ಮುಂಡಗೋಡ: ತಾಲೂಕಿನ ಮಳಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಗಾಂವಠಾಣ ಜಾಗವನ್ನು ಕೆಲವರು ಆಕ್ರಮಿಸಿಕೊಂಡಿದ್ದು ಅದನ್ನು ತೆರವುಗೊಳಿಸಿಕೊಡುವಂತೆ ಒತ್ತಾಯಿಸಿ ಸಾರ್ವಜನಿಕರು ಗ್ರಾಮ ಪಂಚಾಯಿತಿ ಮೂಲಕ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.
ತಾಲೂಕಿನ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಲವಾರು ವರ್ಷಗಳಿಂದ ಕೆಲವರು ಅತಿಕ್ರಮಣ ಮಾಡಿಕೊಂಡಿದ್ದಾರೆ ನಿವೇಶನ ರಹಿತ ಬಡಜನರಿಗೆ ಮನೆಗಳನ್ನು ನಿರ್ಮಿಸಿಕೊಳ್ಳಲು ಹಂಚಿಕೆಯಾಗಬೇಕಿದ್ದ ಈ ಗಾಂವಠಾಣ ಜಾಗವನ್ನು ಸರ್ವೆ ಮಾಡಿಸಿ ನಮಗೆ ನಕಾಶೆ ನೀಡಬೇಕು. ಹಾಗೂ ಗ್ರಾಮ ಪಂಚಾಯಿತಿಯ ವತಿಯಿಂದ ಅತಿಕ್ರಮಣ ಮಾಡಿರುವ ಕಾಣಿಸುವಂತೆ ನೂರಾರು ಜನರು ಸಹಿ ಹಾಕಿರುವ ಮನವಿ ನೀಡಿದ್ದಾರೆ.
ಕೊಳಗಿ ಗ್ರಾಮದ ಸನಂ 70ಕ್ಕೆ ತಾಗಿರುವ ಗಾಂವಠಾಣ ಮಳಗಿ ಸನಂ 54 ರ ಪಕ್ಕದಲ್ಲಿರುವ ಗಾಂವಠಾಣ ಹಾಗೂ ಸನಂ 55ಕ್ಕೆ ತಾಗಿರುವ ಗಾಂವಠಾಣ ಕೊಳಗಿ ಜಂಬೇ ಕೆರೆ, ಧರ್ಮ ಕಾಲೋನಿ ಸೇರಿದಂತೆ ಈ ಪಂಚಾಯಿತಿ ವ್ಯಾಪ್ತಿಯಲ್ಲಿ ಇರುವ ಗಾಂವಠಾಣ ಜಾಗವನ್ನು ಅತಿಕ್ರಮಣ ಮಾಡಿಕೊಂಡಿದ್ದಾರೆ. ಗ್ರಾಮ ಪಂಚಾಯಿತಿ ಅವರಿಗೆ ಹಲವಾರು ಬಾರಿ ಮೌಖಿಕವಾಗಿ ಅತಿಕ್ರಮಣ ವಾಗಿರುವ ಗೌಠಾಣ ತೆರವುಗೊಳಿಸುವಂತೆ ತಿಳಿಸಿದರೂ ಸಹ ಯಾವುದೇ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ವಹಿಸಿದ್ದಾರೆ ಕೂಡಲೇ ಗಾಂವಠಾಣ ಜಾಗವನ್ನು ತೆರವುಗೊಳಿಸಿ ಬಡ ಜನರಿಗೆ ನಿವೇಶನ ಹಂಚಿಕೆ ಮಾಡಬೇಕು ಆದ್ದರಿಂದ ಗಾಂವಠಾಣ ಜಾಗವನ್ನು ಸರ್ವೆ ಮಾಡಿ ನಕ್ಷೆ ನೀಡುವಂತೆ ಅವರು ಮಳಗಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರದೀಪ್ ಕೊಳಗಿ ಹಾಗೂ ಪಿಡಿಒ ಅಣ್ಣಪ್ಪ ಒಡ್ಡರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸುಧೀರ ಪಾಟೀಲ ಎಚ್.ಸಿ.ಹಿರೇಮಠ ವಸಂತ ಪಾಟೀಲ್ ಆನಂದ ಪೂಜಾರಿ ವಡಕಪ್ಪ ನೇಗೊಣಿ ಅಶೋಕ ದೈವಜ್ಞ ಉಮೇಶ ಹಾರೊಳ್ಳಿ ಗುರುಲಿಂಗ ಮಲಗುಂದ ಸೇರಿದಂತೆ ನೂರಾರು ಜನರು ಮನವಿ ಪತ್ರಕ್ಕೆ ಸಹಿ ಹಾಕಿದ್ದಾರೆ.