• first
  second
  third
  Slide
  previous arrow
  next arrow
 • ಡಾ. ಎ. ವಿ. ಬಾಳಿಗಾ ಶಿಕ್ಷಣ ಸಂಸ್ಥೆಗೆ ಪ್ರಪ್ರಥಮ ಸಿ.ಎಸ್.ಆರ್. ಕೊಡುಗೆ

  300x250 AD

  ಕುಮಟಾ: ಡಾ. ಎ. ವಿ. ಬಾಳಿಗಾ ಕಲಾ ಮತ್ತು ವಿಜ್ಞಾನ ಕಾಲೇಜಿಗೆ ಪೂಣಾದ ಕೆ.ಟಿ.ಆರ್. ಕಪಲಿಂಗ್ (ಇಂಡಿಯಾ) ಪ್ರೈ ಲಿಮಿಟೆಡ್ ಇಂದ ಸುಮಾರು 25 ಲಕ್ಷ ರೂಪಾಯಿ ವೆಚ್ಚದ ಆಧುನಿಕ ಶೌಚಾಲಯ ಸಮುಚ್ಛಯದ ಭೂಮಿ ಪೂಜನ ಮತ್ತು ಭೂ ಖನನದ ಕಾರ್ಯಕ್ರಮವು ಜ.5 ರಂದು ವ್ಯವಸ್ಥಿತವಾಗಿ ಜರುಗಿತು.

  ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಹಾಗೂ ಕಾಲೇಜು ಸಿಬ್ಬಂದಿಗಳಿಗೆ ಪ್ರಯೋಜನವಾಗುವ ಅತ್ಯಾಧುನಿಕ ವ್ಯವಸ್ಥೆಯುಳ್ಳ ಈ ಸಮುಚ್ಛಯವುಕೆಲವೇ ತಿಂಗಳುಗಳಲ್ಲಿ ಪೂರ್ಣಗೊಳ್ಳಲಿದೆ. ಡಾ. ಎ. ವಿ. ಬಾಳಿಗಾ ಕಲಾ ಮತ್ತು ವಿಜ್ಞಾನಮಹಾವಿದ್ಯಾಲಯದ 1975-1977 ನೇ ಸಾಲಿನ ಪದವಿಪೂರ್ವ ವಿದ್ಯಾರ್ಥಿಯಾದ ಶಿರಗುಂಜಿಯ ಶ್ರೀ ಶಿವಶಂಕರ ಕೆ. ಪಿಕಳೆ ಪೂಣಾದ ಕಂಪನಿಯ ಮ್ಯಾನೇಜಿಂಗ್ ಡೈರೆಕ್ಟರ್ ಆಗಿದ್ದು ವಿಶೇಷ ಮುತುವರ್ಜಿ ವಹಿಸಿ ಈ ಕೊಡುಗೆಯನ್ನು ತನ್ನ ಮಾತೃಸಂಸ್ಥೆಗೆ ನೀಡಿರುವುದು ಅನುಕರಣೀಯ ಮತ್ತು ಅನುಸರಣೀಯ. ಇನ್ನುಮುಂದೆಯೂ ಇಂತಹ ಹಲವು ಸಿ.ಎಸ್.ಆರ್. ಯೋಜನೆಗಳನ್ನು ತನ್ನ ಮಾತೃ ಸಂಸ್ಥೆಗೆ ಕೊಡುವ ಅಭಿಪ್ರಾಯವನ್ನು ಶ್ರೀ ಪಿಕಳೆಯವರು ಆಶಯವನ್ನು ವ್ಯಕ್ತಪಡಿಸಿದರು. ಸಂಸ್ಥೆಯವರು ಅವರಿಗೆ ಧನ್ಯತೆಯನ್ನು ಅರ್ಪಿಸಿದ್ದಾರೆ.

  300x250 AD

  ಭೂ ಪೂಜನ ಮತ್ತು ಭೂ ಖನನವನ್ನು ಮಾಡುವ ಪೂರ್ವದಲ್ಲಿ ಪ್ರಾಕಾರದಲ್ಲಿ ಇರುವ ಜಾಗೃತ ಶಕ್ತಿ ವನದೇವತೆಯಾದ ಶ್ರೀ ನಾಗಚಾಮುಂಡೇಶ್ವರಿ ದೇವಿಯ ವಿಶೇಷ ಪೂಜೆ ಹಾಗೂ ಪ್ರಾರ್ಥನೆಯೊಂದಿಗೆ ಶುಭಾರಂಭಗೊಂಡ ಈ ಕಾರ್ಯಕ್ರಮವು ಕೆನರಾ ಕಾಲೇಜು ಸೊಸೈಟಿಯ ಉಪಾಧ್ಯಕ್ಷರಾದ ಶ್ರೀ ಪುರುಷೋತ್ತಮ ಮುಕುಂದ ಶಾನಭಾಗ ಹೆಗಡೇಕರರ ಯಜಮಾನತ್ವದಲ್ಲಿ ಜರುಗಿತು. ನೂರಾರು ಅಭಿಮಾನಿ ಬಳಗ, ಸೊಸೈಟಿ ಹಾಗೂ ಟ್ರಸ್ಟಿನ ಸದಸ್ಯರು ಎಲ್ಲಾ ಮಹಾವಿದ್ಯಾಲಯಗಳ ಸಿಬ್ಬಂದಿಗಳು ಈ ಕಾರ್ಯಕ್ರಮಕ್ಕೆ ಸಾಕ್ಷಿಗಳಾದರು.

  Share This
  300x250 AD
  300x250 AD
  300x250 AD
  Back to top