೆಸಿ ವಿದ್ಯಾರ್ಥಿನಿಯನ್ನು ಹೋಂ ಐಸೊಲೇಷನಿಗೆ ಒಳಪಡಿಲಾಗಿದೆ.
ಮುಂಡಗೋಡ ಪ್ರಥಮ ದರ್ಜೆ ಕಾಲೇಜ್ ಪ್ರಾಂಶುಪಾಲೆ ಇಂದ್ರಾಯನ್ ಬಾಗಲಕೋಟ: ಬಿ.ಎ ಪ್ರಥಮ ವರ್ಷದ ಒಬ್ಬ ವಿದ್ಯಾರ್ಥಿನಿಗೆ ಸೋಂಕು ಪತ್ತೆಯಾಗಿದೆ. ವರದಿ ಬಂದ ತಕ್ಷಣವೇ ಸಂಬಂಧಿಸಿದ ಅಧಿಕಾರಿಗಳಿಗೆ, ಕರ್ಮಾ ಫೌಂಡೇಶನ್ ಮತ್ತು ವಿದ್ಯಾರ್ಥಿನಿಯ ಪಾಲಕರಿಗೆ ತಿಳಿಸಿದೆವು. ಕಾಲೇಜಿನ ಎಲ್ಲಾ ತರಗತಿಯ ವಿದ್ಯಾರ್ಥಿಗಳಿಗೆ ಕೋವಿಡ್ ತಪಾಸಣೆ ನಡೆಸಲಾಗಿದೆ. ಸೋಮವಾರ ನಡೆಯಬೇಕಾದ ಇಂಟರ್ನಲ್ ಪರೀಕ್ಷೆಗಳನ್ನು ಮುಂದೂಡಿದ್ದೇವೆ. ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಿ ಕಾಲೇಜಿನ ಎಲ್ಲಾ ಕೊಠಡಿಗಳನ್ನು ಸ್ಯಾನಿಟರಿ ಮಾಡಿಸಲಾಗಿದೆ.