ಅಂಕೋಲಾ: ಇಲ್ಲಿನ ಪುರಸಭೆಗೆ ನೂತನ ನಾಮನಿರ್ದೇಶಕ ಸದಸ್ಯರಾಗಿ ಐವರನ್ನು ನೇಮಕ ಮಾಡಿ ಸರಕಾರ ಆದೇಶಿಸಿದೆ. ಪಟ್ಟಣದ ಮಠಾಕೇರಿಯ ನಾಗೇಶ ಡಿ ಕಿಣಿ, ಅಂಬಾರಕೊಡ್ಲದ ಬಾಬು ಎಂ ಗೌಡ, ಕನಸೆಗದ್ದೆಯ ಸುಲಕ್ಷಾ ಸುರೇಶ ಭೋವಿ, ಬೇಳಾ ಬಂದರದ ತಾರಾ ನಾಗೇಶ ಗಾಂವಕರ, ಕೇಣಿಯ ಪ್ರಜ್ಞಾ ಎನ್ ಬಂಟ ನೇಮಕವಾಗಿದ್ದಾರೆ.
ರಾಜ್ಯ ಸರಕಾರ ನೀಡಿರುವ ಜವಾಬ್ದಾರಿಯನ್ನು ಅತ್ಯಂತ ಜವಾಬ್ದಾರಿ ಹಾಗೂ ಪ್ರಾಮಾಣಿಕತೆಯಿಂದ ನಿರ್ವಹಿಸುವದರ ಜೊತೆಗೆ ಪುರಸಭೆಗೆ ಅಮೂಲ್ಯ ಸಲಹೆ ಸಹಕಾರ ನೀಡುವಂತೆ ಶಾಸಕಿ ರೂಪಾಲಿ ನಾಯ್ಕ ಸೂಚಿಸಿದರು. ನೇಮಕ ಕುರಿತಂತೆ ಶಾಸಕಿ ರೂಪಾಲಿ ನಾಯ್ಕ ಹಾಗೂ ಬಿಜೆಪಿ ಮಂಡಲಾಧ್ಯಕ್ಷ ಸಂಜಯ ನಾಯ್ಕ ಶಿಫಾರಸು ಮಾಡಿದ್ದರು.