• first
    second
    third
    Slide
    previous arrow
    next arrow
  • ವೀಕೆಂಡ್ ಕರ್ಫ್ಯೂ ಮಧ್ಯೆ ಕಿಡಿ ಹೊತ್ತಿಸಿದ ಒಣಮೀನು ಮಾರಾಟ

    300x250 AD

    ಕಾರವಾರ: ಕೋವಿಡ್, ಒಮಿಕ್ರಾನ್ ತಡೆಗೆ ಸರಕಾರ ಹೊರಡಿಸಿರುವ ಆದೇಶದ ಅನ್ವಯ ಜಿಲ್ಲಾ ಕೇಂದ್ರ ಕಾರವಾರದಲ್ಲಿ ಭಾನುವಾರದ ಸಂತೆ ರದ್ದು ಮಾಡಿದ್ದರೂ ಹೊರ ಭಾಗದಿಂದ ಬಂದು ಒಣಮೀನು ವ್ಯಾಪಾರ ಮಾಡಿರುವುದು ಸ್ಥಳೀಯ ಒಣಮೀನು ವ್ಯಾಪಾರ ಮಾಡುವ ಮಹಿಳೆಯರ ಆಕ್ರೋಶಕ್ಕೆ ಕಾರಣವಾಯಿತು.

    ಪ್ರತಿ ಭಾನುವಾರ ಅಂಕೋಲಾ, ತದಡಿ ಭಾಗದಿಂದ ಕಾರವಾರಕ್ಕೆ ಬರುತ್ತಿದ್ದ ಒಣ ಮೀನು ವ್ಯಾಪಾರಿಗಳು, ಕಾರವಾರ ನಗರದ ಶಿವಾಜಿ ವೃತ್ತದ ಬಳಿ ತರಕಾರಿ ವ್ಯಾಪಾರಸ್ಥರಂತೆ ಒಂದು ಬದಿ ಕುಳಿತು ಒಣಮೀನು ವ್ಯಾಪಾರ ಮಾಡುತ್ತಾರೆ. ಇವರೊಂದಿಗೆ ಕಾರವಾರದ ಸ್ಥಳೀಯ ಒಣಮೀನು ವ್ಯಾಪಾರಸ್ಥರೂ ಸೇರುತ್ತಾರೆ.

    ಈ ಭಾನುವಾರ ವೀಕೆಂಡ್ ಕರ್ಫ್ಯೂ ಕಾರಣ ಕಾರವಾರ ನಗರಸಭೆ ರಸ್ತೆ ಬದಿಯಲ್ಲಿ ಮೀನು ಮಾರಾಟಕ್ಕೆ ನಿಬರ್ಂಧ ಹೇರಿತ್ತು. ಶನಿವಾರ ಕೂಡ ಕಾರವಾರದ ಸ್ಥಳೀಯ ಮೀನುಗಾರ ಮಹಿಳೆಯರು ರಸ್ತೆ ಬದಿಯಲ್ಲಿ ಮೀನು ಮಾರಾಟ ಮಾಡಲು ಪೊಲೀಸರು ಅವಕಾಶ ಕೊಡದೇ ವಾಪಸ್ಸು ಕಳುಹಿಸಿದ್ದರು.

    300x250 AD

    ಹೀಗಿರುವಾಗ ಅಂಕೋಲಾ, ತದಡಿ ಭಾಗದ ಮಹಿಳೆಯರು ರಸ್ತೆ ಬದಿಯಲ್ಲಿ ಒಣಮೀನು ಮಾರಿದ್ದು ಸ್ಥಳೀಯ ಮೀನು ಮಾರಾಟ ಮಹಿಳೆಯರ ಆಕ್ರೋಶಕ್ಕೆ ಕಾರಣವಾಯಿತು. ಈ ಮಧ್ಯೆ ಹೊರಗಿನಿಂದ ಬಂದ ಒಣಮೀನು ಮಾರಾಟಗಾರರು ಆಗಲೇ ಸಾಕಷ್ಟು ಮೀನು ಮಾರಾಟ ಮಾಡಿ ಮುಗಿಸಿದ್ದರು. ನಂತರ ಸ್ಥಳೀಯರೂ ಮಾರಾಟದಲ್ಲಿ ತೊಡಗಿದರು.

    Share This
    300x250 AD
    300x250 AD
    300x250 AD
    Back to top