• first
  second
  third
  Slide
  previous arrow
  next arrow
 • ತಾಲೂಕ ಆಸ್ಪತ್ರೆಯ ಸಿಬ್ಬಂದಿಗಳಿಂದ ಮಾನವೀಯ ನೆರವು

  300x250 AD

  ಗೇರುಸೊಪ್ಪ: ಗೇರುಸೊಪ್ಪಾದ 21 ವರ್ಷದ ವಿನಾಯಕ ಪುರಂದರ ನಾಯ್ಕ ರವರು ಎರಡು ಕಿಡ್ನಿ ವೈಪಲ್ಯದಿಂದ ಬಳಲುತ್ತಿದ್ದು ಆತನ ಜೀವ ಉಳಿಸಿಕೊಳ್ಳಲು ತಾಯಿ ತನ್ನ ಕಿಡ್ನ ದಾನ ಮಾಡಲು ಮುಂದಾಗಿದ್ದಾಳೆ.ತಾಯಿ ಮತ್ತು ಮಗ ಇಬ್ಬರೇ ಇರುವ ಕುಟಂಬದಲ್ಲಿ ದುಡಿಯುವರು ಯಾರು ಇಲ್ಲವಾಗಿದ್ದು ತಾಯಿಯೇ ಎಲ್ಲದಕ್ಕೂ ದಿಕ್ಕಾಗಿದ್ದಾರೆ. ಕಿಡ್ನಿ ಜೋಡಣೆಯ ಶಸ್ತ್ರ ಚಿಕಿತ್ಸೆಗೆ ಅಂದಾಜು 10 ಲಕ್ಷ ಖರ್ಚಾಗಲಿದ್ದು ತಾಯಿ ಮತ್ತು ಮಗ ತುಂಬ ಬಡ ಕುಟುಂಬದವರಾಗಿದ್ದು ಹಣವಿಲ್ಲದೆ ತೊಂದರೆಯಿಂದ ಪರದಾಡುತ್ತಿರುವುದು ತಾಲೂಕ ಆಸ್ಪತ್ರೆಯ ಆಡಳಿತ ವ್ಯೆದ್ಯಾಧಿಕಾರಿಗಳಾದ ಡಾ|| ರಾಜೇಶ ಕಿಣಿಯವರ ಗಮನಕ್ಕೆ ಬಂದಾಗ ಅವರು ತಮ್ಮ ಆಸ್ಪತ್ರೆಯ ವ್ಯೆದ್ಯರು ಮತ್ತು ಸಿಬ್ಬಂದಿಗಳಲ್ಲಿ ಹಾಗೂ ದಾನಿಗಳಲ್ಲಿ ಸಹಾಯ ಮಾಡುವಂತೆ ವಿನಂತಿಸಿದರು.

  ಅವರ ಮನವಿಗೆ ಸ್ಪಂದಿಸಿ ತಾಲೂಕ ಆಸ್ಪತ್ರೆಯ ವ್ಯೆದ್ಯರು ಮತ್ತು ಸಿಬ್ಬಂದಿಗಳು ಸೇರಿ 55,400 ನಗದು ಮತ್ತು 10,000 ಚಕ್ ಸೇರಿ ಒಟ್ಟು 65,400 ರೂ ಮೊತ್ತವನ್ನು ಹಾಗೂ ಬಾಲಕೃಷ್ಣ ಬಾಳೇರಿ ಮತ್ತು ಸ್ನೇಹಿತರು ನೀಡಿದ 35000 ನಗದು ಸೇರಿ ಒಟ್ಟು 1,00400 (ಒಂದು ಲಕ್ಷದ ನಾಲ್ಕು ನೂರು) ರೂ ಮೊತ್ತ ಒಟ್ಟಾಗಿತ್ತು. ಈ ಮೊತ್ತವನ್ನು ಆಡಳಿತ ವ್ಯೆದ್ಯಾಧಿಕಾರಿಗಳಾದ ಡಾ ರಾಜೇಶ ಕಿಣಿಯವರು ತೊಂದರೆಯಲ್ಲಿರುವ ತಾಯಿ ಮತ್ತು ಮಗನಿಗೆ ಹಸ್ತಾಂತರಸಿದ್ದರು.ಈ ಸಂದರ್ಭದಲ್ಲಿ ರಾಜ್ಯ ಸರಕಾರಿ ನೌಕರರ ಸಂಘ ಹೊನ್ನಾವರ ಶಾಖೆಯ ಉಪಾದ್ಯಕ್ಷರಾದ ಶ್ರೀ ಚಂದ್ರಶೇಖರ ಕಳಸ, ದಾನಿಗಳಾದ ಬಾಲಕೃಷ್ಣ ಬಾಳೇರಿ ಸ್ನೇಹಿತರು, ಡಾ|| ಗುರುದತ್ತ, ಶುಷ್ರುಶಕಿಯರು,ಮತ್ತು ಸಿಬ್ಬಂಧಿ ವರ್ಗ ಉಪಸ್ಥಿತರಿದ್ದರು. ಕಿಡ್ನಿ ಜೋಡಣೆಯ ಶಸ್ತ್ರಚಿಕಿತ್ಸೆ ಯಶ್ವಸಿಯಾಗಿ ನಡೆದು ತಾಯಿ ಮಗ ಇಬ್ಬರು ಆರೋಗ್ಯವಾಗಿರಲಿ ಎಂದು ಹಾರೈಸಿದ್ದಾರೆ.

  300x250 AD
  Share This
  300x250 AD
  300x250 AD
  300x250 AD
  Back to top