ಕಾರವಾರ: ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿಗಳ ಕಛೇರಿಯು Cultivation of Bomboo ಕಾರ್ಯಕ್ರಮದಡಿ ಪರಿಶಿಷ್ಟ ಪಂಗಡದ ರೈತರು ಬಿದಿರು ಕೃಷಿಯನ್ನು ಮಾಡಲು ಪ್ರತಿ ಎಕರೆಗೆ 18 ಸಾವಿರರೂಗಳಂತೆ ಮೂರು ವರ್ಷಗಳ ಕಾಲಾವಧಿಗೆ ಸಹಾಯಧನ ಒದಗಿಸುವ ಕಾರ್ಯಕ್ರಮಕ್ಕೆ ಅರ್ಜಿ ಆಹ್ವಾನಿಸಿದೆ.
ಆಸಕ್ತ ಅರ್ಹ ಪರಿಶಿಷ್ಟ ಪಂಗಡದ ರೈತರು ಅರ್ಜಿ ನಮೂನೆಯನ್ನು ಆಯಾ ತಾಲೂಕಿನ ಸಹಾಯಕ ನಿರ್ದೇಶಕರು, (ಗ್ರೇಡ್-1&2) ಸಮಾಜಕಲ್ಯಾಣ ಇಲಾಖೆಯಿಂದ ಪಡೆದು ದಾಖಲೆ ಸಹಿತ ಅಂದರೆ, ಜಮೀನು ಹೊಂದಿರುವ ಕುರಿತು ಆರ್‍ಟಿಸಿ/ಅರಣ್ಯ ಹಕ್ಕು ಅಧಿನಿಯಮದಡಿ ಹಕ್ಕುಪತ್ರ, ಆರ್‍ಡಿ ನಂಬರ್ ಹೊಂದಿರುವ ಜಾತಿ ಪ್ರಮಾಣ ಪತ್ರ, ಆಧಾರಕಾರ್ಡ, ಪ್ಯಾನ್‍ಕಾರ್ಡ, ರೇಷನ್‍ಕಾರ್ಡ, ಬ್ಯಾಂಕ್ ಪಾಸ್ ಬುಕ್ ಪ್ರತಿಯೊಂದಿಗೆಅರ್ಜಿ ಭರ್ತಿ ಮಾಡಿ ಜ.18 ರೊಳಗಾಗಿಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ತೇಲಿರಾಮ್‍ಜಿರಸ್ತೆ, ಶಾರದಾಕಟ್ಟಡ ಮೊದಲನೇ ಮಹಡಿ, ಕಾರವಾರ 581301 ವಿಳಾಸಕ್ಕೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿಗಳ ಕಛೇರಿ ಕಾರವಾರ ಅಥವಾ ದೂರವಾಣಿ ಸಂಖ್ಯೆ 08382-226575ಗೆ ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಲಕ್ಷಣ ಬಬಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.