• Slide
    Slide
    Slide
    previous arrow
    next arrow
  • ಆನ್‍ಲೈನ್ ಚಿತ್ರಕಲಾ ಸ್ಪರ್ಧೆ; ಶ್ರೀನಿಕೇತನ ವಿದ್ಯಾರ್ಥಿಗಳ ಸಾಧನೆ

    300x250 AD

    ಶಿರಸಿ: ಶ್ರೀ ರಾಜರಾಜೇಶ್ವರೀ ವಿದ್ಯಾಸಂಸ್ಥೆ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ ಅಡಿಯಲ್ಲಿ ನಡೆಯುತ್ತಿರುವ ಶ್ರೀನಿಕೇತನ ಶಾಲೆಯ ಮಕ್ಕಳು ಜೆ.ಎಸ್.ಎಸ್. ಪಬ್ಲಿಕ್ ಸ್ಕೂಲ್ ಮಂಡ್ಯ ಅವರು ನಡೆಸಿದ ಆನ್‍ಲೈನ್ ಚಿತ್ರಕಲಾ ಸ್ಪರ್ಧೆ-2021 `ಕಲಾವೈಭವ’ ದಲ್ಲಿ ಭಾಗವಹಿಸಿ, 5 ನೇ ತರಗತಿಯ ವಿದ್ಯಾರ್ಥಿನಿಯಾದ ಧಾತ್ರಿ ಹೊರ್ಬೈಲ್ ಹಾಗೂ 2 ನೇ ತರಗತಿಯ ವಿದ್ಯಾರ್ಥಿಯಾದ ಚಿನ್ಮಯ ಆರ್. ಶೇಟ್ ಇಬ್ಬರೂ ತೃತೀಯ ಸ್ಥಾನವನ್ನು ಪಡೆದು ಶಾಲೆಗೆ ಕೀರ್ತಿಯನ್ನು ತಂದಿದ್ದಾರೆ.

    300x250 AD


    ಈ ಸ್ಪರ್ಧೆಯನ್ನು ಜಗದ್ಗುರು ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮೀಜಿಯವರ 106 ನೇ ಜಯಂತಿಯ ಅಂಗವಾಗಿ ಆಯೋಜಿಸಲಾಗಿತ್ತು. ಮಕ್ಕಳ ಈ ಸಾಧನೆಗೆ ಶಾಲಾ ಆಡಳಿತ ಮಂಡಳಿ, ಪ್ರಾಚಾರ್ಯರು, ಶಿಕ್ಷಕ-ಶಿಕ್ಷಕಿಯರು, ಪಾಲಕರು ಹಾಗೂ ಸಿಬ್ಬಂದಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top