ಅಂಕೋಲಾ : ಕಾಡು ಹಂದಿ ಹೊಡೆದು ಮನೆಯಲ್ಲಿ ಬೆಯಿಸುತ್ತಿರುವ ಸಂದರ್ಭದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಖಚಿತ ಮಾಹಿತಿ ಮೆರೆಗೆ ದಾಳಿ ನಡೆಸಿ ಕಾಡು ಹಂದಿ ಮಾಂಸದ ಜೊತೆಗೆ ಮೂವರು ಆರೋಪಿಗಳನ್ನು ಬಂಧಿಸಿದ ಘಟನೆ ತಾಲೂಕಿನ ಅಗಸೂರು ಗ್ರಾ.ಪಂ ವ್ಯಾಪ್ತಿಯ ಈರಾನ ಮೂಲೆಯಲ್ಲಿ ನಡೆದಿದೆ.
ಈರಾನ ಮೂಲೆ ಗ್ರಾಮದ ನಿವಾಸಿಗಳಾದ ಲಕ್ಷ್ಮಣ ರಾಕು ಗೌಡ, ಶಾಂತಾ ಗಣಪತಿ ಗೌಡ, ಗಣಪತಿ ಸುಕ್ರು ಗೌಡ ಬಂದಿತ ಆರೋಪಿಗಳು. ವನ್ಯಜೀವಿ ಸಂರಕ್ಷಣಾ ಖಾಯಿದೆ 1972ರ ಅಡಿ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಆರೋಪಿಗಳನ್ನು ಹಾಜರು ಪಡಿಸಲಾಗಿದೆ.
ಕಾಡು ಹಂದಿಯ ಮಾಂಸ , ತಲೆಬಾಗ , ದೇಹ ಮತ್ತು ಹಂದಿ ಹಿಡಿಯಲು ಬಳಸಿದ ತಂತಿಯ ಉರುಳನ್ನು ವಶಕ್ಕೆ ಪಡೆದಿದ್ದಾರೆ.
ಡಿಎಪ್ಓ ವಸಂತ ರೆಡ್ಡಿ , ಎಸಿಎಪ್ ಮಂಜುನಾಥ ನಾವಿ ಮಾರ್ಗದರ್ಶನದಲ್ಲಿ ಆರ್ಎಪ್ಓ ರಾಘವೇಂದ್ರ ಮಳ್ಳಪ್ಪನವರ ಡಿಆರ್ಎಪ್ಓಗಳಾದ ಮಲ್ಲಿಕಾರ್ಜುನ ಅಂಗಡಿ, ರಾಘವೇಂದ್ರ ಜೀರಗಾಳೆ, ರತೀಶ ನಾಯಕ, ಗೌಡಪ್ಪ ಅಂಗಡಿ, ಅರುಣ ನಡುಕಟ್ಟಿನ, ಅರಣ್ಯ ರಕ್ಷಕರಾದ ವೆಂಕಟೇಶ ಗುತ್ತೇಗಾರ, ಅಬಲಪ್ಪಾ ರುದ್ರಪ್ಪ ಪಾಟೀಲ್, ಪ್ರಶಾಂತ , ಚೆನ್ನಪ್ಪ ಲಮಾಣ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.