ಸಿದ್ದಾಪುರ: ಸಿದ್ದಾಪುರದಲ್ಲಿ ಆರೋಗ್ಯ ಮತ್ತು ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ ನೀಡುವುದರ ಮೂಲಕ ಕೋವಿಡ್-19 ಮುನ್ನೆಚ್ಚರಿಕೆ ಡೋಸ್ ಲಸಿಕಾ ಕಾರ್ಯಕ್ರಮಕ್ಕೆ ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಚಾಲನೆ ನೀಡಿ, ಸಿದ್ದಾಪುರ ವಾಹನ ಚಾಲಕ-ಹಮಾಲರ ಟ್ರಸ್ಟ್ ಸಂಘ ಉದ್ಘಾಟಿಸಿ ಶುಭ ಕೋರಿದರು.
ತಲಾ 16 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಸಿದ್ದಾಪುರ ಪಟ್ಟಣ ಬಾಲಿಕೊಪ್ಪ ಅಂಗನವಾಡಿ ಕೇಂದ್ರವನ್ನು ಉದ್ಘಾಟಿಸಿದರು. ಹಾಗೂ ಬಿಳಗಿ ಅಂಗನವಾಡಿ ಕೇಂದ್ರ ಕಟ್ಟಡದ ಭೂಮಿ ಪೂಜೆ ನೆರವೇರಿಸಿದರು. ಹಾಗೂ 63 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸುತ್ತಿರುವ ಕ್ಯಾದಗಿ ಪಂಚಾಯತ ಬಿಳಗಿ-ನಿರಗಾಲ-ಕುಂಬಾರಕುಳಿ ಚಪ್ಪರಮನೆ ರಸ್ತೆ ಸೇತುವೆ ನಿರ್ಮಾಣದ ಭೂಮಿ ಪೂಜೆಯನ್ನು ನೆರವೇರಿಸಿ ಶುಭ ಕೋರಿದರು.