• Slide
    Slide
    Slide
    previous arrow
    next arrow
  • ವಿವಿಧ ಬಹುಮಾನಕ್ಕೆ ಅರ್ಜಿ ಆಹ್ವಾನ

    300x250 AD


    ಕಾರವಾರ : ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ, ಜನವರಿ 2021 ರಿಂದ ಡಿಸೆಂಬರ್ 2021ರ ಅವಧಿಯಲ್ಲಿ ಕನ್ನಡದಲ್ಲಿ ಪ್ರಕಟವಾದ ಕೃತಿಗಳಿಗೆ, ಅವುಗಳ ಮುದ್ರಣ, ಮುಖಪುಟ ವಿನ್ಯಾಸ, ಗುಣಮಟ್ಟವನ್ನು ಪರಿಗಣಿಸಿ ವಿವಿಧ ಬಹುಮಾನಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.


    ಆಯ್ಕೆಯಾದ ಕೃತಿಗಳ ಪ್ರಕಾಶಕರು, ಮುದ್ರಕರು, ಕಲಾವಿದರಿಗೆ ‘ಕನ್ನಡ ಪುಸ್ತಕ ಸೊಗಸು-2021’ ಬಹುಮಾನವನ್ನು ನೀಡಲಾಗುತ್ತಿದ್ದು, ಆಸಕ್ತರು ಸ್ವಯಂ ಅರ್ಜಿ ಸಲ್ಲಿಸಬಹುದಾಗಿದೆ. ಪ್ರಕಟವಾದ ವರ್ಷ, ಪುಸ್ತಕದ, ಲೇಖಕರ, ಪ್ರಕಾಶಕರ, ಮುದ್ರಣಾಲಯದ ಹೆಸರು ಹಾಗೂ ಮುಖಪುಟ ಚಿತ್ರ ರಚನೆಯ ಕಲಾವಿದರ ಹೆಸರು-ಚಿತ್ರ ಕಲಾವಿದರ ಪೂರ್ಣ ವಿಳಾಸ ಈ ಎಲ್ಲಾ ವಿವರಗಳೊಂದಿಗೆ ಪುಸ್ತಕದ ಎರಡು ಪ್ರತಿಗಳನ್ನು ಫೆ. 10. ರೊಳಗಾಗಿ ಆಡಳಿತಾಧಿಕಾರಿಗಳು, ಕನ್ನಡಪುಸ್ತಕ ಪ್ರಾಧಿಕಾರ, ಕನ್ನಡಭವನ, ಜೆ.ಸಿ.ರಸ್ತೆ, ಬೆಂಗಳೂರು-560 002 – ಈ ವಿಳಾಸಕ್ಕೆ ಕಳುಹಿಸಿಕೊಡಬಹುದಾಗಿದೆ. ಸಲ್ಲಿಸಲಾಗುವ ಪುಸ್ತಕಗಳನ್ನು ಯಾವುದೇ ಕಾರಣಕ್ಕೂ ಹಿಂದಿರುಗಿಸಲಾಗುವುದಿಲ್ಲ.

    300x250 AD


    ಹೆಚ್ಚಿನ ಮಾಹಿತಿಗಾಗಿ : ಆಡಳಿತಾಧಿಕಾರಿಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ, ಮೊದಲನೇ ಮಹಡಿ, ಜೆ.ಸಿ. ರಸ್ತೆ, ಬೆಂಗಳೂರು -560002, ದೂರವಾಣಿ ಸಂಖ್ಯೆ: 080-22484516, 22107704 – ಇಲ್ಲಿ ಸಂಪರ್ಕಿಸಬಹುದಾಗಿದೆ ಎಂದು ಪ್ರಾಧಿಕಾರದ ಆಡಳಿತಾಧಿಕಾರಿ ಕೆ.ಬಿ. ಕಿರಣ್ ಸಿಂಗ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top